ಸಾರಾಂಶ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ಗಳಾದ ಹೋಟೆಲ್ ಮಯೂರ ವೇಲಾಪುರಿ, ಹೋಟೆಲ್ ಮಯೂರ ಯಗಚಿ ಹಾಗೂ ಮಯೂರ ಶಾಂತಲಾ ಹಳೇಬೀಡು ಘಟಕಗಳಿಗೆ, ಹಾಸನ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳಾದ ಬಸವೇಗೌಡ ಮತ್ತು ತಂಡ ಭೇಟಿ ನೀಡಿ ಆಹಾರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿತು. ಅಡುಗೆ ಕೋಣೆ ಉಗ್ರಾಣ ಹಾಗೂ ಉಪಹಾರ ಗೃಹ ಇವುಗಳನ್ನು ಪರಿಶೀಲಿಸಿ ಕೆಲ ಸಲಹೆ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದರು. ಮೂರು ಹೋಟೆಲ್‌ಗಳ ಸ್ವಚ್ಛತೆ ಮತ್ತು ಆಹಾರ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ಪಟ್ಟಣದ ಶ್ರೀ ಚೆನ್ನಕೇಶವ ಸ್ವಾಮಿ ದೇಗುಲ ರಸ್ತೆಯಲ್ಲಿರುವ ಮಯೂರ ಹೋಟೆಲ್ ಸೇರಿದಂತೆ ಮಯೂರ ಯಗಚಿ, ಹಳೇಬೀಡು ಶಾಂತಲಾ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿನೆ ನಡೆಸಿ ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ಗಳಾದ ಹೋಟೆಲ್ ಮಯೂರ ವೇಲಾಪುರಿ, ಹೋಟೆಲ್ ಮಯೂರ ಯಗಚಿ ಹಾಗೂ ಮಯೂರ ಶಾಂತಲಾ ಹಳೇಬೀಡು ಘಟಕಗಳಿಗೆ, ಹಾಸನ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳಾದ ಬಸವೇಗೌಡ ಮತ್ತು ತಂಡ ಭೇಟಿ ನೀಡಿ ಆಹಾರ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿತು. ಅಡುಗೆ ಕೋಣೆ ಉಗ್ರಾಣ ಹಾಗೂ ಉಪಹಾರ ಗೃಹ ಇವುಗಳನ್ನು ಪರಿಶೀಲಿಸಿ ಕೆಲ ಸಲಹೆ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದರು. ಮೂರು ಹೋಟೆಲ್‌ಗಳ ಸ್ವಚ್ಛತೆ ಮತ್ತು ಆಹಾರ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ತಪಾಸಣೆ ಸಂದರ್ಭದಲ್ಲಿ ಘಟಕದ ವ್ಯವಸ್ಥಾಪಕರುಗಳಾದ ಪಾಪಣ್ಣ ಹಾಗೂ ಶ್ರೇಯಸ್ ಮತ್ತು ಘಟಕದ ಸಿಬ್ಬಂದಿ ಇದ್ದರು.