ಸಾರಾಂಶ
ಜನಿವಾರ ಧರಿಸುವ ಸಮುದಾಯಗಳ ಶವ ಸಂಸ್ಕಾರಕ್ಕೆ ಭೂಮಿ ಮಂಜೂರು ಮಾಡುವುದರ ಜತೆಗೆ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಹಿಂದೂ ಜನಿವಾರ ಒಕ್ಕೂಟವು ಈಚೆಗೆ ತಹಶೀಲ್ದಾರ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿತು.
ಕನಕಗಿರಿ: ಜನಿವಾರ ಧರಿಸುವ ಸಮುದಾಯಗಳ ಶವ ಸಂಸ್ಕಾರಕ್ಕೆ ಭೂಮಿ ಮಂಜೂರು ಮಾಡುವುದರ ಜತೆಗೆ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಹಿಂದೂ ಜನಿವಾರ ಒಕ್ಕೂಟವು ಈಚೆಗೆ ತಹಶೀಲ್ದಾರ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿತು.
ಮುಖಂಡ ಕೆ.ಎಚ್. ಕುಲಕರ್ಣಿ ಮಾತನಾಡಿ, ಪಟ್ಟಣದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವಿಶ್ವಕರ್ಮ, ಗೊಂಧಳೆ, ಭಾವಸಾರ, ಚಿತ್ರಗಾರ, ಆರ್ಯವೈಶ್ಯ, ಮರಾಠ, ರಜಪೂತ ಸೇರಿದಂತೆ ಜನಿವಾರ ಧರಿಸುವ ವಿವಿಧ ಸಮುದಾಯಗಳ ಶವ ಸಂಸ್ಕಾರಕ್ಕೆ ಪ್ರತ್ಯೇಕ ೨ ಎಕರೆ ಭೂಮಿ ನೀಡಬೇಕು. ಆ ಭೂಮಿಯನ್ನು ಹದ್ದುಬಸ್ತು ಮಾಡಿಕೊಡುವುದರ ಜತೆಗೆ ಕಟ್ಟಡ, ನೀರು, ವಿದ್ಯುತ್ ಹಾಗೂ ಅಗ್ನಿ ಸಂಸ್ಕಾರಕ್ಕೆ ಕಟ್ಟೆಯನ್ನು ಕಲ್ಪಿಸಿ ಕೊಡಬೇಕು. ಅಲ್ಲದೇ ಪಟ್ಟಣದಿಂದ ಕಲಿಕೇರಿ ರಸ್ತೆಗೆ ಹೊಂದಿಕೊಂಡಿರುವ ಈಗಿನ ನಾಡಕಚೇರಿ ಬಳಿಯ ಭೂಮಿಯು ಜನಿವಾರ ಸಮುದಾಯಕ್ಕೆ ಸೂಕ್ತವಾಗಿದೆ. ಇದೇ ಜಮೀನನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.ಪ್ರಮುಖರಾದ ಭೀಮಸೇನ ಜೋಶಿ, ವೆಂಕಟೇಶ ಕುಲಕರ್ಣಿ, ಅನಂತಪ್ಪ ಧಾಯಿಪುಲ್ಲೆ, ಅಂಬೋಜಿರಾವ್ ಬೊಂದಾಡೆ, ಅಂಬಣ್ಣ ಮಹಿಪತಿ, ರಾಘವೇಂದ್ರ ಚಿತ್ರಗಾರ, ವಿರೂಪಾಕ್ಷಪ್ಪ ಕಮ್ಮಾರ ಇತರರು ಇದ್ದರು.