ಮೂಲ ಸೌಲಭ್ಯಕ್ಕೆ ಸಾವಿರಾರು ಕೋಟಿ ರೂ. ನೀಡಿ

| Published : Nov 07 2025, 01:15 AM IST

ಸಾರಾಂಶ

ಮೈಸೂರನ್ನು ಬೃಹತ್ನಗರವನ್ನಾಗಿ ಮಾಡುವುದಾಗಿದ್ದರೆ ನಗರಸಭೆ, ಪಟ್ಟಣ ಪಂಚಾಯಿತಿಯನ್ನು ಏಕೆ ರಚಿಸಿದಿರಿ? ಮೈಸೂರು ಈಗ ಇರುವುದಕ್ಕಿಂತಲೂ ಸುಮಾರು 3 ಪಟ್ಟು ಹೆಚ್ಚು ವಿಸ್ತೀರ್ಣವನ್ನು ಹೊಂದುತ್ತದೆ. ಬೃಹತ್ಮೈಸೂರಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ನಕ್ಷೆ ಸಿದ್ಧಪಡಿಸಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುತವರಿನ ಪ್ರೀತಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಟರ್ಮೈಸೂರು ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಮೂಲಭೂತ ಸೌಲಭ್ಯಕ್ಕೆ ಮೊದಲು ಸಾವಿರಾರು ಕೋಟಿ ಬೇಕಿದೆ. ಅದನ್ನು ಮೊದಲು ಬಿಡುಗಡೆಗೊಳಿಸಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ಸವಾಲು ಎಸೆದರು.ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರನ್ನು ಬೃಹತ್ನಗರವನ್ನಾಗಿ ಮಾಡುವುದಾಗಿದ್ದರೆ ನಗರಸಭೆ, ಪಟ್ಟಣ ಪಂಚಾಯಿತಿಯನ್ನು ಏಕೆ ರಚಿಸಿದಿರಿ? ಮೈಸೂರು ಈಗ ಇರುವುದಕ್ಕಿಂತಲೂ ಸುಮಾರು 3 ಪಟ್ಟು ಹೆಚ್ಚು ವಿಸ್ತೀರ್ಣವನ್ನು ಹೊಂದುತ್ತದೆ. ಬೃಹತ್ಮೈಸೂರಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ನಕ್ಷೆ ಸಿದ್ಧಪಡಿಸಿಲ್ಲ. ಇನ್ನು ಮೈಸೂರು ನಗರ ಕೇಂದ್ರೀಕರಿಸಿ ಸಿದ್ಧಪಡಿಸುವ ನಕ್ಷೆ ವೈಜ್ಞಾನಿಕವಾಗಿ ಆಗಬೇಕು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯಬಾರದು ಎಂದು ಹೇಳಿದರು.ಇಲ್ಲಿನ ರಸ್ತೆ, ಒಳಚರಂಡಿ ಮುಂತಾದ ಸೌಲಭ್ಯಕ್ಕೆ ಸುಮಾರು ಸಾವಿರಾರು ಕೋಟಿ ರೂ. ಬೇಕಾಗುತ್ತದೆ. ಮೊದಲು ಅದನ್ನು ಬಿಡುಗಡೆಗೊಳಿಸಲಿ. ನೀಲನಕ್ಷೆಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಿ. ನಗರ ಪಾಲಿಕೆ ಚುನಾವಣೆ ಮುಂದೂಡಲು ಈ ಯೋಜನೆ ರೂಪಿಸಿರುವ ಶಂಕೆ ಇದೆ. ಚುನಾವಣೆ ನಡೆದರೆ ಕಾಂಗ್ರೆಸ್ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದರು.ಎರಡು ವರ್ಷದಿಂದ ಸುಮ್ಮನಿದ್ದ ಮುಖ್ಯಮಂತ್ರಿಗಳು ಈಗ ಬೃಹತ್ಮಹಾನಗರ ಪಾಲಿಕೆ ಮಾಡುವುದಾಗಿ ಹೇಳುತ್ತಿದ್ದಾರೆ. ಎಂಡಿಎ ವತಿಯಿಂದ 500 ಕೋಟಿ ರೂ. ನೀಡುವುದಾಗಿ ನಗರಾಭಿವೃದ್ಧಿ ಸಚಿವರು ಹೇಳುತ್ತಾರೆ. ಆದರೆ ಮುಖ್ಯಮಂತ್ರಿಗಳು ಅವರ ಅವಧಿಯಲ್ಲಿ 4.91 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ರಾಜ್ಯ ಸರ್ಕಾರದ ಒಟ್ಟು ಸಾಲ 7.81 ಲಕ್ಷ ಕೋಟಿ ರೂ. ದಾಟಿದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಬಿಲ್ ಪಾವತಿ ಆಗಿಲ್ಲ. ಹೀಗಾಗಿ ಬೃಹತ್ ಮೈಸೂರಿಗಾಗಿ ಎಷ್ಟು ಹಣ ನೀಡುತ್ತೀರಿ ಎಂದು ಸ್ಪಷ್ಟಪಡಿಸಿ ಎಂದು ಅವರು ಒತ್ತಾಯಿಸಿದರು.ಈ ಯೋಜನೆ ರೂಪಿಸಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಮೊದಲ ಅವಧಿಯಲಲಿ ಉತ್ತಮ ಆಡಳಿತ ನೀಡಿದರು. ಆದರೆ ಈಗ ಏಕೋ ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ಆದರೂ ಅವರ ಹಿಂಬಾಲಕರು ದೇವರಾಜ ಅರಸು ಮತ್ತು ಮೈಸೂರು ಮಹಾರಾಜರಿಗೆ ಹೋಲಿಸುತ್ತಾರೆ ಎಂದು ಅವರು ಟೀಕಿಸಿದರು.ಬೃಹತ್ ಬೆಂಗಳೂರನ್ನು ಮಾಡಿದ್ದೀರಿ. ಇದೀಗ ಬೆಂಗಳೂರಿನ ಜನ ರಸ್ತೆ ಬೇಕು ಎಂದು ಕೇಳುತ್ತಿಲ್ಲ. ರಸ್ತೆಯಲ್ಲಿನ ಗುಂಡಿ ಮುಚ್ಚಿ ಎಂದು ಕೇಳುತ್ತಿದ್ದಾರೆ. ಅದು ಕೂಡ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬೃಹತ್ ಮೈಸೂರು ಮಾಡುವ ಮೂಲಕ ಮೈಸೂರನ್ನು ಅದೇ ಪರಿಸ್ಥಿತಿಗೆ ದೂಡಬೇಡಿ ಎಂದು ಅವರು ಹೇಳಿದರು.