ಮಾಜಿ ಸಚಿವ ಸಿ.ಟಿ.ರವಿ ರಾಷ್ಟ್ರ ಜನತೆ ಕ್ಷಮೆಯಾಚಿಸಲಿ: ಕೆ.ಜೆ.ದೇವರಾಜು ಆಗ್ರಹ

| Published : Feb 03 2024, 01:53 AM IST

ಮಾಜಿ ಸಚಿವ ಸಿ.ಟಿ.ರವಿ ರಾಷ್ಟ್ರ ಜನತೆ ಕ್ಷಮೆಯಾಚಿಸಲಿ: ಕೆ.ಜೆ.ದೇವರಾಜು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವವರು ಹಿಂದೂಗಳೇ. ಜಿಲ್ಲೆಯ ಜನರಿಗೆ ಸರಿ ತಪ್ಪುಗಳನ್ನು ನಿರ್ಧರಿಸುವ ಶಕ್ತಿ ಇದ್ದು, ನಿಮ್ಮ ಆಟಗಳು ಎಂದಿಗೂ ನಡೆಯುವುದಿಲ್ಲ.

ಕಾಂಗ್ರೆಸ್ ಮುಖಂಡ ಕೆ.ಜೆ.ದೇವರಾಜು ಆಗ್ರಹ । ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ತಾಲಿಬಾನ್ ಧ್ವಜ ಎಂದು ಹೇಳುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಬಿಜೆಪಿ ಮುಖಂಡ ಸಿ.ಟಿ.ರವಿ ಕೂಡಲೇ ರಾಷ್ಟ್ರದ ಜನತೆಗೆ ಕ್ಷಮೆ ಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ಆಗ್ರಹಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ ಬರೆದಿರುವ ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳುವುದು, ಧರ್ಮದ ಹೆಸರಿನಲ್ಲಿ ಕೋಮುದಂಧೆಯನ್ನು ಸೃಷ್ಟಿಸುವುದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ದೂರಿದರು.

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಿ.ಟಿ.ರವಿ ಬಗ್ಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿರುವುದು ಕಡಿಮೆಯೇ ಆಗಿದೆ. ಸಾರ್ವಜನಿಕರಲ್ಲಿ ಅಶಾಂತಿ ಸೃಷ್ಠಿಸಲು ಹಿಂದೆ ನಂಜೇಗೌಡ ಹುರಿಗೌಡರ ಹೆಸರನ್ನು ಬಳಸಿಕೊಂಡರೂ ಮಂಡ್ಯ ಜಿಲ್ಲೆಯಲ್ಲಿ ಆಟ ನಡೆಯಲ್ಲಿಲ್ಲ ಎಂದು ಲೇವಡಿ ಮಾಡಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವವರು ಹಿಂದೂಗಳೇ. ಜಿಲ್ಲೆಯ ಜನರಿಗೆ ಸರಿ ತಪ್ಪುಗಳನ್ನು ನಿರ್ಧರಿಸುವ ಶಕ್ತಿ ಇದ್ದು, ನಿಮ್ಮ ಆಟಗಳು ಎಂದಿಗೂ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಜಿಪಂ ಮಾಜಿ ಸದಸ್ಯ ಆರ್.ಎನ್ ವಿಶ್ವಾಸ್ ಮಾತನಾಡಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಿ.ಟಿ.ರವಿ ಪರವಾಗಿ ನಿಂತಿರುವ ತಾಲೂಕಿನ ಬಿಜೆಪಿ ನಾಯಕರ ನಡೆ ಖಂಡನೀಯ. ಆದರೆ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ರಾಷ್ಟ್ರಧ್ವಜದ ಪರ ನಿಂತು ಕೆಚ್ಚೆದೆ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಬಸವರಾಜು, ಸಾಗ್ಯಕೆಂಪಯ್ಯ ಮಾತನಾಡಿದರು. ಮುಖಂಡರಾದ ಪುಟ್ಟಸ್ವಾಮಿ, ಕುಂದೂರು ಪ್ರಕಾಶ್, ಶಿವಮಾದೇಗೌಡ, ಲಿಂಗರಾಜು, ದೊಡ್ಡಯ್ಯ, ಬಸವರಾಜು, ಕಿರಣ್‌ಶಂಕರ್, ಸಿ.ಪಿರಾಜು ವೇದಮೂರ್ತಿ, ಶಾಂತರಾಜು, ಶ್ರೀನಿವಾಸ್, ಸೇರಿದಂತೆ ಇತರರು ಇದ್ದರು.

-------------

2ಕೆಎಂಎನ್ ಡಿ19

ಮಳವಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು.