ಸಾರಾಂಶ
ಶ್ರೀರಂಗಪಟ್ಟಣ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಪರಮಾಂಡನಹಳ್ಳಿ ರವೀಂದ್ರ ಶ್ರೀಕಂಠಯ್ಯ ಅವರ ತೋಟದಲ್ಲಿ ಸಹಸ್ರಾರು ಅಭಿಮಾನಿಗಳು ಆಗಮಿಸಿ ಬೃಹತ್ ಗಾತ್ರದ ಹಾರ ಹಾಕಿ ಅಭಿನಂದಿಸಿದರು.ಜೆಡಿಎಸ್ ಕಾರ್ಯಾಧ್ಯಕ್ಷ ತಿಲಕ್ ಮಾತನಾಡಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತಮ್ಮ 5 ವರ್ಷದ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುವ ಜೊತೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಂತರ ರು. ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಜನಪ್ರತಿನಿಧಿಗಳು ಹೇಗಿರಬೇಕು, ಹೇಗೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ಯುವ ಜನಪ್ರತಿನಿದಿಗಳಿಗೆ ತಿಳಿಸಿಕೊಟ್ಟಿದ್ದಾರೆ ಎಂದರು.
ಈ ವೇಳೆ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ, ರವೀಂದ್ರ ಅವರ ಪತ್ನಿ ಗೀತಾ ರವೀಂದ್ರ, ಪುತ್ರ ದೇವನಾಂಪ್ರಿಯ ಜೊತೆಯಲ್ಲಿದ್ದು ಹುಟ್ಟುಹಬ್ಬದ ಶುಭಾಶಯ ಕೋರಿದರು.ಯುವ ಘಟಕ ಅಧ್ಯಕ್ಷ ಸಂಜಯ್ ರಾಮೇಗೌಡ, ನಿಖಿಲ್ ಕುಮಾರಸ್ವಾಮಿ ಸಂಘದ ಅಧ್ಯಕ್ಷ ಪ್ರೀತಮ್ ರಾಂಪುರ, ಜಿಪಂ ಮಾಜಿ ಸದಸ್ಯೆ ಸವಿತಾ ಲೋಕೇಶ್, ಮುಖಂಡರಾದ ದಯಾನಂದ್, ಗ್ರಾಪಂ ಮಾಜಿ ಅಧ್ಯಕ್ಷ ಮೆಣಜಿಬೋರನಕೊಪ್ಪಲು ನಾರಾಯಣ, ಬೆಳಗೊಳ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ ಲೋಕೇಶ್, ಕೆಆರ್‌ಎಸ್ ಗ್ರಾಪಂ ಸದಸ್ಯರಾದ ನಾಗೇಂದ್ರಕುಮಾರ್, ಮಂಜುನಾಥ್, ರವಿಶಂಕರ್, ವಿಜಯ್‌ಕುಮಾರ್, ಕೆ.ನರಸಿಂಹ, ಮರಳಗಾಲ ಗ್ರಾಪಂ ಸದಸ್ಯ ಶ್ಯಾಮ್, ದರಸಗುಪ್ಪೆ ಕೃ.ಪ.ಸ.ಸ ಸದಸ್ಯ ಮನು, ಮುಖಂಡರಾದ ನವೀನ್, ವಿಕಾಶ್ ಸೇರಿ ಸಹಸ್ರಾರು ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.