ಕೊಡಗು ಜಿಲ್ಲೆಯ ನೆಲಜಿ ಗ್ರಾಮದ ಪ್ರಕೃತಿ ರಮಣೀಯ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆ ಅದ್ಬುತ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ. ಎಸ್ ಪುಟ್ಟರಾಜು ಹೇಳಿದರು.

ಕನ್ನಡಪ್ರಭವಾರ್ತೆ ನಾಪೋಕ್ಲು

ಕೊಡಗು ಜಿಲ್ಲೆಯ ನೆಲಜಿ ಗ್ರಾಮದ ಪ್ರಕೃತಿ ರಮಣೀಯ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆ ಅದ್ಬುತ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ. ಎಸ್ ಪುಟ್ಟರಾಜು ಹೇಳಿದರು. ಅವರು ಶ್ರೀ ಕ್ಷೇತ್ರಕ್ಕೆ ತಮ್ಮ ಪತ್ನಿ ಸಮೇತ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

ದೇವರ ಅಭಿವೃದ್ದಿ ಕಾರ್ಯಗಳಿಗೆ ತಮ್ಮ ಮೊದಲ ಕಂತಿನ ದೇಣಿಗೆಯಾಗಿ ರೂಪಾಯಿ 10 ಲಕ್ಷ ರು. ಚೆಕ್ ಅನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ ಸ್ವಾಗತಿಸಿದರು. ತಕ್ಕಮುಖ್ಯಸ್ಥಾರದ ಬದ್ದoಜೆಟ್ಟಿರ ಬಿ ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಕಯoದಿರ ಉತ್ತಯ, ಭಕ್ತ ಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್, ಮಣವಟ್ಟಿರ ಚೆಂಗಪ್ಪ, ಚೀಯಕಪೂವಂಡ ಅಪ್ಪಚ್ಚು, ಅಪ್ಪುಮಣಿ ಯಂಡ ಸೋಮಣ್ಣ, ಬದ್ದoಜೆಟ್ಟಿರ ದೇವಯ್ಯ, ಅಪ್ಪುಮಣಿಯಂಡ ಉತ್ತಯ, ಶಾಸಕರ ಭೇಟಿಗೆ ಮತ್ತು ಆರ್ಥಿಕ ನೆರವಿಗೆ ಸಹಕರಿಸಿದ ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ದಾನಿಗಳಾದ ಮಂಡಿರ ಜಯ ದೇವಯ್ಯ, ಧಾನಿಗಳಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟಿರ ಜಯ ಇದ್ದರು.