ನಾಪೋಕ್ಲು ಲಯನ್ಸ್ ಕ್ಲಬ್‌ನಿಂದ ಫುಡ್ ಕಿಟ್ ವಿತರಣೆ

| Published : Oct 11 2025, 12:03 AM IST

ಸಾರಾಂಶ

ಹಸಿವು ಮುಕ್ತ ಸಮಾಜ ಕಾರ್ಯಕ್ರಮದಡಿ ಬಡ 10 ಕುಟುಂಬಗಳಿಗೆ ಫುಡ್‌ ಕಿಟ್‌ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಹಸಿವು ಮುಕ್ತ ಸಮಾಜ ಕಾರ್ಯಕ್ರಮದಡಿ ಬಡ 10ಕುಟುಂಬಗಳಿಗೆ ಫುಡ್ ಕಿಟ್ ಗಳನ್ನು ವಿತರಿಸಲಾಯಿತು.

ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಎಂ.ಬಿ ಕುಟಪ್ಪ ಅವರ ಅಧ್ಯಕ್ಷತೆಯಲ್ಲಿ ಹಸಿವು ಮುಕ್ತ ಸಮಾಜ ಅಭಿಯಾನ ಅಂಗವಾಗಿ ಇಲ್ಲಿಯ ಮಹಿಳಾ ಸಮಾಜದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ಥಳೀಯ ಬಡ ಹತ್ತು ಕುಟುಂಬಗಳಿಗೆ ಪ್ರತ್ಯೇಕವಾಗಿ ಒಂದು ತಿಂಗಳಿಗೆ ಬೇಕಾಗುವ ಅಕ್ಕಿ ಹಾಗೂ ಇದರ ಪದಾರ್ಥಗಳನ್ನು ಒಳಗೊಂಡ ಕಿಟ್ ಮತ್ತು ಬ್ಲಾಂಕೆಟ್ ವಿತರಿಸಲಾಯಿತು.

ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಡಾ.ಪಂಚಮ್ ತಿಮ್ಮಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿಭೀಮಯ್ಯ, ಖಜಾಂಚಿ ವಸಂತ ಮುತ್ತಪ್ಪ, ಸುಧಿ ತಿಮ್ಮಯ್ಯ , ರೇಷ್ಮಾ ಉತ್ತಪ್ಪ, ರಘು ತಿಮ್ಮಯ್ಯ , ಮೇರಿ ಚೆಟ್ಟಿಯಪ್ಪ, ಶುಭಾಷ್ ತಿಮ್ಮಯ್ಯ , ರೇಖಾ ಪೊನ್ನಣ್ಣ ಉಪಸ್ಥಿತರಿದ್ದರು.