ಸಿಬ್ಬಂದಿಗಳ ಆರೋಗ್ಯಕ್ಕಾಗಿ ಅರಣ್ಯ ಇಲಾಖೆ ಬದ್ಧ: ರಮೇಶ್‌ ಬಾಬು

| Published : Oct 07 2025, 01:02 AM IST

ಸಾರಾಂಶ

ಚಿಕ್ಕಮಗಳೂರು, ವನ್ಯ ಸಂಪತ್ತು ರಕ್ಷಣೆಯ ಕಾಯಕದಲ್ಲಿ ಸದಾ ಕಾಲ ನಿರತರಾದ ಅರಣ್ಯ ಸಿಬ್ಬಂದಿಗಳ ಸದೃಢ ಆರೋಗ್ಯಕ್ಕಾಗಿ ಇಲಾಖೆ ಯಿಂದ ಶಿಬಿರ ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರಮೇಶ್ ಬಾಬು ಹೇಳಿದರು.

ವನ್ಯಜೀವಿ ಸಂಪ್ತಾಹ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವನ್ಯ ಸಂಪತ್ತು ರಕ್ಷಣೆಯ ಕಾಯಕದಲ್ಲಿ ಸದಾ ಕಾಲ ನಿರತರಾದ ಅರಣ್ಯ ಸಿಬ್ಬಂದಿಗಳ ಸದೃಢ ಆರೋಗ್ಯಕ್ಕಾಗಿ ಇಲಾಖೆ ಯಿಂದ ಶಿಬಿರ ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರಮೇಶ್ ಬಾಬು ಹೇಳಿದರು.

ನಗರದ ಆಫೀಸರ್ಸ್‌ ಕ್ಲಬ್‌ನಲ್ಲಿ ಸೋಮವಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವನ್ಯಜೀವಿ ಸಂಪ್ತಾಹ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗ ಹಾಗೂ ಕುಟುಂಬಸ್ಥರಿಗೆ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ವೃತ್ತಿ ಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ. ಹೀಗಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಶ್ರೇಯೋಭಿವೃದ್ಧಿ ಇಲಾಖೆ ಮುಂದಾಗಿದೆ ಎಂದರು.ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಪ್ರಥಮ ಚಿಕಿತ್ಸೆಯನ್ನು ಸ್ಥಳದಲ್ಲೇ ಒದಗಿಸಲು ಇಲಾಖೆ ಮುಂದಾಗಿದೆ. ಆದರೆ ಕೆಲವೊಮ್ಮೆ ಆರೋಗ್ಯದಲ್ಲಿ ವಿಪರೀತ ಏರುಪೇರು ಕಂಡು ಬಂದಲ್ಲಿ ನಗರಕ್ಕಾಗಮಿಸಬೇಕು. ಹೀಗಾಗಿ ವರ್ಷದಲ್ಲಿ ಒಂದೆರಡು ಬಾರಿ ಶಿಬಿರ ನಡೆಸಿ ಸಿಬ್ಬಂದಿ ದೇಹಸ್ಥಿತಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು.ಭದ್ರಾ ಹಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀಣಾ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಆರೋಗ್ಯ ಸದೃಢವಾಗಿರುವ ದೃಷ್ಟಿಯಿಂದ ಸರ್ಕಾರ ಶಿಬಿರ ಆಯೋಜಿಸಿದ್ದು ಜಿಲ್ಲೆಯ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ ಸದ್ಬಳಕೆ ಮಾಡಿಕೊಂಡಲ್ಲಿ ಶಿಬಿರ ಯಶಸ್ವಿಗೊಂಡಂತೆ ಎಂದರು.ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ, ಕಾಡು ಪ್ರಾಣಿಗಳ ನಡುವೆ ಧೈರ್ಯವಾಗಿ ಅರಣ್ಯ ಸಂಪತ್ತು ಕಾಯುತ್ತಿರುವ ಸಿಬ್ಬಂದಿ ಆರೋಗ್ಯ ಕಾಪಾಡುವುದು ಇಲಾಖೆ ಕರ್ತವ್ಯ. ಕನಿಷ್ಠ 2 ತಿಂಗಳಿಗೊಮ್ಮೆ ಸ್ಥಳದಲ್ಲೇ ಮೊಬೈಲ್ ಕ್ಲೀನಿಕ್ ಆರಂಭಿಸಿದರೆ ರೆಡ್‌ಕ್ರಾಸ್ ಸಂಪೂರ್ಣವಾಗಿ ಕೈ ಜೋಡಿಸಲಿದೆ ಎಂದು ಹೇಳಿದರು.ಇದೇ ವೇಳೆ ವಿವಿಧ ತಾಲೂಕಿನಿಂದ ಸುಮಾರು 400ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡು ನೇತ್ರ, ಬಿಪಿ ಹಾಗೂ ಮಧು ಮೇಹದ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಗಾದರು.ಅರಣ್ಯ ಇಲಾಖೆ ಚಿಕ್ಕಮಗಳೂರು ವೃತ್ತದ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರಸ್ವಾಮಿ, ಪ್ರಥಮ ದರ್ಜೆ ಸಹಾಯಕ ಬಿ.ರುದ್ರೇಶ್‌ಕುಮಾರ್ ಉಪಸ್ಥಿತರಿದ್ದರು.

6 ಕೆಸಿಕೆಎಂ 3ಚಿಕ್ಕಮಗಳೂರಿನ ಆಫಿಸರ್ಸ್‌ ಕ್ಲಬ್‌ನಲ್ಲಿ ಸೋಮವಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವನ್ಯಜೀವಿ ಸಂಪ್ತಾಹ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಡಿಎಫ್‌ಒ ರಮೇಶ್‌ಬಾಬು ಉದ್ಘಾಟಿಸಿ ಮಾತನಾಡಿದರು.