ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗೆ ಶಿಸ್ತು ಎಷ್ಟು ಮುಖ್ಯವೋ, ಕ್ರೀಡಾ ಸ್ಫೂರ್ತಿಯೂ ಅಷ್ಟೇ ಮುಖ್ಯ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಎನ್.ಸತೀಶಕುಮಾರ ತಿಳಿಸಿದರು.

- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪದಲ್ಲಿ ಐಜಿಪಿ ಎನ್.ಸತೀಶಕುಮಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗೆ ಶಿಸ್ತು ಎಷ್ಟು ಮುಖ್ಯವೋ, ಕ್ರೀಡಾ ಸ್ಫೂರ್ತಿಯೂ ಅಷ್ಟೇ ಮುಖ್ಯ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಎನ್.ಸತೀಶಕುಮಾರ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 3 ದಿನ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತ ತಂಡ, ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕ್ರೀಡೆಯಲ್ಲಿ ತೋರುವ ತಂಡದ ಒಗ್ಗಟ್ಟು ಮತ್ತು ಪರಸ್ಪರ ಸಹಕಾರವು ಕರ್ತವ್ಯ ನಿರ್ವಹಣೆಯಲ್ಲೂ ಪ್ರತಿಫಲಿಸಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ತಂಡಗಳು, ಸದಸ್ಯರು ಹಾಗೂ ವಿಜೇತರು ಅಭಿನಂದನಾರ್ಹರು. 3 ದಿನಗಳ ಆಟೋಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದೀರಿ. ಅದೇ ರೀತಿ ನೀವೆಲ್ಲರೂ ಕರ್ತವ್ಯದಲ್ಲೂ ಇದೇ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲಾಖೆಯಲ್ಲಿ ಕರ್ತವ್ಯದ ಒತ್ತಡದ ಮಧ್ಯೆಯೂ ದೈಹಿಕ ಕ್ಷಮತೆ, ಮಾನಸಿಕ ಉಲ್ಲಾಸ, ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಲು ಕ್ರೀಡಾಕೂಟಗಳು ಅತ್ಯಂತ ಪೂರಕವಾಗಿವೆ. ಕ್ರೀಡೆಯಿಂದ ಸಿಬ್ಬಂದಿಯಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವ ಬೆಳೆಯುತ್ತದೆ. ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟು ಮತ್ತು ಹಾಗೂ ವ್ಯವಸ್ಥಿತವಾಗಿ ಆಯೋಜಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ಮತ್ತು ತಂಡವನ್ನು ಅಭಿನಂದಿಸುತ್ತೇನೆ ಎಂದರು.

ಕಳೆದ 3 ದಿನಗಳಿಂದ ಪತ್ರಿಕೆಗಳಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ವರದಿಗಳನ್ನು ಗಮನಿಸಿದ್ದೆ. ಆದರೆ, ಇಂದು ಬಹುಮಾನ ವಿತರಣೆ ವೇಳೆ ಒಂದೇ ಒಂದು ಸ್ಪರ್ಧೆಯನ್ನೂ ಬಿಡದೇ, ಎಲ್ಲೂ ಕ್ರೀಡೆಗಳನ್ನು ಸಮರ್ಪಕವಾಗಿ ಆಯೋಜಿಸಿದ್ದು ಗಮನ ಸೆಳೆಯಿತು. ಆರಂಭದಲ್ಲಿ ಕ್ರೀಡಾಕೂಟವನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ಎಸ್‌ಪಿ ಡಾ.ಶೇಖರ್ ವಿಶೇಷ ಗಮನ ಹರಿಸಿದ್ದು, ಮತ್ತೊಂದು ಕಡೆ ಪೊಲೀಸ್ ಸಿಬ್ಬಂದಿ ಉತ್ಸಾಹ, ಭಾಗವಹಿಸುವಿಕೆಯು ಇಡೀ ಕ್ರೀಡಾಕೂಟಕ್ಕೆ ವಿಶೇಷ ಕಳೆ ತಂದಿದೆ ಎಂದು ಅವರು ಶ್ಲಾಘಿಸಿದರು.

ಪೊಲೀಸ್ ಇಲಾಖೆಯ ಎಲ್ಲ ಹಂತದ ಸಿಬ್ಬಂದಿಯಿಂದ ಹಿಡಿದು ಎಸ್‌ಪಿವರೆಗೆ ಪ್ರತಿಯೊಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಪೊಲೀಸ್ ರೇಂಜ್‌ನಲ್ಲಿ ವಿಶೇಷವಾಗಿ ದಾವಣಗೆರೆ ಜಿಲ್ಲೆಯಲ್ಲಿ ಇಡೀ ವರ್ಷ ಯಾವುದೇ ಅಹಿತಕರ ಘಟನೆಗಳು ಹಾಗೂ ಸಮಸ್ಯೆಗಳು ಎದುರಾಗದಂತೆ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು. ಇಂದಿನ ಕ್ರೀಡಾಕೂಟದಲ್ಲಿ ಕಂಡುಬಂದ ಉತ್ಸಾಹ ಮತ್ತು ಸಂತಸದ ವಾತಾವರಣ ಮುಂದೆಯೂ ಇದೇ ನಿರಂತರ ಮುಂದುವರಿಯಲಿ ಎಂದು ಐಜಿಪಿ ಎನ್. ಸತೀಶಕುಮಾರ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿವೈಎಸ್‌ಪಿಗಳಾದ ಬಿ.ಶರಣ ಬಸವೇಶ್ವರ, ರುದ್ರಪ್ಪ, ಬಿ.ಎಸ್.ಬಸವರಾಜ, ವೃತ್ತ ನಿರೀಕ್ಷಕರು, ಪಿಎಸ್ಐ, ಎಎಸ್ಐ, ಹೆಡ್ ಕಾನ್‌ಸ್ಟೇಬಲ್‌ಗಳು, ಕಾನ್‌ಸ್ಟೇಬಲ್‌ಗಳು, ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಇದ್ದರು.

- - -

(ಬಾಕ್ಸ್‌)

* ಡಿಎಆರ್‌ಗೆ ಹಾಸ್ಯ ಮಾಡಿ, ಹುರಿದುಂಬಿಸಿದ ಐಜಿಪಿ

ಸಾಮಾನ್ಯವಾಗಿ ಎಲ್ಲ ಕಡೆ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿಎಆರ್ ತಂಡವೇ ಮೇಲುಗೈ ಸಾಧಿಸುತ್ತದೆ. ಮೊನ್ನೆ ಶಿವಮೊಗ್ಗದಲ್ಲೂ ನೋಡಿದ್ದೆ, ಈಗ ದಾವಣಗೆರೆಯಲ್ಲೂ ನೋಡುತ್ತಿದ್ದೇನೆ. ಆದರೆ ಇಲ್ಲಿ ಡಿಎಆರ್ ತಂಡ ಸ್ವಲ್ಪ ಮಂಕಾದಂತಿದೆ. ತಿಪ್ಪೇಸ್ವಾಮಿ 25 ಪ್ರಶಸ್ತಿ ಗೆದ್ದ ಕಾರಣಕ್ಕೆ ಎಲ್ಲರ ಗಮನ ಅತ್ತ ಕಡೆ ಹೆಚ್ಚಾಗಿರಬಹುದು. ಸಿಟಿ ಡಿವೈಎಸ್ಪಿ ತಮ್ಮ ತಂಡಕ್ಕೆ ಉತ್ತಮ ಹುಮ್ಮಸ್ಸು ನೀಡಿದ್ದಾರೆ. ಮುಂದಿನ ಕ್ರೀಡಾಕೂಟದಲ್ಲಾದರೂ ಡಿಎಆರ್ ತಂಡ ಹಗ್ಗ ಜಗ್ಗಾಟದಲ್ಲಿ ಗೆಲುವು ಸಾಧಿಸಲಿ ಎಂದು ಪೂರ್ವ ವಲಯದ ಐಜಿಪಿ ಎನ್.ಸತೀಶಕುಮಾರ ಕ್ರೀಡಾಕೂಟದಲ್ಲಿ ಹಾಸ್ಯದ ಮೂಲಕ ಡಿಎಆರ್‌ ತಂಡವನ್ನು ಹುರಿದುಂಬಿಸಿದರು.

- - -

* ಪೊಲೀಸ್ ವಾರ್ಷಿಕ ಕ್ರೀಡಾಕೂಟ ವಿಜೇತರು- 9 ಎಂಎಂ ಪಿಸ್ತೂಲ್ ಫೈರಿಂಗ್‌, ಶಟಲ್ ಬ್ಯಾಡ್ಮಿಂಟನ್‌, ಟೆನಿಸ್ ಡಬಲ್ಸ್‌ನಲ್ಲಿ ಚಾಂಪಿಯನ್‌- - -ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ 2026ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.3 ದಿನಗಳ ಕಾಲ ಎಸ್ಪಿ ಡಾ. ಎಚ್.ಟಿ.ಶೇಖರ್, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನ, ನೇತೃತ್ವದಲ್ಲಿ ಕ್ರೀಡಾಕೂಟ ನಡೆದಿದ್ದು, ದೈಹಿಕ ಶಿಕ್ಷಕರು, ಅಂಪೈರ್ಸ್‌, ನಿರೂಪಕರು, ಶಸ್ತ್ರಾಗಾರ ಸಿಬ್ಬಂದಿ ಹಾಗೂ ರೆಕಾರ್ಡ್ ಕೀಪರ್‌ಗಳು ಯಶಸ್ಸಿಗೆ ಸಹಕರಿಸಿದರು.* ಎಸ್ಪಿ ಡಾ.ಶೇಖರ್, ಎಎಸ್ಪಿ ಹೆಗಡೆಗೆ ಪ್ರಶಸ್ತಿ:ಡಾ. ಎಚ್.ಟಿ.ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- 9 ಎಂಎಂ ಪಿಸ್ತೂಲ್ ಫೈರಿಂಗ್, ಶಟಲ್ ಬ್ಯಾಡ್ಮಿಂಟನ್ ಡಬಲ್ಸ್‌, ಟೆನಿಸ್‌ ಡಬಲ್ಸ್‌ನಲ್ಲಿ ಪ್ರಥಮ. ಪರಮೇಶ್ವರ ಹೆಗಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ- ಭರ್ಜಿ ಎಸೆತ, ಶಾಟ್‌ ಪುಟ್‌ನಲ್ಲಿ ಪ್ರಥಮ ಸ್ಥಾನ.* ಡಿವೈಎಸ್ಪಿ ವಿಭಾಗ:ಡಿಎಆರ್ ಡಿವೈಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ- 7.62 ರೈಫಲ್ ಫೈರಿಂಗ್, ವೇಗದ ನಡಿಗೆ, ಶಟಲ್ ಬ್ಯಾಡ್ಮಿಂಟನ್‌, ಟೆನಿಸ್ ಸೇರಿದಂತೆ 5 ವಿಭಾಗದಲ್ಲಿ ಪ್ರಥಮ ಸ್ಥಾನ. ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ- ಭರ್ಜಿ ಎಸೆತ, ಚಕ್ರ ಎಸೆತ, 100 ಮೀಟರ್ ವೇಗದ ನಡಿಗೆ ಪ್ರಥಮ. ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಚನ್ನಗಿರಿ ಡಿವೈಎಸ್ಪಿ ಆರ್.ಎಸ್.ರುದ್ರಪ್ಪ ಉಜ್ಜನಕೊಪ್ಪ, ಸಿಇಎನ್‌ ಡಿಎಸ್ಪಿ ಬಂಕಾಳಿ ನಾಗಪ್ಪ ವಿವಿಧ ಸ್ಪರ್ಧೆಯಲ್ಲಿ ಪ್ರಥಮ.* ಪಿಐ, ಸಿಪಿಐ, ಆರ್‌ಪಿಐ ವಿಭಾಗ:ಡಿಎಆರ್‌ ಆರ್‌ಪಿಐ ಕೆ.ಎಸ್.ಪ್ರಶಾಂತ- ಚಕ್ರ ಎಸೆತ, ಭರ್ಜಿ ಎಸೆತ, ರೈಫಲ್ ಫೈರಿಂಗ್, ಟೆನಿಸ್, ಶಟಲ್ ಬ್ಯಾಡ್ಮಿಂಟನ್‌ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ.* ಮಹಿಳಾ ಪೊಲೀಸ್ ಅಧಿಕಾರಿ ವಿಭಾಗ:ಸಂತೇಬೆನ್ನೂರು ಸಿಪಿಐ ಮಲ್ಲಮ್ಮ ಚೌಬೆ, ನಿಸ್ತಂತು ವಿಭಾಗದ ಪಿಐ ತೇಜಾವತಿ, ವಿದ್ಯಾನಗರ ಪಿಐ ಶಿಲ್ಪಾ ಸೇರಿದಂತೆ ಅನೇಕ ಅಧಿಕಾರಿಗಳು ವಿವಿಧ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದು, ಥ್ರೋ ಬಾಲ್‌ನಲ್ಲಿ ಪಿಐ ವೈ.ಎಸ್.ಶಿಲ್ಪ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು.* ಪಿಎಸ್ಐಆ, ಆರ್‌ಎಸ್‌ಐ, ಎಎಸ್‌ಐ ವಿಭಾಗ:ಮಹಿಳಾ ಸಿಬ್ಬಂದಿ ಮಾಲತಿ ಬಾಯಿ ರೈಫಲ್ ಶೂಟಿಂಗ್, ಉದ್ದ ಜಿಗಿತ, 100 ಮತ್ತು 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು, ಗಮನ ಸೆಳೆದರು. ಪುರುಷರ ವಿಭಾಗದಲ್ಲಿ ಬೀರೇಶ, ಧೃವ, ಮುಜಿಮಿಲ್ ಅಜ್ಜು, ಕೆ.ದಾದು, ಭರತ್ ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಪಡೆದರು.* ಗುಂಪು ಸ್ಪರ್ಧೆಗಳು:ಕಬಡ್ಡಿ- ಡಿಎಆರ್ ತಂಡ ಚಾಂಪಿಯನ್‌. ಕ್ರಿಕೆಟ್‌- ನಗರ ಉಪ ವಿಭಾಗ. ಹಗ್ಗ ಜಗ್ಗಾಟ ಮತ್ತು 4x100 ಮೀಟರ್ ರಿಲೇ- ಸಿಟಿ ತಂಡ ಪ್ರಥಮ ಸ್ಥಾನ.ಮಹಿಳೆಯರ ವಿಭಾಗ: ರಿಲೇ ಮತ್ತು ಹಗ್ಗ ಜಗ್ಗಾಟ- ಮಾಲತಿ ಬಾಯಿ ನೇತೃತ್ವದ ತಂಡಗಳಿಗೆ ಬಹುಮಾನ.- - -

- - -

-(ಫೋಟೋಗಳಿವೆ)