ಸಾರಾಂಶ
ತಾಲೂಕಿನ ಬಿದರಕೆರೆ ಗ್ರಾಮದ ನಿವಾಸದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು, ಗಣತಿದಾರ ಶಿಕ್ಷಕ ನಾಗರಾಜ ಅವರಿಗೆ ಮಾಹಿತಿ ನೀಡಲಾಯಿತು.
- ಮುಂದಿನ ಪೀಳಿಗೆಗೆ ಸೌಲಭ್ಯ ದೊರೆಯಲು ಸಮೀಕ್ಷೆ ಸಹಕಾರಿ
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಬಿದರಕೆರೆ ಗ್ರಾಮದ ನಿವಾಸದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು, ಗಣತಿದಾರ ಶಿಕ್ಷಕ ನಾಗರಾಜ ಅವರಿಗೆ ಮಾಹಿತಿ ನೀಡಲಾಯಿತು.ಎಚ್.ಪಿ.ರಾಜೇಶ್ ಮಾತನಾಡಿ ತಾಲೂಕಿನಾದ್ಯಂತ ಹಿಂದುಳಿದ, ಎಸ್ಸಿ-ಎಸ್ಟಿ, ಲಿಂಗಾಯಿತ ಸೇರಿದಂತೆ ಎಲ್ಲ ಸಮುದಾಯಗಳು ಆಯಾ ಜಾತಿ, ಉಪಜಾತಿಗಳನ್ನು ಕಲಂನಲ್ಲಿ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ನಮೂದಿಸಬೇಕು. ಜಾತಿ ಸಮೀಕ್ಷೆಗೆ ಆಗಮಿಸುವ ಗಣತಿದಾರರಿಗೆ ಅಗತ್ಯ ದಾಖಲೆಗಳೊಂದಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.
ಮುಂದಿನ ಪೀಳಿಗೆಗೆ ಸರ್ಕಾರಿ ಸೌಲಭ್ಯಗಳಿಗಾಗಿ ಈ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಪರಿಶೀಲನಾ ಜಾತಿ ಸಮೀಕ್ಷೆ ಪೂರಕವಾಗಲಿದೆ. ಪ್ರತಿಯೊಂದು ಜಾತಿ ಮುಖಂಡರು, ವಿದ್ಯಾವಂತ ಯುವಕರು ತಮ್ಮ ತಮ್ಮ ಜಾತಿಯ ಅನಕ್ಷರಸ್ಥ ಕುಟುಂಬಗಳಿಗೆ ಜಾತಿಗಣತಿ ಮಾಹಿತಿ ಕುರಿತು ಜಾಗೃತಿ ಮೂಡಿಸಬೇಕು. ಜಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ನಾಯಕ ಸಮುದಾಯದವರು ಸಂಕೇತ C-38/2 ನಡಿ ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ನಾಯಕ ಎಂದು ಬರೆಸಬೇಕು ಎಂದರು.ಗಣತಿದಾರರ ಆ್ಯಪ್‌ನಲ್ಲಿ ಸಮೀಕ್ಷೆ ಮಾಹಿತಿ ಅಪ್ ಲೋಡ್ ಆಗಿ ಗಣತಿ ಯಶಸ್ವಿಯಾಯಿತು. ವರದಿಯ ದೃಢೀಕರಣ ಪ್ರಮಾಣಪತ್ರವನ್ನು ಸಹ ವಿತರಿಸಲಾಯಿತು.
- - --29ಜೆಜಿಎಲ್1:
ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ನಿವಾಸದಲ್ಲಿ ಸೋಮವಾರ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಸಮೀಕ್ಷೆಯ ಗಣತಿದಾರ ಶಿಕ್ಷಕ ನಾಗರಾಜ ಅವರಿಗೆ ಅಗತ್ಯ ಮಾಹಿತಿ ಒದಗಿಸಿದರು.