ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ

| Published : Aug 24 2025, 02:01 AM IST

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ಭೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಪಕ್ಷ ಭೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಾಗೂ ಮೃತ್ಯುಂಜಯ ಸರ್ಕಲದಿಂದ ಮಲ್ಲಾಪೂರ ಪಿ.ಜಿ ಯ ಕಾಳಿಕಾ ದೇವಿ ದೇವಸ್ಥಾನವರೆಗಿನ ಮುಖ್ಯರಸ್ತೆಯ ನವೀಕರಣ ಕಾರ್ಯಕ್ರಮದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.ರಾಮಣ್ಣ ಹುಕ್ಕೇರಿ ಮಾತನಾಡಿ, ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನವು ಇದರಲ್ಲಿ ಸಿಗುತ್ತದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ ₹5 ನೀಡಿದರೇ ಉಪಹಾರ ಮತ್ತು ₹10 ನೀಡಿದರೇ ಊಟವು ಕಡಿಮೆ ದರದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಗುಣಮಟ್ಟದ ಆಹಾರವು ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಪುರಸಭೆಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ನಂತರ ಶಾಸಕರು ಇಂದಿರಾ ಕ್ಯಾಂಟಿನ್‌ದಲ್ಲಿ ತಯಾರಿಸಿದ ತಿಂಡಿ, ತಿನಿಸುಗಳನ್ನು ಪರೀಕ್ಷಿಸಿದರು. ನಂತರ 2023-24ನೇ ಸಾಲಿನ ಎಸ್‌ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದ ಇತರೆ ಬಡ ಜನರ ಯೋಜನೆಯಡಿ ಬಿ.ಇ/ಎಂ.ಬಿ.ಬಿ.ಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ಗುಬ್ಬಲಗುಡ್ಡ ಮಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರಿಗಾರ ಗುರುಗಳು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಟಿ.ಆರ್.ಕಾಗಲ, ಮುಖ್ಯಾಧಿಕಾರಿ ಎಂ.ಎಸ್ ಪಾಟೀಲ, ಹಿರಿಯರಾದ ಡಿ.ಎಂ.ದಳವಾಯಿ, ರಾಮಣ್ಣ ಹುಕ್ಕೇರಿ, ಈಶ್ವರ ಮಟಗಾರ, ಜಿ.ಎಸ್.ರಜಪೂತ, ರಮೇಶ ತುಕ್ಕಾನಟ್ಟಿ, ಅರವಿಂದ ಬಡಕುಂದ್ರಿ, ಮುಸ್ಲಿಂ ಸಮುದಾಯದ ಹೈದರ್‌ ಮನಿಯಾರ, ಮೌಲಾ ಬಾಗವಾನ, ಜಾಹಗೀರ್‌ ಬಾಗವಾನ, ದಿಲಾವರ ನದಾಫ, ಮದಾರಸಾಬ ಜಗದಾಳ, ಮದಾರ ನಾಲಬಂದ, ಪಪಂ ಮಾಜಿ ಸದಸ್ಯರಾದ ಪ್ರವೀಣ ಮಟಗಾರ, ಈರಣ್ಣ ಕಲಕುಟಗಿ, ಸಲೀಮ್‌ ಕಬ್ಬೂರ, ಮಲ್ಲು ಕೋಳಿ, ನಾಗರಾಜ ಚಚಡಿ, ಇಮ್ರಾನ್‌ ಬಟಕುರ್ಕಿ, ಮಾರುತಿ ಹುಕ್ಕೇರಿ, ಕರವೇ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಮಹೇಶ ಪಾಟೀಲ, ಹನಮಂತ ಗಾಡಿವಡ್ಡರ, ಶೇಖರ್ ರಜಪೂತ, ನಾಗರಾಜ ನಾಯಿಕ, ಸುರೇಶ ಪಾಟೀಲ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸುಧೀರ ಜೋಡಟ್ಟಿ, ಸುರೇಶ್ ಪೂಜೇರಿ, ಕಾಡಪ್ಪ ಕರೋಶಿ, ಅಪ್ಪಾಸಾಬ ಮುಲ್ಲಾ, ಭರಮಣ್ಣ ಗಾಡಿವಡ್ಡರ, ಶೇಖರ ಕುಲಗೂಡ, ಕೃಷ್ಣಾ ಗಂಡವ್ವಗೋಳ, ಕಲ್ಲೋಳ್ಳೆಪ್ಪ ಗಾಡಿವಡ್ಡರ,ಜುಬೇರ ಡಾಂಗೆ, ನವೀನ್ ಉಪ್ಪಾರ, ಲಕ್ಷ್ಮಣ ಮೇತ್ರಿ. ಪುರಸಭೆ ಅಧಿಕಾರಿಗಳಾದ ಯಲ್ಲಪ್ಪ ಚಲುವಾದಿ, ಎನ್.ಎಸ್.ಮಾಲದಿನ್ನಿ, ರಾಜು ಗನಾಚಾರಿ, ರಮೇಶ ಗಂಡವ್ವಗೋಳ, ಮಹಾಂತೇಶ ದೊಡಲಿಂಗಪ್ಪಗೋಳ, ಅಕ್ಷಯ ಮಾನಗಂವಿ, ಇಯರ್ಷಾದಅಲಿ ಜಗದಾಳ, ರಮೇಜಾ ಹುದಲಿ ಸೇರಿದಂತೆ ಸರ್ವ ಸಿಬ್ಬಂದಿ ವರ್ಗದವರು ಇದ್ದರು.ಸಿ.ಸಿ ಕ್ಯಾಮೆರಾ ಅಳವಡಿಕೆ, ರಸ್ತೆ ಅಭಿವೃದ್ಧಿ

ಘಟಪ್ರಭಾ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ.7ರಲ್ಲಿ ಸಯ್ಯದ್‌ ಜಿಂದನ್ನವರ ಮನೆಯಿಂದ ಗೌಸಖಾನ ಕಿತ್ತೂರಕರರವರ ಮನೆಯವರೆಗೆ ಸಿ.ಸಿ ರಸ್ತೆಗೆ ಭೂಮಿಪೂಜೆ ಹಾಗೂ ಪುರಸಭೆಯ ಕೆಲವೊಂದು ಸ್ಥಳದಲ್ಲಿ ಕಿಸೆಗಳ್ಳತನ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು 6 ಕಡೆ ಅಳವಡಿಸಲಾದ ಸಿ.ಸಿ ಕ್ಯಾಮೆರಾಗಳನ್ನು ಉದ್ಘಾಟಿಸಲಾಯಿತು. ಬಹು ದಿನಗಳ ಬೇಡಿಕೆಯಾದ ಘಟಪ್ರಭಾ ಮುಖ್ಯ ರಸ್ಥೆಯು 10-15 ವರ್ಷಗಳ ಹಿಂದೆ ಮಾಡಲಾಗಿತ್ತು. ಇಲ್ಲಿಯವರೆಗೆ ರಿಪೇರಿ ಮಾಡುತ್ತ ಬಂದಿದ್ದು, ಈಗ ಈ ರಸ್ತೆಗೆ ನವೀಕರಣದ ಭಾಗ್ಯ ಲಭ್ಯವಾಗಲಿದೆ. ರಸ್ತೆ ಅಗಲೀಕರಣ ಹಾಗೂ ಡಿವೈಡರ್‌ ರಸ್ತೆ ಮಾಡುವುದರಿಂದ ಟ್ರಾಫಿಕ್‌ ಸಮಸ್ಯೆ ನಿವಾರಣೆ ಆಗಲಿದೆ.ಪಕ್ಷ ಭೇದ ಮರೆತು ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುತ್ತ ಬಂದಿದ್ದೇವೆ. ಬಡ ಜನರ ಸಲುವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಎಲ್ಲ ಜನರಿಗೆ ಕಡಿಮೆ ಖರ್ಚಿನಲ್ಲಿ ಉಪಹಾರ ಹಾಗೂ ಊಟ ಲಭ್ಯವಿದೆ. ಇತರ ಯಾವುದೇ ಸಮಾಜದ ಕಾರ್ಯವಾಗಬೇಕಿದ್ದರೇ ನೇರವಾಗಿ ನಮ್ಮನ್ನು ಭೇಟಿಯಾಗಿ ಹೇಳಬಹುದು.

-ರಮೇಶ ಜಾರಕಿಹೊಳಿ,

ಶಾಸಕರು.