ಸಾರಾಂಶ
ವಿಶ್ವವಿಖ್ಯಾತ ಹಂಪಿಯಲ್ಲಿ ಸ್ಮಾರಕಗಳ ಬಳಿ ಅಳವಡಿಕೆ ಮಾಡಲಾಗಿರುವ ಫಲಕಗಳಲ್ಲಿ ಧೂಳು ಮೆತ್ತಿದ್ದರೂ ಸಂಬಂಧಿಸಿದ ಇಲಾಖೆ ಸ್ವಚ್ಛತೆ ಮಾಡುತ್ತಿಲ್ಲ.
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಸ್ಮಾರಕಗಳ ಬಳಿ ಅಳವಡಿಕೆ ಮಾಡಲಾಗಿರುವ ಫಲಕಗಳಲ್ಲಿ ಧೂಳು ಮೆತ್ತಿದ್ದರೂ ಸಂಬಂಧಿಸಿದ ಇಲಾಖೆ ಸ್ವಚ್ಛತೆ ಮಾಡುತ್ತಿಲ್ಲ. ವಿದೇಶಿ ಪ್ರವಾಸಿಗರೊಬ್ಬರು ಮಹಾನವಮಿ ದಿಬ್ಬದ ಬಳಿ ಅಳವಡಿಕೆ ಮಾಡಲಾದ ಫಲಕದ ಧೂಳು ಒರೆಸಿ ಓದಿದ ಘಟನೆ ಸೋಮವಾರ ನಡೆದಿದೆ.
ಸ್ವಚ್ಛತೆಗೆ ಆದ್ಯತೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಚಿಸಿದರೂ ಸಂಬಂಧಿಸಿದ ಇಲಾಖೆಗಳು ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದು ಸೋಜಿಗವನ್ನುಂಟು ಮಾಡಿದೆ. ಹಂಪಿಯ ಸ್ಮಾರಕಗಳ ಬಳಿ ಅಳವಡಿಕೆ ಮಾಡಿರುವ ಫಲಕಗಳಲ್ಲಿ ಮೆತ್ತಿರುವ ಧೂಳನ್ನು ಕೂಡ ಕೊಡವದೇ ಇರುವುದು ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ವಿದೇಶಿ ಪ್ರವಾಸಿಗರೇ ಧೂಳು ಮೆತ್ತಿರುವ ಫಲಕವನ್ನು ಒರಸಿ ಮಾಹಿತಿ ಓದುವಂತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆಗಳು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಿ, ದೇಶ, ವಿದೇಶಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಇತಿಹಾಸಪ್ರಿಯರು ಒತ್ತಾಯಿಸಿದ್ದಾರೆ.ಹಂಪಿಯ ಮಹಾನವಮಿ ದಿಬ್ಬದ ಬಳಿ ವಿದೇಶಿ ಪ್ರವಾಸಿಗರೊಬ್ಬರು ಮಹಾನವಮಿ ದಿಬ್ಬದ ಬಳಿ ಅಳವಡಿಕೆ ಮಾಡಲಾಗಿರುವ ಫಲಕದ ಧೂಳು ಒರೆಸಿ ಓದುತ್ತಿರುವುದು.