ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ಗೆದೊಡ್ಡಬಳ್ಳಾಪುರದ ಯೋಗಪಟುಗಳು ಆಯ್ಕೆ

| Published : Oct 14 2024, 01:25 AM IST

ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ಗೆದೊಡ್ಡಬಳ್ಳಾಪುರದ ಯೋಗಪಟುಗಳು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ಮತ್ತು ಹಿಮಾಚಲ ಪ್ರದೇಶ ಯೋಗ ಅಸೋಸಿಯೇಷನ್‌ ಆಶ್ರಯದಲ್ಲಿ ಇದೇ 24ರಿಂದ 27ರವರೆಗೆ ಹಿಮಾಚಲ ಪ್ರದೇಶದ ಊನ ಜಿಲ್ಲೆಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌‌ಷಿಪ್-2024ಗೆ ದೊಡ್ಡಬಳ್ಳಾಪುರದ ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ, ಯಶ್ವಿನ್.ಎಸ್, ಕುಶಲ್ ಎಸ್, ನೀರಜ್ ಎಲ್, ಶಶಾಂಕ್ ಪಿ.ಎಸ್, ಕೆ ಎನ್.ವಿಶ್ವನಾಥ್, ಬಾಲಕಿಯರ ವಿಭಾಗದಲ್ಲಿ ಎಸ್.ಅಪೂರ್ವ, ಎನ್ ಖುಷಿಪ್ರಿಯ, ಗೌತಮಿ.ಹೆಚ್.ಆರ್, ಯಶಸ್ವಿನಿ.ಟಿ, ಹಿತಶ್ರೀ ಕೆ.ಎಂ, ಮಧುಶಾಲಿನಿ.ಡಿ.ಎಸ್, ಎಂ.ಆರ್.ಜಾಹ್ನವಿ ಆಯ್ಕೆಯಾಗಿದ್ದಾರೆ.

ಅದೇ ರೀತಿ ಕರ್ನಾಟಕ ರಾಜ್ಯ ಬಾಲಕಿಯರ ತಂಡದ ನಾಯಕಿಯಾಗಿ ಎಂ ಆರ್ ಜಾಹ್ನವಿ ಮತ್ತು ಬಾಲಕರ ತಂಡದ ಮ್ಯಾನೇಜರ್ ಆಗಿ ಎಸ್ ಸಿ ಶಿವಕುಮಾರ್ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಯೋಗಪಟುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೇಚುರ್ ಯೋಗ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಅಮರನಾಥ್, ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಕೆ.ಆರ್.ಶ್ಯಾಮಸುಂದರ್, ಎಚ್.ಆರ್.ಪುಷ್ಪಕ್ ರವೀಂದ್ರ ಮತ್ತು ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ಯೋಗಪಟುಗಳು ಅಭಿನಂದಿಸಿದ್ದಾರೆ.

13ಕೆಡಿಬಿಪಿ1- ಹಿಮಾಚಲದಲ್ಲಿ ನಡೆವ 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌‌ಷಿಪ್-2024ಗೆ ದೊಡ್ಡಬಳ್ಳಾಪುರದ ಇಲ್ಲಿನ ನಿಸರ್ಗ ಯೋಗ ಕೇಂದ್ರ (ರಿ)ನ ಯೋಗಪಟುಗಳು ಆಯ್ಕೆಯಾಗಿದ್ದಾರೆ.