ಇಂದು ರೈಸ್ ಮಿಲ್ ಆವರಣದಲ್ಲಿ ವನಮಹೋತ್ಸವ: ಮಹಾಂತೇಶ್‌

| Published : Jul 20 2025, 01:15 AM IST

ಸಾರಾಂಶ

ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ ಮತ್ತು ದಾವಣಗೆರೆ ಜಿಲ್ಲಾ ಗಾಣಿಗರ ಸಮಾಜ ವತಿಯಿಂದ ಶ್ರೀಮತಿ ಬಸಮ್ಮ ಶ್ರೀ ಜಗಳೂರು ಮಹಲಿಂಗಪ್ಪ ಸವಿನೆನಪಿಗಾಗಿ ಜು.20ರಂದು ಬೆಳಗ್ಗೆ 10 ಗಂಟೆಗೆ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ ರಾಜಾಧ್ಯಕ್ಷ ಮಹಾಂತೇಶ್ ವಿ. ಚೋಳಚಗುಡ್ಡ ಹೇಳಿದ್ದಾರೆ.

- ಬಸಮ್ಮ, ಜಗಳೂರು ಮಹಲಿಂಗಪ್ಪ ಸವಿನೆನಪಿಗಾಗಿ ಆಯೋಜನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ ಮತ್ತು ದಾವಣಗೆರೆ ಜಿಲ್ಲಾ ಗಾಣಿಗರ ಸಮಾಜ ವತಿಯಿಂದ ಶ್ರೀಮತಿ ಬಸಮ್ಮ ಶ್ರೀ ಜಗಳೂರು ಮಹಲಿಂಗಪ್ಪ ಸವಿನೆನಪಿಗಾಗಿ ಜು.20ರಂದು ಬೆಳಗ್ಗೆ 10 ಗಂಟೆಗೆ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ ರಾಜಾಧ್ಯಕ್ಷ ಮಹಾಂತೇಶ್ ವಿ. ಚೋಳಚಗುಡ್ಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ನಗರದ ಭಾರತ್ ಕಾಲೋನಿಯ ಜಗಳೂರು ರೈಸ್ ಮಿಲ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾವೂ ಸೇರಿದಂತೆ ಹಾವೇರಿಯ ಮಾಜಿ ಶಾಸಕ ಶಿವರಾಜು ಎಸ್.ಸಜ್ಜನರ್, ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ಗೌರವಾಧ್ಯಕ್ಷ ಚಿದಾನಂದ ಎಲ್.ಸವದಿ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆರ್. ಜಿ.ಪಾಟೀಲ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ್, ಆಜಾದ್‌ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಸ್ವಾಮಿ ಆಗಮಿಸಲಿದ್ದಾರೆ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಜಿಲ್ಲಾ ಗಾಣಿಗರ ಸಮಾಜದ ಅಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಚಿತ್ರದುರ್ಗ ಜಿಲ್ಲೆ ಅಧ್ಯಕ್ಷ ಡಿ.ಎಸ್.ಸುರೇಶ್ ಬಾಬು ಸೇರಿದಂತೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಮಹಿಳಾ ಗಾಣಿಗ ಸಮಾಜದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರತ್ನ ಸಿದ್ದೇಶ್, ವಿಜಯಲಕ್ಷ್ಮಿ, ಜಲಜಾ ವಾಮದೇವ, ಆದರ್ಶ ಆರ್.ಜಗಳೂರು, ಡಾ.ದೀಪಕ್ ಕುಮಾರ್, ವಿನಯ್ ದೇವಿಗೆರೆ, ವಾಮದೇವ ನ್ಯಾಮತಿ, ವಿಜಯಕುಮಾರ್, ಮಂಜುನಾಥ್ ಇತರರು ಇದ್ದರು.

- - -

-17ಕೆಡಿವಿಜಿ37: