ಮೋದಿ ಆಶಯದಂತೆ ಆಹಾರ ಸಂಸ್ಕರಣಾ ಖಾತೆ: ಶೋಭಾ ಕರಂದ್ಲಾಜೆ

| Published : Dec 10 2023, 01:30 AM IST

ಮೋದಿ ಆಶಯದಂತೆ ಆಹಾರ ಸಂಸ್ಕರಣಾ ಖಾತೆ: ಶೋಭಾ ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಸಂಸ್ಕರಣೆ ಉದ್ಯಮ ಎನ್ನುವುದು ಪ್ರಧಾನಿ ಮೋದಿ ಅವರ ಹೊಸ ಕಲ್ಪನೆ, ಇದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಅದಕ್ಕಾಗಿ ಆಹಾರ ಸಂಸ್ಕರಣೆ ಎಂಬ ಖಾತೆಯನ್ನೇ ರಚಿಸಿ ಅದಕ್ಕೆ ಆರಂಭದಲ್ಲಿಯೇ 800 ಕೋಟಿ ರು.ಗಳ ಅನುದಾನ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

ಉಡುಪಿ: ಆಹಾರ ಸಂಸ್ಕರಣೆ ಉದ್ಯಮ ಎನ್ನುವುದು ಪ್ರಧಾನಿ ಮೋದಿ ಅವರ ಹೊಸ ಕಲ್ಪನೆ, ಇದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಅದಕ್ಕಾಗಿ ಆಹಾರ ಸಂಸ್ಕರಣೆ ಎಂಬ ಖಾತೆಯನ್ನೇ ರಚಿಸಿ ಅದಕ್ಕೆ ಆರಂಭದಲ್ಲಿಯೇ 800 ಕೋಟಿ ರು.ಗಳ ಅನುದಾನ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೃಷಿ ಇಲಾಖೆ ಮತ್ತು ಆಹಾರ ಸಂಸ್ಕರಣಾ ಉದ್ಯಮ ಒಟ್ಟಾಗಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗಿ ಈಗ ಸಾಕಾರ ಆಗುವ ದಿನ ಬಂದಿದೆ. ಕೃಷಿ ಉತ್ಪನ್ನ ಮತ್ತು ಮೀನು ಸಂಸ್ಕರಣೆ ಮಾಡಿ, ಅದರ ಗುಣಮಟ್ಟವನ್ನು ಹೆಚ್ಚಿಸಬೇಕು ಮತ್ತು ರಪ್ತು ಮಾಡಬೇಕು. ಇದರಿಂದ ರೈತರ ಮತ್ತು ಮೀನುಗಾರರ ಆದಾಯ ಹೆಚ್ಚುತ್ತದೆ. ಅದಕ್ಕಾಗಿ ದೇಶದಲ್ಲಿ ಸಂಶೋಧನಾ ಸಂಸ್ಥೆಯನ್ನೂ ಕೂಡ ಆರಂಭಿಸಲಾಗಿದೆ ಎಂದರು.

ಕೊರೋನಾ ಕಾಲದಲ್ಲಿ ಅಮೆರಿಕದಲ್ಲಿದ್ದ ಯುವಕ ಭಾರತಕ್ಕೆ ಬಂದು ಮಾವಿನ ಹಣ್ಣಗಳನ್ನು ಸಂಸ್ಕರಣೆ ಮಾಡುವ ಉದ್ಯಮದಿಂದ 40 ಕೋಟಿ ರು. ಸಂಪಾದನೆ ಮಾಡಿ ಯಶಸ್ವಿಯಾಗಿದ್ದಾನೆ ಎಂದು ಉದಾಹರಿಸಿದ ಶೋಭಾ ಕರಂದ್ಲಾಜೆ, ಪ್ರಧಾನಿ ಅಪೇಕ್ಷೆ ಈಡೇರಿಸಲು ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇನೆ, ಕಡಿಮೆ ಅವಧಿ ಸಿಕ್ಕಿದೆ, ಎರಡು ತಿಂಗಳಲ್ಲಿ ಕೆಲವಾರು ಕೆಲಸ- ಚರ್ಚೆಗಳನ್ನು ನಡೆಸಬೇಕಾಗಿದೆ. ಅನಂತರ ಚುನಾವಣೆ ಬರುತ್ತದೆ ಎಂದರು.