ಇದೀಗ ೨ನೇ ಬಾರಿಗೆ ಭೇಟಿ ನೀಡಿರುವ ಮಾನಸರಾವ್ ಹಾಗೂ ಚರಣ್ ನೇತೃತ್ವದ ತಂಡವು ಸ್ಮಾರಕ ಸಂಶೋಧಿಸಿದೆ

ಕನಕಗಿರಿ: ಡೆಕ್ಕನ್ ಹೆರಿಟೆಜ್ ಪೌಂಡೇಶನ್(ಡಿಎಚ್‌ಎಫ್) ವಿದೇಶಿ ಸಂಶೋಧಕರು ಇಲ್ಲಿನ ರಾಜ್ಯ ಸಂರಕ್ಷಣಾ ಸ್ಮಾರಕ ಪಟ್ಟಿಯಲ್ಲಿರುವ ವೆಂಕಟಪತಿ ಬಾವಿಗೆ ಎರಡನೇ ಬಾರಿಗೆ ಭೇಟಿ ನೀಡಿ ಬುಧವಾರ ಪುರಾತನ ಕಲಾಕೃತಿ ವೀಕ್ಷಿಸಿದರು.

ವಿಜಯನಗರ ಸಾಮ್ರಜ್ಯದ ಮಾಂಡಲೀಕ ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಈ ಕಲಾತ್ಮಕ ಬಾವಿಗೆ ಆಧುನಿಕ ಸ್ಪರ್ಶ ನೀಡುವ ಉದ್ದೇಶದಿಂದ ಡಿಎಚ್‌ಎಫ್ ಸಂಶೋಧಕರಿಂದ ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ. ಜು.೨೭ರಂದು ಸ್ಟಿಪನಿ ಪ್ಲೋಚ್ ಶಾಲೋಝ್ ಹಾಗೂ ಡಾ. ಹೆಲೆನ್ ಪಿಲನ್ ಗ್ರಿಕ್ ಮೊದಲ ಬಾರಿಗೆ ಭೇಟಿ ನೀಡಿ ವೆಂಕಟಪತಿ ಬಾವಿ ಹಾಗೂ ಪುಷ್ಕರಣಿ ವೀಕ್ಷಿಸಿದ್ದರು. ಇದೀಗ ೨ನೇ ಬಾರಿಗೆ ಭೇಟಿ ನೀಡಿರುವ ಮಾನಸರಾವ್ ಹಾಗೂ ಚರಣ್ ನೇತೃತ್ವದ ತಂಡವು ಸ್ಮಾರಕ ಸಂಶೋಧಿಸಿದೆ. ಈ ಸಂಶೋಧನಾ ವರದಿ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಆಧರಿಸಿ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಈ ಸ್ಮಾರಕ ದತ್ತುವಾಗ ಸ್ವೀಕರಿಸಿದ ಬಳಿಕ ಆಧುನಿಕ ಸ್ಪರ್ಶಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಡೆಕ್ಕನ್ ಹೆರಿಟೆಜ್ ಪೌಂಡೇಶನ್ ಸಂಯೋಜಕ ಇಂದ್ರಜಿತ್ ಸಾವಂತ್ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕನಕಾಚಲಪತಿ ದೇವಸ್ಥಾನ ಸಮಿತಿ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಶಿವಕುಮಾರ ಭೋವಿ, ಗದ್ದಿಕುಮಾರ, ಸ್ಥಳೀಯ ಇತಿಹಾಸಕಾರ ಪಂಪಾರೆಡ್ಡಿ ಗಚ್ಚಿನಮನಿ ಇತರರು ಇದ್ದರು.