ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಮಾಜಿ ಶಾಸಕ ಎಟಿಆರ್‌ ಶ್ಲಾಘನೆ

| Published : May 24 2025, 12:23 AM IST

ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಮಾಜಿ ಶಾಸಕ ಎಟಿಆರ್‌ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದ ಐತಿಹಾಸಿಕ ಕ್ಷೇತ್ರವಾಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಸ್ಥಳೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯವಾಗಿ ಹಿಡಿಯಬಲ್ಲ ಸಂಗೀತ ಸಾಧನವನ್ನು ವಿದ್ವಾನ್ ಆರ್‌.ಕೆ. ಪದ್ಮನಾಭ ಅವರು 22 ವರ್ಷಗಳಿಂದ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಸಿಕೊಂಡು ಬರುತ್ತಿರುವುದಕ್ಕೆ ಸದನ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಡಾ. ಎ.ಟಿ. ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ಭಾಷೆಯನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ತಮ್ಮನ್ನು ತೊಡಗಿಸಿಕೊಂಡು ಜನಜನಿತವಾಗಿದ್ದಾರೆ. ಇಂತಹ ವಿದ್ವಾಂಸರು ನಮ್ಮ ರುದ್ರಪಟ್ಟಣದಲ್ಲಿರುವುದು ಹೆಮ್ಮೆಯ ವಿಷಯ ಎಂದು ಡಾ. ಎ.ಟಿ. ರಾಮಸ್ವಾಮಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದ ಐತಿಹಾಸಿಕ ಕ್ಷೇತ್ರವಾಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಸ್ಥಳೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯವಾಗಿ ಹಿಡಿಯಬಲ್ಲ ಸಂಗೀತ ಸಾಧನವನ್ನು ವಿದ್ವಾನ್ ಆರ್‌.ಕೆ. ಪದ್ಮನಾಭ ಅವರು 22 ವರ್ಷಗಳಿಂದ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಸಿಕೊಂಡು ಬರುತ್ತಿರುವುದಕ್ಕೆ ಸದನ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಡಾ. ಎ.ಟಿ. ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆದ 3 ದಿವಸದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಸಂಗೀತ ಗ್ರಾಮ ರುದ್ರಪಟ್ಟಣದ ವಿದ್ವಾಂಸರಾದ ಡಾ. ಆರ್‌.ಕೆ. ಪದ್ಮನಾಭ ಅವರು ಕರ್ನಾಟಕದ ಒಂದು ಸಂಗೀತ ನಿಧಿ ಎಂದರೆ ತಪ್ಪಾಗಲಾರದು. ಇವರು ವಾದಿರಾಜರ ಅರಾಧಿಕರಾಗಿದ್ದು, ಅಧ್ಯಾತ್ಮಿಕ ಕಲೆ, ವ್ಯವಸಾಯ ಜೀವನದರ್ಶನ, ಬಾಳಿನ ರೀತಿಯಲ್ಲಿ ಒಂದೊಂದು ಅಳವಾದ ಅಧ್ಯಯನಕ್ಕೆ ಇವರು ಯೋಗ್ಯರು. ಸಂಗೀತ ಭಾಷೆಯನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ತಮ್ಮನ್ನು ತೊಡಗಿಸಿಕೊಂಡು ಜನಜನಿತವಾಗಿದ್ದಾರೆ. ಇಂತಹ ವಿದ್ವಾಂಸರು ನಮ್ಮ ರುದ್ರಪಟ್ಟಣದಲ್ಲಿರುವುದು ಹೆಮ್ಮೆಯ ವಿಷಯ ಎಂದು ಡಾ. ಎ.ಟಿ. ರಾಮಸ್ವಾಮಿ ಬಣ್ಣಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಡಾ. ಆರ್‌.ಕೆ. ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.4ನೇ ದಿನದ ಕಾರ್ಯಕ್ರಮ:

ರುದ್ರಪಟ್ಟಣದ ಮಂದಿರದಲ್ಲಿ 4ನೇ ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7 ಗಂಟೆಗೆ ಕಾವೇರಿ ಪೂಜೆ ನಂತರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕಾವೇರಿ ಮಾತೆ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ಸಾಗುವುದು.

ಬೆಳಿಗ್ಗೆ 10.30ರಿಂದ 12-30ರವರೆಗೆ ಸಂಗೀತ, ವಿದುಷಿ ಅಕ್ಷತಾ ರುದ್ರಪಟ್ಟಣ ಇವರು ಸಂಗೀತ ಹಾಡುಗಾರಿಕೆ. ವಿ. ಅಚ್ಯುತರಾವ್ ಪಿಟೀಲು, ವಿ. ಅನಿರುದ್ದ ಭಟ್ ಮೃದಂಗ, ವಿ. ಶರತ್ ಕೌಶಿಕ್ ಘಡ ನಡೆಸಿಕೊಡುವರು.

ಮಧ್ಯಾಹ್ನ 3-30ರಿಂದ ರುದ್ರಪಟ್ಟಣ ಪರಂಪರೆಯ ಹಿರಿಯ ವಿದ್ವಾಂಸರು ಹಾಗೂ ವರ್ಧಿಷ್ಣು ಕಲಾವಿದರಿಗೆ ಬಿರುದು ಪ್ರಧಾನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ವಾನ್ ಆರ್‌. ಕೆ. ಪದ್ಮನಾಭ ತಿಳಿಸಿದರು.