25 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ವಶ: 9 ಮಂದಿ ಬಂಧನ

| Published : Nov 14 2025, 01:15 AM IST

25 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ವಶ: 9 ಮಂದಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ದೆಹಲಿಯ ಕೆಂಪುಕೋಟೆ ಸಮೀಪದ ಕಾರು ಸ್ಫೋಟದ ಬೆನ್ನಲ್ಲೇ ಕರ್ನಾಟಕದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ತಾಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾಳಿ ನಡೆಸಿ 28 ಚೀಲಗಳಲ್ಲಿ ಸಾಗಿಸುತ್ತಿದ್ದ ನಿಷೇಧಿತ ಇ-ಸಿಗರೇಟ್ ಪತ್ತೆ ಹಚ್ಚಿದ್ದಾರೆ

ದಾಬಸ್‍ಪೇಟೆ: ದೆಹಲಿಯ ಕೆಂಪುಕೋಟೆ ಸಮೀಪದ ಕಾರು ಸ್ಫೋಟದ ಬೆನ್ನಲ್ಲೇ ಕರ್ನಾಟಕದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ತಾಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾಳಿ ನಡೆಸಿ 28 ಚೀಲಗಳಲ್ಲಿ ಸಾಗಿಸುತ್ತಿದ್ದ ನಿಷೇಧಿತ ಇ-ಸಿಗರೇಟ್ ಪತ್ತೆ ಹಚ್ಚಿದ್ದಾರೆ.

ದುಬೈನಿಂದ ಬೆಂಗಳೂರಿಗೆ: ಬೆಂಗಳೂರಿನಿಂದ ಮಂಗಳೂರು ಹಾಗೂ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 25 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿದೇಶಿ ಸಿಗರೇಟ್‍ಗಳನ್ನು ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

9 ಮಂದಿ ಬಂಧನ: ವಿದೇಶಿ ಸಿಗರೇಟುಗಳು ಮಂಗಳೂರು, ಕೇರಳ, ಕಾಸರಗೋಡು ಭಾಗದಲ್ಲಿ ಹೆಚ್ಚು ಬೇಡಿಕೆಯಿದ್ದು ದುಬೈನಲ್ಲಿ ಕಡಿಮೆ ದರದಲ್ಲಿ ಖರೀದಿಸಿ ಬೆಂಗಳೂರಿಗೆ ತಂದಿದ್ದಾರೆ, ಬೆಂಗಳೂರಿನಿಂದ ಮಂಗಳೂರು ಕೇರಳಕ್ಕೆ ಕಾರುಗಳಲ್ಲಿ ಸಾಗಿಸುತ್ತಿರುವ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಷರೀದ್(29) ಪೈಸನ್ (37) ಅಬ್ದುಲ್ ಖಾದರ್(27), ಯಾಸೀನ್ (29), ಅಬ್ದುಲ್ ಮನಿದ್ (44), ಸಾಧಿಕ್ (46) ಅನಿಲ್ (44), ಸಮೀರ್ (45) ಬಂಧಿತರು. ಇವರು ಕೃತ್ಯಕ್ಕೆ ಬಳಸಿದ 3 ಅರ್ಟಿಗಾ ಕಾರುಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಪೋಟೋ 3 :

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ ಲಕ್ಷಾಂತರ ಮೌಲ್ಯದ ವಿದೇಶಿ ಸಿಗರೇಟುಗಳನ್ನು ವಶಕ್ಕೆ ಪಡೆದು 9 ಮಂದಿಯನ್ನು ಬಂಧಿಸಿದ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು.