ಸಾರಾಂಶ
ಗುಳೇದಗುಡ್ಡ: ಸಾಹಿತ್ಯ ಸಮ್ಮೇಳನಗಳು ಆಯಾ ಪ್ರದೇಶದ ಪಾರಂಪರಿಕ ಸಾಂಸ್ಕೃತಿಕ ಇತಿಹಾಸ ಹಾಗೂ ಸಮಕಾಲೀನ ಚಾರಿತ್ರಿಕ ಸಾಹಿತ್ಯ ಕಟ್ಟಿಕೊಡುವ ಮಹತ್ವದ ಅಕ್ಷರ ಜಾತ್ರೆಗಳಾಗಿವೆ. ಇವುಗಳ ಯಶಸ್ವಿಗೆ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಸೋಮವಾರ ಮತಕ್ಷೇತ್ರದ ಕಟಗೇರಿ ಗ್ರಾಮದಲ್ಲಿ ಫೆ.10ರಂದು ಜರುಗಲಿರುವ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಸಾಹಿತ್ಯ ಸಮ್ಮೇಳನಗಳು ಆಯಾ ಪ್ರದೇಶದ ಪಾರಂಪರಿಕ ಸಾಂಸ್ಕೃತಿಕ ಇತಿಹಾಸ ಹಾಗೂ ಸಮಕಾಲೀನ ಚಾರಿತ್ರಿಕ ಸಾಹಿತ್ಯ ಕಟ್ಟಿಕೊಡುವ ಮಹತ್ವದ ಅಕ್ಷರ ಜಾತ್ರೆಗಳಾಗಿವೆ. ಇವುಗಳ ಯಶಸ್ವಿಗೆ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಸೋಮವಾರ ಮತಕ್ಷೇತ್ರದ ಕಟಗೇರಿ ಗ್ರಾಮದಲ್ಲಿ ಫೆ.10ರಂದು ಜರುಗಲಿರುವ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಭಾಷೆ ಜಾಗತಿಕ ಮನ್ನಣೆ ಪಡೆದ ಭಾಷೆಗಳಲ್ಲಿ ಒಂದಾಗಿದೆ. ಅದರ ಅಳಿವು ಮತ್ತು ಉಳಿವು ನಮ್ಮೆಲ್ಲರ ಕೈಯಲ್ಲಿದೆ. ಇಂತಹ ಸಾಹಿತ್ಯ ಸಮ್ಮೇಳನಗಳ ಮುಖಾಂತರ ನಮ್ಮ ಸಾಂಸ್ಕೃತಿಕ ವಾರಸುದಾರರಾದ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಮಹತ್ವ, ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ್ಯವನ್ನು ನಾವೆಲ್ಲ ಒಗ್ಗಟ್ಟಾಗಿ ಮಾಡೋಣ. ಸಾಹಿತ್ಯ ಸಮ್ಮೆಳನ ಯಶಸ್ವಿಗೊಳಿಸೋಣ. ಗುಳೇದಗುಡ್ಡ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ನಮ್ಮ ಸಹಕಾರ ಮತ್ತು ಸಹಭಾಗಿತ್ವ ಸಂಪೂರ್ಣ ಇದೆ. ಕನ್ನಡಾಭಿಮಾನಿಗಳು, ಶಾಲಾ ಮಕ್ಕಳು, ಶಿಕ್ಷಕರು, ರೈತರು, ನೇಕಾರರು ಹೀಗೆ ಎಲ್ಲ ವರ್ಗದ ಜನ ಭಾಗವಹಿಸಿ ಸಮ್ಮೇಳನ ಯಶಸ್ವಿ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಕಸಾಪ ತಾಲೂಕು ಅಧ್ಯಕ್ಷ ಡಾ. ಎಚ್.ಎಸ್.ಘಂಟಿ, ಕಸಾಪ ಅಜೀವ ಸದಸ್ಯ ಗಣೇಶ ಶೀಲವಂತ, ಮೂಕಪ್ಪ ಹೂನೂರ, ಸಂಗಣ್ಣ ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.