ಗುಂಡ್ಯಡ್ಕ ರುಕ್ಮಿಣಿ ಪಾಂಡುರಂಗ ಸಭಾಭವನದಲ್ಲಿ ನಡೆದ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಶ್ರೀನಿವಾಸಪುರ, ಗುಂಡ್ಯಡ್ಕದ 58ನೇ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಆಳ್ವಾಸ್ ಆಯುರ್ವೇದಿಕ್ ಕಾಲೇಜಿನ ಉಪನ್ಯಾಸಕ ಡಾ. ಸುಬ್ರಹ್ಮಣ್ಯ ಪದ್ಯಾಣ ಅವರು ಆರೋಗ್ಯಕರ ಜೀವನಕ್ಕೆ ಬೇಕಾಗುವ ಆಹಾರ ಪದ್ಧತಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಮೂಲ್ಕಿ: ಗುಂಡ್ಯಡ್ಕ ರುಕ್ಮಿಣಿ ಪಾಂಡುರಂಗ ಸಭಾಭವನದಲ್ಲಿ ನಡೆದ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಶ್ರೀನಿವಾಸಪುರ, ಗುಂಡ್ಯಡ್ಕದ 58ನೇ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಆಳ್ವಾಸ್ ಆಯುರ್ವೇದಿಕ್ ಕಾಲೇಜಿನ ಉಪನ್ಯಾಸಕ ಡಾ. ಸುಬ್ರಹ್ಮಣ್ಯ ಪದ್ಯಾಣ ಅವರು ಆರೋಗ್ಯಕರ ಜೀವನಕ್ಕೆ ಬೇಕಾಗುವ ಆಹಾರ ಪದ್ಧತಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಗತ ವರ್ಷದಲ್ಲಿ ಕೀರ್ತಿಶೇಷರಾದ ಸಮಾಜ ಬಾಂಧವರನ್ನು ಸ್ಮರಿಸಿ , ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮಾಜದ ಹಿರಿಯರಾದ ಕೇಮಾರು ಮಹಾದೇವ ಭಟ್ಟ ಹಾಗೂ ಆಶಾ. ಆರ್.ಭಟ್, ಮುಂಡ್ಕಿನಜಡ್ಡು ಅವರನ್ನು ಗೌರವಿಸಲಾಯಿತು. ಕರಾಡ ಸಮಾಜದ ವಂಶಾವಳಿ ಸಂಗ್ರಾಹಕ ಮಾಧವ್ ಭಟ್ ಅಂಬೇಕರ್ , ಬೆಂಗಳೂರು, ಶಾಸ್ತ್ರೀಯ ಸೂಜಿ ಚಿಕಿತ್ಸಾ ತಜ್ಞೆ ವೇದಾವತಿ ಪರಾಡ್ಕರ್ ಕೇಮಾರು , ಕೃತಕ ಬುದ್ಧಿಮತ್ತೆ (ಎಐ) ವಿಷಯದಲ್ಲಿ ಪದವಿ ಗಳಿಸಿದ ಡಾ. ರಂಜಿತ್ ಭಟ್ ಕಾರ್ಕಳ, ಸಿಎ ಪದವಿಗಳಿಸಿದ ಮಾಸ್ಟರ್ ರೋಹಿತ್ ಪರಾಡ್ಕರ್ ಹಾಗೂ ನೇಹಾ ಗುರ್ಜರ್ ಅವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು.

ಅಧಿಕ ಅಂಕಗಳಿಸಿದ್ದ ಶ್ರವಣ್ ಪಂಡಿತ್, ಅನಿರುದ್ಧ್ ಭಾಟೆ, ಸುಧನ್ಯ ದೇವಜಿ ಮೇಧಾ ಜಿ ಪರಾಡ್ಕರ್, ಶ್ರಾವ್ಯ ಪಿ ಪರಾಡ್ಕರ್ , ನಿಶಾಂತ್ ಭಟ್ ಅವರನ್ನು ನಗದು ಪುರಸ್ಕಾರಗಳೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಸಂದೀಪ್‌ ಕೆ , ಅನಿರುದ್ಧ ಭಾಟೆ, ಶ್ರಾವ್ಯಾ ಪಿ ಪರಾಡ್ಕರ್, ಶ್ರೀಕುಮಾರ್ ಡಿ , ಸಿಂಚನ , ಕಾವ್ಯಶ್ರೀ ಸಂತೋಷ್ ಕೆ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಅಧ್ಯಕ್ಷ ರಾಮಚಂದ್ರ ಭಟ್ ನಾಟೇಕರ್, ವಿಠೋಭ ರುಕುಮಾಯಿ ದೇವಸ್ಥಾನದ ನೂತನ ಅಧ್ಯಕ್ಷ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಪರಾಡ್ಕರ್, ಯರ್ಫಲೆ , ಸಂಘದ ಮಾಜಿ ಅಧ್ಯಕ್ಷ ರಮಾನಂದ ಪಂಡಿತ್ ಜಾಯಿಲೆ, ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ ಕೋಶಾಧಿಕಾರಿ ಚಂದ್ರಹಾಸ ಕನ್ನಡ್ಕ, ಸಂಘದ ಕೋಶಾಧಿಕಾರಿ ಪ್ರಭಾಕರ ಭಾಟೆ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ರಾಮಚಂದ್ರ ಪಂಡಿತ್ ಸ್ವಾಗತಿಸಿದರು. ಸುನಿತಾ ಚಿಂಚಲ್ಕರ್ ಕೊಪ್ಪಂದಡ್ಕ ವಂದಿಸಿದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಕಟೀಲು, ಶಿಕ್ಷಕಿ ಚಿತ್ರಾಶ್ರೀ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.