ವೈಷಮ್ಯ ಮರೆತು ಸಹಬಾಳ್ವೆಯಿಂದ ಬಾಳಿ: ಸಿಪಿಐ ಷಣ್ಮುಖಪ್ಪ

| Published : Feb 12 2024, 01:31 AM IST

ವೈಷಮ್ಯ ಮರೆತು ಸಹಬಾಳ್ವೆಯಿಂದ ಬಾಳಿ: ಸಿಪಿಐ ಷಣ್ಮುಖಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅಬ್ಬಿನಹೊಳೆ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ದಲಿತ ದಿನಾಚರಣೆ ಹಾಗೂ ಕುಂದುಕೊರತೆಗಳ ಸಭೆಯನ್ನು ಸಿಪಿಐ ಷಣ್ಮುಖಪ್ಪ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕಾನೂನು ಸುವ್ಯವಸ್ಥೆ ಕಾಪಾಡುವುದರ ಮೂಲಕ ಶಾಂತಿ, ನೆಮ್ಮದಿ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಿಪಿಐ ಷಣ್ಮುಖಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣಾ ಆವರಣದಲ್ಲಿ ಅಬ್ಬಿನಹೊಳೆ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದಲಿತ ದಿನಾಚರಣೆ ಹಾಗೂ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ವೈಷಮ್ಯ ಬೆಳೆಸಿಕೊಳ್ಳದೆ ಒಬ್ಬರಿಗೊಬ್ಬರು ಸಾಮರಸ್ಯದಿಂದ ಬದುಕಬೇಕು. ಕಲಹ, ಜಗಳಗಳಿಂದ ಯಾವುದೇ ಪ್ರಯೋಜನವಿಲ್ಲ. ನೆಮ್ಮದಿ ಬದುಕಿನಿಂದ ಮಾತ್ರ ಜೀವನ ಸಾರ್ಥಕತೆ ಕಾಣುತ್ತದೆ. ಸಂಸಾರದ ಕಡೆ ಗಮನ ಹರಿಸಿ ಯಾವುದೇ ಜಗಳಗಳಿಗೆ ಆಸ್ಪದ ನೀಡದೇ ಇರುವುದು ಒಳಿತು ಎಂದರು.

ಪಿಎಸ್ಐ ಬಾಹುಬಲಿ ಮಾತನಾಡಿ ದಲಿತರ ಮೇಲೆ ಯಾವುದೇ ರೀತಿಯ ದೌರ್ಜನ್ಯ, ದಬ್ಬಾಳಿಕೆ ನಡೆದರೆ ಎಂದಿಗೂ ಸಹಿಸುವುದಿಲ್ಲ. ಯಾರ ಒತ್ತಡಕ್ಕೆ ಮಣಿಯದೆ ಪಾರದರ್ಶಕ ರೀತಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ವರ್ಗದವರೂ ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಇದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ದಲಿತರು ಮೊದಲು ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಶಿಕ್ಷಿತರನ್ನಾಗಿಸಬೇಕು.

ಅಪಘಾತ, ಜಮೀನು ಮುಂತಾದ ವಿವಾದಗಳ ಬಗ್ಗೆ ದಾಖಲಾಗಿರುವ ಪ್ರಕರಣಗಳನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಿಎಸ್ಐ ಮಂಜುನಾಥ್, ದಲಿತ ಮುಖಂಡರಾದ ಕೆಪಿ ಶ್ರೀನಿವಾಸ್, ಈಶ್ವರಪ್ಪ,ರಂಗಸ್ವಾಮಿ, ಚಿದಾನಂದ್, ಕೃಷ್ಣಪ್ಪ , ಖಂಡೇನಹಳ್ಳಿ ಈಶ್ವರಪ್ಪ, ಹೇಮಂತ್ ಗೌಡ, ಪೊಲೀಸ್ ಸಿಬ್ಬಂದಿಗಳಾದ ಎಸ್. ನಾಗರಾಜ್, ರುದ್ರೇಶ್ , ಗಗನ್, ಕೆ. ನಾಗರಾಜ್ ಸೇರಿದಂತೆ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಮುಖಂಡರು ಭಾಗವಹಿಸಿದ್ದರು.