ಸಾರಾಂಶ
ಕಾಫಿ ಡೇ ಆವರಣದಲ್ಲಿ ನಡೆದ ವೈಕುಂಠ ಸಮಾರಾಧನೆ ಕಾರ್ಯದಲ್ಲಿ ದಿ.ಎಸ್.ಎಂ.ಕೃಷ್ಣರ ಪತ್ನಿಪ್ರೇಮಕೃಷ್ಣ, ಪುತ್ರಿಯರಾದ ಮಾಳವಿಕಾ ಹೆಗ್ಗಡೆ, ಶಾಂಭವಿ ಉಮೇಶ್, ಸಹೋದರ ದಿ.ಎಸ್.ಎಂ.ಶಂಕರ್ ಪತ್ನಿ ನಾಗವೇಣಿ, ಪುತ್ರಿ ಚೈತ್ರ ಪ್ರಕಾಶ್, ಪುತ್ರ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಪತ್ನಿ ಶೃತಿ ಸೇರಿದಂತೆ ಕುಟುಂಬಸ್ಥರು ಕೃಷ್ಣ ಅವರ ಸಮಾಧಿಗೆ ಹಾಲುತುಪ್ಪ ಎರೆದು ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣರ ವೈಕುಂಠ ಸಮಾರಾಧನೆ ಕಾರ್ಯ ಸ್ವಗ್ರಾಮ ತಾಲೂಕಿನ ಸೋಮನಹಳ್ಳಿಯಲ್ಲಿ ಶನಿವಾರ ನೆರವೇರಿತು.ಗ್ರಾಮದ ಸಮೀಪದ ಕಾಫಿ ಡೇ ಆವರಣದಲ್ಲಿ ನಡೆದ ವೈಕುಂಠ ಸಮಾರಾಧನೆ ಕಾರ್ಯದಲ್ಲಿ ದಿ.ಎಸ್.ಎಂ.ಕೃಷ್ಣರ ಪತ್ನಿ
ಪ್ರೇಮಕೃಷ್ಣ, ಪುತ್ರಿಯರಾದ ಮಾಳವಿಕಾ ಹೆಗ್ಗಡೆ, ಶಾಂಭವಿ ಉಮೇಶ್, ಸಹೋದರ ದಿ.ಎಸ್.ಎಂ.ಶಂಕರ್ ಪತ್ನಿ ನಾಗವೇಣಿ, ಪುತ್ರಿ ಚೈತ್ರ ಪ್ರಕಾಶ್, ಪುತ್ರ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಪತ್ನಿ ಶೃತಿ ಸೇರಿದಂತೆ ಕುಟುಂಬಸ್ಥರು ಕೃಷ್ಣ ಅವರ ಸಮಾಧಿಗೆ ಹಾಲುತುಪ್ಪ ಎರೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ಆಗಮಿಸಿದ ಉಪಮುಖ್ಯಮಂತ್ರ ಡಿ.ಕೆ.ಶಿವಕುಮಾರ್, ಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ, ಅಮರ್ತ್ಯ ಹೆಗಡೆ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಹಾಲುತುಪ್ಪ ಬಿಟ್ಟು ದೂಪ ನಮನ ಹಾಕಿ ನಮಸ್ಕರಿಸಿದರು.
ಬಳಿಕ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಂಸದ ಡಿ.ಕೆ.ಸುರೇಶ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಕೆ.ಎಂ.ಉದಯ್, ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಸಿ.ಪಿ.ಯೋಗೇಶ್ವರ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಕೆ.ಬಿ.ಚಂದ್ರಶೇಖರ್, ಎಡಿಜಿಪಿ ರವಿಕಾಂತೇಗೌಡ, ಕಾನೂನು ಮತ್ತು ಶಿಸ್ತು ವಿಭಾಗದ ಎಡಿಜಿಪಿ ಹಿತೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕೆಪಿಸಿಸಿ ಸದಸ್ಯ ಸತ್ಯಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಮಾಜಿ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಸಿ.ನಾಗೇಗೌಡ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು. ಕಾರ್ಯಕರ್ತರು ಸಹಸ್ತ್ರಾರು ಮಂದಿ ಎಸ್.ಎಂ. ಕೃಷ್ಣ ಅಭಿಮಾನಿಗಳು ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ಎಸ್ಸೆಂಕೆಗೆ ಇಷ್ಟವಾದ ತಿಂಡಿ ಇಟ್ಟು ಪೂಜೆ ಸಲ್ಲಿಕೆ:
ವೈಕುಂಠ ಸಮಾರಾಧನೆ ಕಾರ್ಯದಲ್ಲಿ ಕುಟುಂಬಸ್ಥರು ಎಸ್.ಎಂ.ಕೃಷ್ಣರಿಗೆ ಪ್ರಿಯವಾದ ತಿಂಡಿ ತಿನುಸುಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು.ಸಮಾಧಿಯ ಮೇಲೆ ಕೃಷ್ಣ ಅವರಿಗೆ ಇಷ್ಟವಾದ ಬೆಂಗಳೂರು ಚಿಕ್ಕಪೇಟೆಯ ಶ್ರೀವೆಂಕಟೇಶ್ವರ ಸ್ವೀಟ್ ಸ್ಟಾಲ್‌ನಿಂದ ತರಿಸಲಾಗಿದ್ದ ಮೈಸೂರು ಪಾಕು, ಬಾದಾಮಿ ಹಲ್ವಾ, ಡ್ರೈ ಜಾಮೂನ್ ಅಲ್ಲದೇ ಕೇಸರಿ ಬಾತ್, ರವೆ ಉಂಡೆ, ಕಡಲೆ ಮಿಠಾಯಿ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಡ್ರೈ ಫ್ರೂಟ್ ಸೇರಿದಂತೆ ವಿವಿಧ ಖಾದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.