ವಿಶೇಷಚೇತನರ ಹೋರಾಟಕ್ಕೆ ಸಂದೇಶ ಸ್ವಾಮಿ ಬೆಂಬಲ

| Published : Apr 28 2025, 12:48 AM IST

ವಿಶೇಷಚೇತನರ ಹೋರಾಟಕ್ಕೆ ಸಂದೇಶ ಸ್ವಾಮಿ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 6 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದರೂ ಸ್ಪಂದಿಸದಿರುವುದು ಮಾನವೀಯತೆಯಲ್ಲ. ಸರ್ಕಾರ ಕೂಡಲೇ ವಿಕಲಚೇತನರ ಬೇಡಿಕೆ ಈಡೇರಿಸಲಿ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಳೆದ 6 ದಿನಗಳಿಂದ ಕರ್ನಾಟಕ ರಾಜ್ಯದ ವಿವಿಧ ವಿಶೇಷಚೇತನರ ಸಂಘಟನೆಗಳ ನಿರಂತರ ಧರಣಿ ಸ್ಥಳಕ್ಕೆ ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಶನಿವಾರ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿಶೇಷಚೇತನರನ್ನು ಸಂಪೂರ್ಣ ಕಡೆಗಣಿಸಿದ್ದು, ಕಳೆದ 6 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದರೂ ಸ್ಪಂದಿಸದಿರುವುದು ಮಾನವೀಯತೆಯಲ್ಲ. ಸರ್ಕಾರ ಕೂಡಲೇ ವಿಕಲಚೇತನರ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದರು.ಅಂಗವಿಕಲರ ನೋವನ್ನು ಆಲಿಸಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಹಾಯ ಧನ ನೀಡಿದರು. ಬಿಜೆಪಿ ಎನ್.ಆರ್. ಕ್ಷೇತ್ರದ ಅಧ್ಯಕ್ಷ ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯ ಸಾತ್ವಿಕ್ , ಮುಖಂಡರಾದ ಮುರಳಿ, ಭಾನುಪ್ರಕಾಶ್, ವೇಲು, ಶೇಖರ್ ಮೊದಲಾದವರು ಇದ್ದರು.