ಸಾರಾಂಶ
ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಿ ಜಮೀನಿನಲ್ಲಿ ಸರ್ವೆ ನಡೆಸಿ ನಿವೇಶನಕ್ಕಾಗಿ ಜಾಗ ಕಾಯ್ದಿರಿಸಬೇಕೆಂದು ಆಗ್ರಹಿಸಿ ಹೊಯ್ಸಳಲು, ಚಿನ್ನಿಗ, ಹೊಸಮನೆ, ಮರಬೈಲು ಹಾಗೂ ಅಣಜೂರು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಬುಧವಾರ ಮನವಿ ಸಲ್ಲಿಸಿದರು.ಬಳಿಕ ದಸಂಸ ಮುಖಂಡ ಹೊಯ್ಸಳಲು ಸುಂದ್ರೇಶ್ ಮಾತನಾಡಿ, ಮೂಡಿಗೆರೆ ತಾಲೂಕಿನ ಜಿ.ಅಗ್ರಹಾರ ಗ್ರಾಮದ ಸರ್ವೆ ನಂ.67ರ ಸರ್ಕಾರಿ ಜಾಗದಲ್ಲಿ ಗ್ರಾಮಸ್ಥರು ಕಳೆದ ಎರಡೂವರೆ ದಶಕಗಳಿಂದ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ ಎಂದರು.
ಇದುವರೆಗೂ ಸರ್ಕಾರದಿಂದ ನಿವೇಶನ ಅಥವಾ ವಸತಿ ಸೌಲಭ್ಯ ಲಭ್ಯವಾಗಿಲ್ಲ. ಹಾಲಿ ವಾಸವಿರುವ ಜಿ. ಅಗ್ರಹಾರದ ಗ್ರಾಮದ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ ಕನಿಷ್ಟ 30-40 ಅಳತೆ ನಿವೇಶನಗಳನ್ನಾಗಿ ಮಂಜೂರು ಮಾಡಿಕೊಡಬೇಕು ಎಂದು ಹೇಳಿದರು.ಈ ಸರ್ಕಾರಿ ಜಾಗದಲ್ಲಿ ಸದ್ಯಕ್ಕೆ ಯಾವುದೇ ತಂಟೆ ತಕರಾರು ಇಲ್ಲ, ಹೀಗಾಗಿ ವಸತಿ ನಿರ್ಮಿಸಲು ನಿವೇಶನಕ್ಕೆ ಸರ್ವೆ ನಡೆಸಿ ಉಳಿಕೆ ಜಮೀನನ್ನು ಗೋಣಿಬೀಡು ಪಂಚಾಯಿತಿಗೆ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಛಲವಾದಿ ಸಂಘದ ಅಧ್ಯಕ್ಷ ರಘು, ಗ್ರಾಮಸ್ಥರಾದ ಶಂಕರ್, ಮಂಜಪ್ಪ, ರಾಕೇಶ್, ಅಣ್ಣಪ್ಪ, ಶಾರದಾ, ಲಕ್ಷ್ಮೀ, ಮಂಜುಳಾ, ಪಲ್ಲವಿ ಹಾಜರಿದ್ದರು.ಪೋಟೋ ಫೈಲ್ ನೇಮ್ 12 ಕೆಸಿಕೆಎಂ 4ಸರ್ಕಾರಿ ಜಮೀನಿನಲ್ಲಿ ಸರ್ವೆ ನಡೆಸಿ ನಿವೇಶನಕ್ಕಾಗಿ ಜಾಗ ಕಾಯ್ದಿರಿಸಬೇಕೆಂದು ಆಗ್ರಹಿಸಿ ಹೊಯ್ಸಳಲು, ಚಿನ್ನಿಗ, ಹೊಸಮನೆ, ಮರಬೈಲು ಹಾಗೂ ಅಣಜೂರು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಬುಧವಾರ ಮನವಿ ಸಲ್ಲಿಸಿದರು.