ಕಾಡಾನೆ ಹಾವಳಿ ಬೆಳೆ ನಾಶ: ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ

| Published : Aug 30 2024, 01:05 AM IST

ಸಾರಾಂಶ

ಮೂಡಿಗೆರೆ: ತಾಲೂಕಿನ ಸತ್ತಿಗನಹಳ್ಳಿ, ಹೊಸಕೆರೆ, ಊರುಬಗೆ ಭಾಗದಲ್ಲಿ ಕಳೆದ ಒಂದು ವಾರದಿಂದ 2 ಕಾಡಾನೆ ತೋಟಗಳಿಗೆ ಲಗ್ಗೆ ಹಾಕಿ ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಬೆಳೆಗಳನ್ನು ನಾಶಪಡಿಸಿವೆ.

ಮೂಡಿಗೆರೆ: ತಾಲೂಕಿನ ಸತ್ತಿಗನಹಳ್ಳಿ, ಹೊಸಕೆರೆ, ಊರುಬಗೆ ಭಾಗದಲ್ಲಿ ಕಳೆದ ಒಂದು ವಾರದಿಂದ 2 ಕಾಡಾನೆ ತೋಟಗಳಿಗೆ ಲಗ್ಗೆ ಹಾಕಿ ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಬೆಳೆಗಳನ್ನು ನಾಶಪಡಿಸಿವೆ.

ಈ ಕಾಡಾನೆಗಳು ಕಳೆದ ಒಂದು ತಿಂಗಳಿಂದ ಸತ್ತಿಗನಹಳ್ಳಿ, ಹೊಸಕೆರೆ, ಊರುಬಗೆ ಭಾಗದಲ್ಲಿ ತಿರುಗಾಡುತ್ತಿವೆ. ಈಗಾಗಲೇ ಸತ್ತಿಗನಹಳ್ಳಿಯ ವಾಸು, ಗೋಪಾಲಗೌಡ, ಮಂಜುನಾಥಗೌಡ ಎಂಬುವರ ತೋಟದಲ್ಲಿ ಸಂಚರಿಸುತ್ತಿದ್ದು, ಕಾಫಿ ಅಡಕೆ, ಕಾಳುಮೆಣಸು ಬೆಳೆ ನಾಶಪಡಿಸುತ್ತಿವೆ. ಸತ್ತಿಗನಹಳ್ಳಿಯ ವಾಸು ಎಂಬುವರ ಮನೆ ಸಮೀಪಕ್ಕೆ ಆಗಮಿಸಿ ಅಲ್ಲಿದ್ದ ಬಗನೆ ಮರವನ್ನು ನೆಲಕ್ಕುರುಳಿಸಿದ್ದು, ಮರ ಮನೆ ಮೇಲೆ ಬಿದ್ದು ಹೆಂಚುಗಳು ತುಂಡಾಗಿವೆ. ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನ ಹೊರ ಬರಲು ಭಯಭೀತರಾಗಿದ್ದು, ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆಯಲ್ಲಿರುವ ಕಾಡಾನೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಪೋಟೋ ಫೈಲ್‌ ನೇಮ್‌ :

ಮೂಡಿಗೆರೆ ತಾಲೂಕಿನ ಸತ್ತಿಗನಹಳ್ಳಿಯ ವಾಸು ಎಂಬುವರ ಮನೆ ಮುಂದೆ ಇದ್ದ ಬಗನೆ ಮರವನ್ನು ಕಾಡಾನೆ ನೆಲಕ್ಕುರುಳಿಸಿದೆ.