ಲೋಪ ಕಂಡ್ರೂ ಕ್ರಮಕ್ಕೆ ಸಿಎಫ್‌ ಮೀನಮೇಷ?

| Published : Mar 06 2024, 02:15 AM IST

ಸಾರಾಂಶ

ಗುಂಡ್ಲುಪೇಟೆ-ಕೇರಳ ರಸ್ತೆಯ ನೆಡುತೋಪಿನಲ್ಲಿ ಮರ ಕಡಿದ ಪ್ರಕರಣ, ಜಿಂಕೆ ಸತ್ತ ಪ್ರಕರಣ, ಶ್ರೀಗಂಧದ ನೆಡುತೋಪು ಬೇಸಿಗೆಯಲ್ಲಿ ಸಸಿ ನೆಟ್ಟು ವಿವಾದ ಎಬ್ಬಿಸಿರುವ ಆರ್‌ಎಫ್‌ಒ ಮಂಜುನಾಥ್‌ ಮೇಲೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆ-ಕೇರಳ ರಸ್ತೆಯ ನೆಡುತೋಪಿನಲ್ಲಿ ಮರ ಕಡಿದ ಪ್ರಕರಣ, ಜಿಂಕೆ ಸತ್ತ ಪ್ರಕರಣ, ಶ್ರೀಗಂಧದ ನೆಡುತೋಪು ಬೇಸಿಗೆಯಲ್ಲಿ ಸಸಿ ನೆಟ್ಟು ವಿವಾದ ಎಬ್ಬಿಸಿರುವ ಆರ್‌ಎಫ್‌ಒ ಮಂಜುನಾಥ್‌ ಮೇಲೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ತೆರಕಣಾಂಬಿ ಬಳಿಕ ಜಿಂಕೆ ಸತ್ತ ಪ್ರಕರಣದಲ್ಲಿ ಆರ್‌ಎಫ್‌ಒ ಮಂಜುನಾಥ್‌ ಸೂಚನೆಯಂತೆ ಸತ್ತ ಜಿಂಕೆ ಸುಟ್ಟ ಪ್ರಕರಣದಲ್ಲಿ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್‌ ರನ್ನು ಸಸ್ಪೆಂಡ್‌ ಮಾಡಿ ಬೀಗಿದ್ದಾರೆ.

ಆರ್‌ ಎಫ್‌ಒ ಸೂಚನೆ ಮೇರೆಗೆ ಜಿಂಕೆ ಸುಟ್ಟ ಪ್ರಕರಣದಲ್ಲಿ ಡಿಆರ್‌ಎಫ್‌ಒ ರಾಮಲಿಂಗಪ್ಪ ಹೇಗೇ ಕರ್ತವ್ಯ ಹಾಗೂ ಬೇಜವಬ್ದಾರಿ ಇತ್ತೋ ಅದಕ್ಕಿಂತಲೂ ಹೆಚ್ಚಿನ ಜವಬ್ದಾರಿ ಹೊತ್ತ ಆರ್‌ಎಫ್‌ಒ ಮಂಜುನಾಥ್‌ ಮೇಲೇಕೆ ಕ್ರಮ ತೆಗೆದುಕೊಂಡಿಲ್ಲ. ಮೇಲ್ಕಂಡ ಪ್ರಕರಣದ ಜೊತೆಗೆ ಗುಂಡ್ಲುಪೇಟೆ-ಕೇರಳ ಹೆದ್ದಾರಿ ಬದಿಯ ಲೇ ಔಟ್‌ ಮಾಲೀಕರೊಬ್ಬರು ಹೆದ್ದಾರಿ ಬದಿಯ ನೆಡುತೋಪಿನಲ್ಲಿದ್ದ ಮರಗಳನ್ನು ಕಡಿದ ಪ್ರಕರಣ ನಡೆದು ಮೂರು ತಿಂಗಳಾದರೂ ಆರ್‌ಎಫ್‌ಒ ಮಂಜುನಾಥ್‌ ಕೇಸು ದಾಖಲಿಸಿಲ್ಲ. ಸತ್ತ ಜಿಂಕೆ ಪ್ರಕರಣ, ಹೆದ್ದಾರಿ ಬದಿ ನೆಡುತೋಪಿನ ಮರ ಕಡಿತ ಪ್ರಕರಣದ ಜೊತೆಗೆ ಗೋಪಾಲಸ್ವಾಮಿ ಬೆಟ್ಟದ ವಲಯದ ಸಫಾರಿ ಕೇಂದ್ರದ ಹಿಂಭಾಗ ಆರ್‌ಎಫ್‌ ಒ ಮಂಜುನಾಥ್ ಬೇಸಿಗೆಯ ಆರಂಭದಲ್ಲಿ ಶ್ರೀಗಂಧದ ಸಸಿ ನೆಟ್ಟು ಅರಣ್ಯ ಇಲಾಖೆಯೇ ಹುಬ್ಬೇರಿಸುವಂತೆ ಮಾಡಿದ್ದಾರೆ.ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ ಸಸಿ ನೆಡುವುದು ಮಳೆಗಾಲದಲ್ಲಿ ಆದರೆ ಆರ್‌ಎಫ್‌ಒ ಮಂಜುನಾಥ್‌ ಮಾತ್ರ ಬೇಸಿಗೆ ಆರಂಭದ ಡಿಸೆಂಬರ್‌ ಅಂತ್ಯದಲ್ಲಿ ಸಸಿ ನೆಡಲು ಆರಂಭಿಸಿ ಜನವರಿಯಲ್ಲಿ ಮುಗಿಸಿದ್ದಾರೆ. ಬೇಸಿಗೆ ಅರಂಭದಲ್ಲಿ ಶ್ರೀಗಂಧದ ನೆಡು ತೋಪು ಮಾಡಲು ಹೋಗಿದ್ದಾರೆ ಆದರೆ ಬಿರು ಬೇಸಿಗೆಗೆ ಒಂದು ಶ್ರೀಗಂಧದ ಸಸಿ ಹುಡುಕಿದರೂ ಸಿಗುತ್ತಿಲ್ಲ. ಲಕ್ಷಾಂತರ ರು. ಶ್ರೀಗಂಧದ ತೋಪಿಗೆ ಹಾಕಿ ಮಣ್ಣು ಪಾಲು ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೇ ಹೇಳಿದ್ದಾರೆ.

ಆರ್‌ಎಫ್‌ಒ ಆಪ್ತ ಹಾಗಾಗಿ ಕ್ರಮವಿಲ್ಲ?ಗುಂಡ್ಲುಪೇಟೆ ಬಫರ್‌ ಜೋನ್‌ ಹಾಗು ಮೇಲುಕಾಮನಹಳ್ಳಿ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಪರಮಾಪ್ತ ಹಾಗಾಗಿ ಏನೇ ತಪ್ಪು ಮಾಡಿದ್ರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಮಾತು ಅಧಿಕಾರಿ ವಲಯಲ್ಲೇ ಕೇಳಿ ಬಂದಿದೆ. ಸತ್ತ ಜಿಂಕೆ ಸತ್ತ ಪ್ರಕರಣ,ಗುಂಡ್ಲುಪೇಟೆ ಬಳಿಕ ನೆಡುತೋಪಿನ ಮರ ಕಡಿದ ಪ್ರಕರಣ ಹಾಗು ಶ್ರೀಗಂಧದ ನೆಡುತೋಪು ಬೇಸಿಗೆಯಲ್ಲಿ ಸಸಿ ಹಾಕಿದ ಪ್ರಕರಣದಲ್ಲಿ ಆರ್‌ಎಫ್‌ಒ ಮಂಜುನಾಥ್‌ ಕರ್ತವ್ಯ ಲೋಪ ಎದ್ದು ಕಂಡರೂ ಸಿಎಫ್‌ ಕೇವಲ ನೋಟೀಸ್‌ ನೀಡಿ ಕೈ ತೊಳೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಎಸಿಎಫ್‌ ಜಿ.ರವೀಂದ್ರಗೆ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಮೂರು ನೋಟೀಸ್‌ ನೀಡಿದ್ದಾರೆ ಎನ್ನಲಾಗಿದ್ದು ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ನಡೆ ನೋಡಿದರೆ ಒಬ್ಬರ ಕಣ್ಣಿಗೆ ಬೆಣ್ಣೆ,ಮತ್ತೊಬ್ಬರ ಕಣ್ಣಿಗೆ ಸುಣ್ಣ ಹಾಕಿದ್ದಾರೆಂದು ಸಿಎಫ್‌ ಕೈ ಕೆಳಗಿನ ಅಧಿಕಾರಿಗಳೇ ಮಾತನಾಡುತ್ತಿದ್ದಾರೆ.ಡಾ.ಪಿ.ರಮೇಶ್‌ ಕುಮಾರ್‌ ಕಾಲದಲ್ಲಿ ಆರ್‌ಎಫ್‌ಒ, ಎಸಿಎಫ್‌ ಗಳು ನೆಮ್ಮದಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೇವಲ ಇಬ್ಬರು ಆರ್‌ಎಫ್‌ಒಗಳಿಗೆ ಸಿಎಫ್‌ ಆಗಿದ್ದಾರಾ ಎಂಬ ಪ್ರಶ್ನೆಯನ್ನು ಇಲಾಖೆಯ ಅಧಿಕಾರಿಗಳೇ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಆರ್‌ಎಫ್‌ಒಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಿಎಫ್‌ ಮೇಲೆ ಕ್ರಮ ತೆಗೆದುಕೊಳ್ಳಲು ಇರುವ ಅಡ್ಡಿ ಏನು? ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿಸುವ ಸಿಎಫ್‌ ವರ್ಗಾವಣೆ ಕೂಡಲೇ ಆಗಬೇಕು ಇಲ್ಲದಿದ್ದರೆ ಅರಣ್ಯ ಭವನದಲ್ಲಿ ಹೋರಾಟ ಅನಿವಾರ್ಯ.