ಫೋಷಕರ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವುದು ಮಕ್ಕಳ ಪ್ರಮುಖ ಕರ್ತವ್ಯ ಎಂದು ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಫೋಷಕರ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವುದು ಮಕ್ಕಳ ಪ್ರಮುಖ ಕರ್ತವ್ಯ ಎಂದು ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ಕಾಮಧೇನು ಕನ್ವನ್ಷನ್ ಹಾಲ್‌ನಲ್ಲಿ ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಮತ್ತು ಜಗ್ಗೇಶ್ ಅಭಿಮಾನಿಗಳ ಸಂಘ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.ಪೋಷಕರು ನಡೆಸಿದ ಆದರ್ಶ ಜೀವನವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಯಾಗಿ ಬದುಕು ನಡೆಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದ ಶ್ರೀಗಳು, ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸಿದರೆ ಅವರ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಆದರ್ಶವಾ ಗುತ್ತದೆ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿದರು.ಸಿಪಿಐ ಅನಿಲ್ ತೊರವಿನಕೆರೆ ಪದ್ಮರಾಜ್, ಎಂ.ಜಿ.ಸುಧೀರ್, ಕೆ.ಎನ್.ರಘು, ರಂಗಧಾಮಯ್ಯ, ಯಶಸ್ಸ್ ಕೆ.ಪದ್ಮನಾಭ್, ಕೆ.ವಿ.ಪುರುಷೊತ್ತಮ್, ಪಿಎಸೈ ತೀಥೇಶ್, ಕೆ.ಎನ್.ರವಿಕುಮಾರ್, ಡಿ.ಎಲ್.ಮಲ್ಲಣ್ಣ, ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷ ಭೀಮರಾಜು, ಕೆ.ವಿ.ಮಂಜುನಾಥ್, ರಾಘವೆಂದ್ರ, ಮಹೇಶ್, ಶಂಕರ್, ಸೋಮ, ಪ್ರದೀಪ್ ಇತರರಿದ್ದರು.