ಗ್ರಾಮಗಳಲ್ಲಿನ ಕೆರೆಗಳ ತುಂಬಿಸಲು ಒತ್ತಾಯ

| Published : May 14 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ರೈತಪರ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಕೆರೆಗಳನ್ನು ತುಂಬಿಸಬೇಕು ಎಂದು ಘೋಷಣೆಗಳನ್ನು ಮೊಳಗಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ರೈತಪರ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಕೆರೆಗಳನ್ನು ತುಂಬಿಸಬೇಕು ಎಂದು ಘೋಷಣೆಗಳನ್ನು ಮೊಳಗಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ರೈತರ ಸಂಕಷ್ಟ ನೀಗಬಹುದಾಗಿದೆ. ಭೀಕರ ಬರ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇನ್ನಾದರೂ ಸರ್ಕಾರ ರೈತರ ಪರವಾಗಿ ಗಂಭೀರವಾದ ಕಾರ್ಯಕ್ರಮಗಳನ್ನು ಕೈಗೊಂಡು ಅವರಿಗೆ ಬಲ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದಾಗ ಪ್ರಾದೇಶಿಕ ಆಯುಕ್ತರಿಂದ ಹೆಚ್ಚುವರಿ ನೀರಿನ ಪರವಾನಗಿ ತೆಗೆದುಕೊಂಡು ಕೊನೆಯ ಭಾಗದ ಕೆರೆಗಳಿಗೆ ನೀರು ಹರಿಸುವ ವಾಗ್ದಾನವನ್ನು ಜಿಲ್ಲಾಧಿಕಾರಿಗಳು ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ಕಾರ್ಯ ಸಾಧ್ಯವಾಗಿಲ್ಲ, ತಿಡಗುಂದಿ ಶಾಖಾ ಕಾಲುವೆ ಅಂಚಿನಲ್ಲಿರುವ ಗ್ರಾಮಗಳಾದ ತಡವಲಗಾ, ಅಥರ್ಗಾ, ಹರಟಗಿ ಕೆರೆಗಳಿಗೆ ನೀರು ಹರಿಸುವ ಕಾರ್ಯ ಇನ್ನೂ ಸಾಧ್ಯವಾಗಿಲ್ಲ, ಜನ ಜಾನುವಾರಗಳಿಗೆ ನೀರಿನ ತೀವ್ರ ತೊಂದರೆ ಉಂಟಾಗಿದೆ ಎಂದರು.ಹೀಗಾಗಿ ಈ ಎಲ್ಲ ಗ್ರಾಮಗಳ ಜನತೆಯ ಅನುಕೂಲಕ್ಕಾಗಿಗ್ರಾಮಗಳ ಕೆರೆ ನೀರು ತುಂಬಿಸಿ ಸಾವಿರಾರು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಗುರುನಾಥ ಬಗಲಿ, ಶರಣಪ್ಪ ಸುದಾಮ, ಜಿ.ಎನ್.ನಿಂಬರಗಿ, ಎಸ್.ಸಿ.ಜಾಲಗೇರಿ, ಎ.ಬಿ.ಪೂಜಾರಿ, ಬಸವರಾಜ ಹಳ್ಳಿ, ಮಲ್ಲು ನೇಕಾರ, ಶರಣಪ್ಪ.ಬಿ.ತೊರಪೆ, ಪ್ರಕಾಶ ಹಂಜಗಿ, ದುಂಡಪ್ಪ ಕರಕಟ್ಟಿ, ಈರಣ್ಣ ಗೊಟ್ಯಾಳ, ಚನ್ನಪ್ಪ ಮಿರಗಿ, ಬಿ.ಎಚ್.ಪಂತೋಜಿ, ಶರಣಪ್ಪ ತಾರಾಪುರ, ಚಿದಾನಂದ ಮದರಿ ಮುಂತಾದವರು ಇದ್ದರು.