ಸಾರಾಂಶ
ವಡಗೇರಾ ಪಟ್ಟಣದ ಜಮೀನೊಂದರಲ್ಲಿ ರೈತರು ಎತ್ತಿನ ಕುಂಟೆಗಳನ್ನು ಹೊಡೆಯುತ್ತಿರುವುದು.
ಕನ್ನಡಪ್ರಭ ವಾರ್ತೆ ವಡಗೇರಾ
ತಾಲೂಕಿನಾದ್ಯಂತ ಈ ಬಾರಿ ಹತ್ತಿ ಬೆಳೆ ಉತ್ತಮವಾಗಿದ್ದು, ಹೆಚ್ಚಿನ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೇವೆ. ಹತ್ತಿ ಬೆಳೆ ಜೊತೆಗೆ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ಗ್ಯಾರಂಟಿ ನೀಡುವಂತೆ ವಡಗೇರಾ ಪಟ್ಟಣದ ಪ್ರಗತಿಪರ ಯುವ ರೈತ ಶ್ರೀನಿವಾಸ್ ಜಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಉತ್ತಮ ಮಳೆಯಾಗಿದ್ದು, ಎತ್ತಿನ ಕುಂಟೆಗಳನ್ನು ಹೊಡೆದು ಹೊಲಗಳನ್ನು ಹಸನು ಮಾಡಿ, ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ. ಆದರೆ, ಒಂದು ಎಕರೆ ಹತ್ತಿ ಬೆಳೆ ಬೆಳೆಯಲು ಕನಿಷ್ಠ 30 ರಿಂದ 40 ಸಾವಿರ ರು. ಖರ್ಚಾಗುತ್ತದೆ. ಬೆಳೆಯುವ ಹತ್ತಿ ಬೆಳೆಯ ಬೆಲೆ ತುಂಬಾ ಕಡಿಮೆ ಇದೆ. ಆದರೆ ಅದರ ಬೀಜ, ಗೊಬ್ಬರ, ಕ್ರಿಮಿನಾಶಕಗಳ ಬೆಲೆ ಮಾತ್ರ ಗಗನಕ್ಕೇರಿದೆ ಎಂದರು.
ರೈತರು ಬೆಳೆಯುವ ಬೆಳೆಗಳಿಗೆ ಉತ್ತಮವಾದ ಬೆಲೆ ನಿಗದಿಪಡಿಸಿ, ರೈತರಿಗೆ ಬೆಂಬಲ ಬೆಲೆಯ ಗ್ಯಾ ರಂಟಿ ನೀಡಿದಾಗ ಮಾತ್ರ ರೈತರ ಬದುಕು ಸುಧಾರಣೆ ಕಾಣುತ್ತದೆ. ಕೃಷಿಯೂ ಕೂಡ ಉಳಿಯುತ್ತದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ವಾಣಿಜ್ಯ ಬೆಳೆ ಹತ್ತಿಯನ್ನು ಬೆಳೆಯುತ್ತಾರೆ. ಆ ಕಾರಾಣ ಹತ್ತಿ ಬೆಳೆಗೆ ಕನಿಷ್ಠ ಒಂದು ಕ್ವಿಂಟಲ್ ಹತ್ತಿಗೆ 10 ಸಾವಿರ ರು. ನಿಗದಿಪಡಿಸುವಂತೆ ಮನವಿ ಮಾಡಿದರು.