ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ ಮಾದರಿ ರಾಜಕಾರಣಿ: ಶಾಸಕಿ ಎಂ.ಪಿ. ಲತಾ

| Published : Feb 09 2024, 01:45 AM IST

ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ ಮಾದರಿ ರಾಜಕಾರಣಿ: ಶಾಸಕಿ ಎಂ.ಪಿ. ಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಎಂ.ಪಿ. ಪ್ರಕಾಶ ಅವರು ಹಳ್ಳಿ- ಹಳ್ಳಿಗಳಲ್ಲಿ ನಾಯಕರನ್ನು ಬೆಳೆಸಿದರು ಎಂದು ಸ್ಮರಿಸಿದರು.

ಹರಪನಹಳ್ಳಿ: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ ಅವರ ಗರಡಿಯಲ್ಲಿ ನಾವು ಬೆಳೆದಿದ್ದೇವೆ. ತಂದೆ ಎಂ.ಪಿ. ಪ್ರಕಾಶ, ಸಹೋದರ ಎಂ.ಪಿ. ರವೀಂದ್ರ ಅವರ ಹಾದಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ನಡೆಯುತ್ತೇನೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.

ಗುರುವಾರ ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಎಂ.ಪಿ. ಪ್ರಕಾಶ ಅವರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಎಂಎಲ್‌ಎ ಅನ್ನುವುದಕ್ಕಿಂತ ಎಲ್ಲರ ಬಾಯಲ್ಲಿ ಈಗಿರುವ ಲತಕ್ಕ ಆಗಲು ಇಷ್ಟ ಎಂದ ಅವರು, ನಮ್ಮ ತಂದೆಯ ಪಾಠವನ್ನು ಯಾವತ್ತೂ ಮರೆಯಲ್ಲ. ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಹರಪನಹಳ್ಳಿ ಕ್ಷೇತ್ರಕ್ಕೆ ಮಾಡುತ್ತೇವೆ ಎಂದರು.

ಅಂದು ನಮ್ಮ ತಂದೆ ಎಂ.ಪಿ. ಪ್ರಕಾಶ ಅವರು ಅನುಷ್ಠಾನಗೊಳಿಸಿದ ನಿರ್ಮಲ ಕರ್ನಾಟಕ ಯೋಜನೆಯನ್ನು ಇಂದು ಬಿಜೆಪಿಯವರು ಸ್ವಚ್ಛ ಭಾರತ ಎಂದು ನಾಮಕರಣ ಮಾಡಿದ್ದಾರೆ ಎಂದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಎಂ.ಪಿ. ಪ್ರಕಾಶ ಅವರು ನಮ್ಮ ಮುಂದೆ ಇಲ್ಲ. ಆದರೆ ಅವರು ನೀಡಿದ ಶಾಶ್ವತ ಯೋಜನೆಗಳು ನಮ್ಮ ಮುಂದೆ ಇವೆ. ರಾಜಕಾರಣಿಗಳು ಎಂ.ಪಿ. ಪ್ರಕಾಶ ಅವರನ್ನು ಆದರ್ಶರನ್ನಾಗಿ ಇಟ್ಟುಕೊಳ್ಳಬೇಕು ಎಂದರು.

ಎಂ.ಪಿ. ಪ್ರಕಾಶ ಅವರ ಹಾದಿಯಲ್ಲಿ ಅವರ ಪುತ್ರ ಎಂ.ಪಿ. ರವೀಂದ್ರ ಇದೀಗ ಅವರ ಪುತ್ರಿ ಎಂ.ಪಿ. ಲತಾ ಸಾಗಿದ್ದಾರೆ ಎಂದರು.

ಎಂ.ಪಿ. ಪ್ರಕಾಶ ಅವರದು ರಾಜಕಾರಣದ ಜತೆಗೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಇದೆ ಎಂದರು.

ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಕುಬೇರಪ್ಪ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಎಂ.ಪಿ. ಪ್ರಕಾಶ ಅವರು ಹಳ್ಳಿ- ಹಳ್ಳಿಗಳಲ್ಲಿ ನಾಯಕರನ್ನು ಬೆಳೆಸಿದರು ಎಂದು ಸ್ಮರಿಸಿದರು.

ಪುರಸಭಾ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್‌ ಸಾಹೇಬ್‌ ಮಾತನಾಡಿ, ಎಂ.ಪಿ. ಪ್ರಕಾಶ ಅವರು ಅಪರೂಪದ ರಾಜಕಾರಣಿಯಾಗಿದ್ದರು. ಶಾಶ್ವತ ಯೋಜನೆಗಳನ್ನು ನಾಡಿಗೆ ನೀಡಿದ್ದಾರೆ ಎಂದರು.

ಉಚ್ಚಂಗಿದುರ್ಗದ ಶಿವಕುಮಾರಸ್ವಾಮಿ, ಪ್ರೊ. ಟಿ. ರಾಜಪ್ಪ ಮಾತನಾಡಿ, ಎಂ.ಪಿ. ಪ್ರಕಾಶ ಅವರ ವಿವಿಧ ಮಜಲುಗಳನ್ನು ಸ್ಮರಿಸಿದರು.

ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಗೌತಮಪ್ರಭು, ಎಚ್‌.ಎಂ. ಕೊಟ್ರಯ್ಯ, ಪುರಸಭಾ ಸದಸ್ಯರಾದ ಟಿ. ವೆಂಕಟೇಶ, ಉದ್ದಾರ ಗಣೇಶ, ಮುಖಂಡರಾದ ವಸಂತಪ್ಪ, ಲಕ್ಕಳ್ಳಿ ಹನುಮಂತಪ್ಪ, ದೊಡ್ಡಜ್ಜರ ಹನುಮಂತಪ್ಪ, ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ, ಗುಂಡಗತ್ತಿ ಗಾಯತ್ರಮ್ಮ, ಕವಿತಾ ಸುರೇಶ, ಭಾಗ್ಯಮ್ಮ, ಮತ್ತೂರು ಬಸವರಾಜ, ಶಿವರಾಜ, ಸಾಸ್ವಿಹಳ್ಳಿ ನಾಗರಾಜ, ಶಿವಕುಮಾರನಾಯ್ಕ, ಗುಡಿ ನಾಗರಾಜ ಇತರರು ಪಾಲ್ಗೊಂಡಿದ್ದರು.