ಸಾರಾಂಶ
- ತುರ್ತು ಕ್ರಮ ಕೈಗೊಳ್ಳಲು ಕೋರಿ ಉಪ ವಿಭಾಗಾಧಿಕಾರಿಗಳಿಗೆ ತರೀಕೆರೆ ರೈತ ಸಂಘದಿಂದ ಪತ್ರ
ಕನ್ನಡಪ್ರಭ ವಾರ್ತೆ, ತರೀಕೆರೆಕರ್ನಾಟಕ ರಾಜ್ಯ ರೈತ ಸಂಘ ತರೀಕೆರೆಯಿಂದ ಬರಗಾಲದಿಂದ ಸಂಕಷ್ಠದಲ್ಲಿರುವ ರೈತರ ನೆರವಿಗೆ ಧಾವಿಸಲು ತುರ್ತು ಕ್ರಮ ಕೈಗೊಳ್ಳಲು ಕೋರಿ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಯಿತು.ಚಿಕ್ಕಮಗಳೂರು ಜಿಲ್ಲೆಯಲ್ಲಿನ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿದೆ. ತೆಂಗು, ಬಾಳೆ, ಅಡಕೆ ಬೆಳೆಗಳು ಒಣಗುತ್ತಿವೆ. ಕೆಲವು ಭಾಗದಲ್ಲಿ ದನಕರುಗಳ ಮೇವಿಗಾಗಿ ಪರದಾಡುತ್ತಿದ್ದಾರೆ. ಇದು ರೈತರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡುತ್ತಿದೆ.ಬರಗಾಲಕ್ಕೆ ತುತ್ತಾದ ರೈತರಿಗೆ ರಾಜ್ಯ ಸರ್ಕಾರ ಕೇವಲ 2000 ಪರಿಹಾರ ಅರ್ಧದಷ್ಟು ನೀಡಿದೆ, ಇದರಿಂದ ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ. ಜಿಲ್ಲೆಯ ಬಹುತೇಕ ಕಡೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ, ಬೆಳೆದಿರುವ ಕಬ್ಬು ಬಾಳೆ ಅಡಕೆ ಬೆಳೆಗಳು ನೀರಿಲ್ಲದೆ ಒಣಗಿಹೋಗುತ್ತಿದೆ. ಇದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಇಂತಹ ರೈತರಿಗೆ ಕೂಡಲೇ ಬರನಷ್ಠ ಪರಿಹಾರ ಕೊಡಿಸಬೇಕು.ದನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲು ನೀರು ಹರಿಸುವಂತೆ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ನೀರಾವರಿ ಇಲಾಖೆಯವರು ನಿರ್ಲಕ್ಷ್ಯತನ ಮಾಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಕೃಷಿ ಪಂಪ್‌ಸೆಟ್ ಗಳಿಗೆ 3-4 ಗಂಟೆಗಳ ವಿದ್ಯುತ್ ಸಹ ಸಿಗುತ್ತಿಲ್ಲ.ಕೃಷಿ ಪಂಪ್‌ಸೆಟ್ ಗಳ ಟಿ.ಸಿ.ಕೆಟ್ಟಾಗ ವಿದ್ಯುತ್ ಇಲಾಖೆಯವರು ವಿಳಂಬವಾಗಿ ಮರುಜೋಡಣೆ ಮಾಡುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.ಬರಗಾಲದ ಸಂಕಷ್ಠದಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಕೆಲವು ಬ್ಯಾಂಕುಗಳು ಸಾಲ ವಸೂಲಾತಿಗಾಗಿ ನೊಟೀಸ್ ನೀಡಿ ಮಾನಸಿಕ ಕಿರುಕುಳ ಕೊಡುತ್ತಿವೆ. ಪಶು ಸಂಗೋಪನಾ ಇಲಾಖೆ 1962 ಅಂಬುಲೆನ್ಸ್.ನಲ್ಲಿ ತಜ್ಞ ವೈದ್ಯರು, ಔಷಧಿಗಳು ಇಲ್ಲ. ಅಲ್ಲದೆ ಈ ಸೇವೆ 9 ಗಂಟೆಯಿಂದ 4ರ ವರೆಗೆ ಮಾತ್ರ ಸೇವೆ ಲಭ್ಯವಿದೆ. ಇದನ್ನು ದಿನದ 24 ಗಂಟೆಗಳಿಗೆ ವಿಸ್ತರಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗಿ ಆಹಾರವಿಲ್ಲದೆ ಅಸುನೀಗುತ್ತಿವೆ. ಇಂತಹ ಸಮಸ್ಯೆ, ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಹೋದರೆ ಚುನಾವಣೆ ಕೆಲಸದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರ ರಕ್ಷಣೆಗೆ ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕು. ಚುನಾವಣಾ ಕಾರ್ಯಕ್ಕೆ ನೇಮಿಸಿರುವ ಅಧಿಕಾರಿಗಳ ತಂಡದ ರೀತಿಯಲ್ಲಿ ಬರಗಾಲದ ಸಮಸ್ಯೆಗಳಿಗೂ ತುರ್ತು ಪರಿಹಾರದ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಿ, ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ಅಧಿಕಾರಿಗಳು, ಮೀಟರ್ ಬಡ್ಡಿ ವ್ಯವಹಾರ ಮಾಡಲು ಈ ಸಂಸ್ಥೆಗಳಿಂದ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಪರಿಹರಿಸಬೇಕು. ಇಷ್ಟು ಬೇಡಿಕೆಗಳನ್ನು ತಾವು ತುರ್ತಾಗಿ ಈಡೇರಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇವೆ.ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಎಚ್.ಎಸ್.ಸೋಮಶೇಖರಯ್ಯ, ಅರುಣ್ ಕುಮಾರ್, ಮಧುಕುಮಾರ್, ಬಸವ ಬೋವಿ ಮತ್ತಿತರರು ಭಾಗವಹಿಸಿದ್ದರು.
-------------------ಫೋಟೋ ಇದೆಃ19ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತರೀಕೆರೆ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಯಿತು.ಇದರಿಂದ ಜಾನುವಾರು ಸೇವೆ ಸಾಧ್ಯವಾಗುತ್ತಿಲ್ಲ. ಸದರಿ