ಬನ್ನಿಮಹಾಂಕಾಳಿ ದೇಗುಲಕ್ಕೆ ತಾತ್ಕಾಲಿಕ ಸಮಿತಿ ರಚನೆ

| Published : Jul 05 2024, 12:45 AM IST

ಸಾರಾಂಶ

ರಾಮನಗರ: ನಗರದ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ಕರಗ ಆಚರಣೆ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ರಾಮನಗರ ತಹಸೀಲ್ದಾರ್ ತೇಜಸ್ವಿನಿ ತೆರೆ ಎಳೆದರು.

ರಾಮನಗರ: ನಗರದ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ಕರಗ ಆಚರಣೆ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ರಾಮನಗರ ತಹಸೀಲ್ದಾರ್ ತೇಜಸ್ವಿನಿ ತೆರೆ ಎಳೆದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಮ್ಮನವರ ಭಕ್ತಾಧಿಗಳು, ಮಂಡಿಪೇಟೆ, ಬಾಲಗೇರಿ ಟ್ರೂಪ್‌ಲೈನ್ ಸೇರಿದಂತೆ ರಾಮನಗರ ನಗರ ವ್ಯಾಪ್ತಿಯ ಪ್ರಮುಖ ಬಡಾವಣೆ ಸಾರ್ವಜನಿಕರನ್ನು ಒಳಗೊಂಡಂತೆ ಕರೆದಿದ್ದ ಶಾಂತಿ ಸಭೆಯಲ್ಲಿ ದೇವಾಲಯದ ಕರಗ ಮಹೋತ್ಸವ ಆಚರಣೆ ಸಂಬಂಧ ಉಂಟಾಗಿದ್ದ ಗೊಂದಲಗಳಿಗೆ ಅಧಿಕಾರಿಗಳು ತೆರೆ ಎಳೆದು ಸಾರ್ವಜನಿಕರ ಅನುಮತಿಯೊಂದಿಗೆ ಹೊಸ ಹಾಗೂ ತಾತ್ಕಾಲಿಕ ಸಮಿತಿ ರಚನೆ ಮಾಡಿದರು.

ದೇವಾಲಯವೂ ಮುಜರಾಯಿ ಇಲಾಖೆ ವ್ಯಾಪ್ತಿಯ ಸಿ ವರ್ಗಕ್ಕೆ ಆಗಮಿಸಿತ್ತು. ಸರಕಾರಿ ದೇವಾಲಯವಾದರು ಕೆಲವರು ಖಾಸಗಿ ಟ್ರಸ್ಟ್ ರಚಿಸಿ, ಕರಗ ಮಹೋತ್ಸವ ಆಚರಣೆ ಮಾಡಲು ಮುಂದಾಗಿದ್ದರು. ಈ ಸಂಬಂಧ ಸ್ಥಳೀಯರು, ಭಕ್ತಾದಿಗಳು ತಹಸೀಲ್ದಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮನವಿ ಸಲ್ಲಿಸಿದ್ದರು. ಸಾರ್ವಜನಿಕರಿಂದ ಆಗಮಿಸಿದ್ದ ಮನವಿಗಳನ್ನು ಪುರಸ್ಕರಿಸಿದ್ದ ಅಕಾರಿಗಳು ಟ್ರಸ್ಟ್‌ನ ಪದಾಕಾರಿಗಳು ಹಾಗೂ ಸಾರ್ವಜನಿಕರನ್ನು ಕರೆದು ಶಾಂತಿ ಸಭೆ ಆಯೋಜಿಸಿದ್ದರು.

ತಾತ್ಕಾಲಿಕ ಹೊಸ ಸಮಿತಿ:

ಸಾರ್ವಜನಿಕರು, ಸ್ಥಳೀಯರು, ಭಕ್ತಾದಿಗಳನ್ನೊಳಗೊಂಡ 8 ಮಂದಿ ಹೊಸ ಹಾಗೂ ತಾತ್ಕಾಲಿಕ ಸಮಿತಿ ರಚನೆ ಮಾಡಿದರು, ಈ ಸಮಿತಿ ಮುಖಾಂತರವೇ ಈ ವರ್ಷದ ಕರಗ ಮಹೋತ್ಸವ ಆಚರಣೆ ಮಾಡಲು ತಿಳಿಸಿದರು. ಆಮೂಲಕ ಕಳೆದ ಒಂದೂವರೆ ತಿಂಗಳಿನಿಂದ ಕರಗಮ ಹೋತ್ಸವ ಆಚರಣೆ ಸಂಬಂಧ ನಡೆಯುತ್ತಿದ್ದ ಗೊಂದಲ ಬಗೆಹರಿಯಿತು.

ಇದಕ್ಕೂ ಮುನ್ನ ಸಭೆಯಲ್ಲಿ ಸ್ಥಳೀಯ ನಿವಾಸಿಗಳಾದ ಹರೀಶ್, ಅರುಣ್, ಹರೀಶ್ ಬಾಲು ಅವರು, ಮುಜರಾಯಿ ವ್ಯಾಪ್ತಿಯ ದೇವಾಲಯಕ್ಕೆ ಖಾಸಗಿಯಾಗಿ ಟ್ರಸ್ಟ್ ಮಾಡಲು ಅವಕಾಶವಿಲ್ಲ. ಈ ಟ್ರಸ್ಟ್ ಅನ್ನು ರದ್ದುಗೊಳಿಸಿ, ಹೊಸ ಸಮಿತಿಯನ್ನು ರಚನೆ ಮಾಡಬೇಕು. ಇಲ್ಲವಾದರೆ ತಹಸೀಲ್ದಾರ್ ನೇತೃತ್ವದಲ್ಲಿ ಸರ್ಕಾರವೇ ಈ ಬಾರಿ ಕರಗ ಮಹೋತ್ಸವನ್ನು ಆಚರಿಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಟ್ರಸ್ಟ್‌ನ ಪದಾಕಾರಿಗಳು ಮಾತನಾಡಿ, ಅಮ್ಮನವರ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಸಂಬಂಧ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂಚೂಣಿ ಹಣವನ್ನು ನೀಡಲಾಗಿದೆ ಎಂದು ತಹಸೀಲ್ದಾರ್ ಗಮನಕ್ಕೆ ತಂದರು.

ಎರಡು ಕಡೆಯವರ ವಾದ ಆಲಿಸಿದ ತಹಸೀಲ್ದಾರ್ ತೇಜಸ್ವಿನ ಸ್ಥಳೀಕರು, ಭಕ್ತಾದಿಗಳು ಮತ್ತು ಹಿರಿಯರನ್ನೊಳಗೊಂಡ ತಾತ್ಕಾಲಿಕ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದರು.

ಈ ಸಮಿತಿಯು ಹಬ್ಬ ಆಚರಣೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ಸಭೆ ಆಯೋಜಿಸಬೇಕು. ಪ್ರತಿ ಸಭೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಬೇಕು. ಹಣಕಾಸು ವಿಚಾರಕ್ಕೆ ಸಂಬಂಸಿದ್ದಂತೆ ಇಲಾಖೆಯಿಂದ ಸಿಬ್ಬಂದಿ ನೇಮಿಸಲಾಗುತ್ತದೆ ಎಂದು ಆದೇಶಿಸಿದರು. ಈ ವೇಳೆ ಡಿವೈಎಸ್‌ಪಿ ದಿನಕರ್ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ, ರಾಮನಗರ ಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಕಾಶ್ ಸೇರಿದಂತೆ ರಾಮನಗರದ ಪುರ ಮುಖಂಡರು ಹಾಜರಿದ್ದರು.

ಕೋಟ್ ...............

ನಗರದ ಬನ್ನಿಮಾಂಕಾಳಿ ಅಮ್ಮನವರ ಈ ಬಾರಿ ಕರಗ ಮಹೋತ್ಸವ ಆಚರಣೆ ಸಂಬಂಧ ತಾತ್ಕಾಲಿಕವಾಗಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿನ ಸದಸ್ಯರ ಹಿನ್ನಲೆಯನ್ನು ಪರಿಶೀಲನೆ ಮಾಡಲಾಗುತ್ತದೆ. ಸದಸ್ಯರು ಸಹ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು.

-ತೇಜಸ್ವಿನಿ, ತಹಸೀಲ್ದಾರ್, ರಾಮನಗರ

4ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕು ಆಡಳಿತ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ರಾಮನಗರದ ಪುರ ನಿವಾಸಿಗಳು.