ಸಾರಾಂಶ
ಸ್ವಾತಂತ್ರ್ಯ ನಂತರ ರೂಢಿಸಿದ ಮೊದಲ ಎರಡೂ ಶಿಕ್ಷಣ ನೀತಿಯನ್ನು ಯಾವ ರಾಜ್ಯ ಸರ್ಕಾರವೂ ತೆಗೆದು ಹಾಕಿದ ನಿದರ್ಶನವಿಲ್ಲ. ಶಿಕ್ಷಣ ವಲಯವನ್ನು ರಾಜಕೀಯದಿಂದ ಹೊರಗಿಡುವ ಜವಾಬ್ದಾರಿಯನ್ನು ತಾವೂ ಮುಂದುವರೆಸಿ ಎನ್ನುವ ಹಕ್ಕೊತ್ತಾಯದ ಬೇಡಿಕೆ ತಮ್ಮದಾಗಿದೆ
- ಡಾ.ಈ.ಸಿ. ನಿಂಗರಾಜ್ ಗೌಡ ಟೀಕೆಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರ ರಾಜಕಾರಣ ಮಾಡುವ ಉತ್ಸಾಹದಲ್ಲಿ ರಾಷ್ಟ್ರಕ್ಕೊಂದೇ ಶಿಕ್ಷಣ ನೀತಿ ಇರಬೇಕು ಎಂಬ ರಾಜೀವ್ಗಾಂಧಿ ಅವರ ಆಶಯವನ್ನು ಮರೆತಿದ್ದಾರೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಟೀಕಿಸಿದರು.ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವೇದಿಕೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ರೂಢಿಸಿದ ಮೊದಲ ಎರಡೂ ಶಿಕ್ಷಣ ನೀತಿಯನ್ನು ಯಾವ ರಾಜ್ಯ ಸರ್ಕಾರವೂ ತೆಗೆದು ಹಾಕಿದ ನಿದರ್ಶನವಿಲ್ಲ. ಶಿಕ್ಷಣ ವಲಯವನ್ನು ರಾಜಕೀಯದಿಂದ ಹೊರಗಿಡುವ ಜವಾಬ್ದಾರಿಯನ್ನು ತಾವೂ ಮುಂದುವರೆಸಿ ಎನ್ನುವ ಹಕ್ಕೊತ್ತಾಯದ ಬೇಡಿಕೆ ತಮ್ಮದಾಗಿದೆ ಎಂದು ಅವರು ಆಗ್ರಹಿಸಿದರು.
ಸರ್ಕಾರದ ಎಸ್.ಇ.ಪಿ ರಚನೆಯ ನಿಲುವಿನ ಹಿನ್ನಲೆ ಕುರಿತು ಕೇವಲ ಶಿಕ್ಷಣ ಕ್ಷೇತ್ರವಷ್ಟೇ ಅಲ್ಲದೇ ವಿದ್ಯಾರ್ಥಿಗಳ ಪಾಲಕರಿಗೂ ಅರಿವಿದೆ ಮತ್ತು ಅಸಮಾಧಾನವಿದೆ ಎಂಬುದು ವೇದಿಕೆ ಎನ್ಇಪಿ- 2020ರ ಕುರಿತು ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲೂ ನಡೆಸಿದ ಜಾಗೃತಿ ಒಟ್ಟು 53 ಕಾರ್ಯಕ್ರಮ ಮತ್ತು ನಂತರ ನಡೆದ ಸಹಿ ಅಭಿಯಾನo ವೇಳೆ ಸ್ಪಷ್ಟವಾಗಿದೆ ಎಂದರು.ಕೇವಲ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ನಡೆಸಿದ ಸಹಿ ಚಳವಳಿಯಲ್ಲಿ 80 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಅದರಲ್ಲೂ ಪ್ರಮುಖ ಪಾತ್ರಧಾರಿಗಳು ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳಾಗಿ ಪಾಲ್ಗೊಂಡಿದ್ದಾಗಿ ಅವರು ಹೇಳಿದರು.
ನಂತರ, ರಾಷ್ಟ್ರೀಯ ಶಿಕ್ಷಣ ನೀತಿ- 2020 ಪರ್ಯಾಯವಾಗಿ ಎಸ್.ಇ.ಪಿ ರಚಿಸುತ್ತಿರುವ ಸರ್ಕಾರ ಈವರೆಗೂ ಎನ್.ಇ.ಪಿ ಏಕೆ ಬೇಡವೆಂದು ರಾಜಕಾರಣದ ನಿಲುವಿನ ಹೊರತಾಗಿ ಸ್ಪಷ್ಟನೆ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಜೊತೆಗೆ, ಸಹಿ ಸಂಗ್ರಹದ ಪ್ರತಿಗಳ ಕಡತಗಳನ್ನು ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಜಿ.ಸಿ. ರಾಜಣ್ಣ, ಎಂ. ಶಿವು, ಪ್ರಜ್ವಲ್, ಪ್ರೊ. ಜಯಣ್ಣ ಮೊದಲಾದವರು ಇದ್ದರು.