ಮಹಾಜನ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪೂರ್ವ ಪರಿಚಯ ಕಾರ್ಯಕ್ರಮ

| Published : Aug 15 2024, 01:57 AM IST

ಸಾರಾಂಶ

ಅತ್ಯುನ್ನತ ಶೈಕ್ಷಣಿಕ ಗುಣಮಟ್ಟದ ಕಾರಣಕ್ಕಾಗಿ ನಮ್ಮ ಕಾಲೇಜಿಗೆ ನ್ಯಾಕ್ ನಿಂದ ಎ ಮಾನ್ಯತೆ ಹಾಗೂ ಸ್ವಾಯತ್ತತೆ ದೊರಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಪದವಿ ಪ್ರೊಗ್ರಾಂಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪೂರ್ವ ಪರಿಚಯ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಅತ್ಯುನ್ನತ ಶೈಕ್ಷಣಿಕ ಗುಣಮಟ್ಟದ ಕಾರಣಕ್ಕಾಗಿ ನಮ್ಮ ಕಾಲೇಜಿಗೆ ನ್ಯಾಕ್ ನಿಂದ ಎ ಮಾನ್ಯತೆ ಹಾಗೂ ಸ್ವಾಯತ್ತತೆ ದೊರಕಿದೆ. ಇದಕ್ಕೆ ಪೂರಕವಾಗಿ ವಿದ್ಯಾಸಂಸ್ಥೆಯು ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಿದೆ. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ನೀಡುತ್ತಿದೆ ಎಂದರು.

ಕಾಲೇಜು ಕೊಡುವ ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕಾಲೇಜಿನ ವಿದ್ಯಾರ್ಥಿ ಸಂಸತ್ ಮೂಲಕ ಒದಗುವ ಅವಕಾಶಗಳನ್ನು ಬಳಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಕೇವಲ ತರಗತಿ ಕಲಿಕೆಗೆ ಮಾತ್ರ ಪ್ರಾಮುಖ್ಯತೆ ಕೊಡದೆ ಕಾಲೇಜು ನೀಡುವ ಹಲವಾರು ಮೌಲ್ಯವರ್ಧಿತ ಕೋರ್ಸ್‌ ಗಳಿಗೆ ಸೇರಿಕೊಂಡು ನೈಪುಣ್ಯ ವರ್ಧನೆ ಆಧಾರಿತ ಶಿಕ್ಷಣದ ನೀತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಆಂಗ್ಲ ವಿಭಾಗದ ಮುಖ್ಯಸ್ಥೆ ಡಿ. ಗೀತಾ, ಶೈಕ್ಷಣಿಕ ಡೀನ್‌ ಡಾ.ಎಚ್. ಶ್ರೀಧರ, ಹಿಂದಿ ವಿಭಾಗದ ಮುಖ್ಯಸ್ಥ ಪರಮೇಶ್ವರ ಹೆಗ್ಡೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಅವರು ಕಾಲೇಜಿನ ಸೌಲಭ್ಯ ಮತ್ತು ನಿಯಮಗಳ ಕುರಿತು ವಿವರಿಸಿದರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎಚ್.ಎನ್. ಭಾಸ್ಕರ್‌, ಪಿ. ಮಧುಸೂಧನ್, ಎನ್‌.ಸಿ.ಸಿ ಏರ್‌ ವಿಂಗ್‌ ಆಫೀಸರ್‌ ಡಾ.ಪಿ.ಜಿ. ಪುಷ್ಪರಾಣಿ, ಡಾ.ಎಂ.ಆರ್. ಇಂದ್ರಾಣಿ, ಸುನಿತಾ, ಡಾ.ಬಿ.ಆರ್. ಅನಿತಾ ಮೊದಲಾದವರು ಇದ್ದರು.