ಸಾರಾಂಶ
ಹಾನಗಲ್ಲ: ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ಪಿತೂರಿ ಖಂಡನೀಯವಾಗಿದ್ದು, ಅಪಪ್ರಚಾರ, ಅವಹೇಳನಕಾರಿ ಮಾತುಗಳ ಮೂಲಕ ಹಿಂದು ಧರ್ಮ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಹಿಂದು ಮೌಲ್ಯಕ್ಕೆ ಧಕ್ಕೆ ತರುವ ಯತ್ನವನ್ನು ಸಹಿಸುವುದಿಲ್ಲ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಕಿಡಿಕಾರಿದರು.ಶನಿವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪಿತೂರಿ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಧರ್ಮಸ್ಥಳದ ವಿರುದ್ಧ ನಡೆಸಿದ ಪಿತೂರಿಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಯೂಟೂಬರ್ ಹಾಗೂ ಮಟ್ಟೆಣ್ಣನವರ ಅಂಥವರ ಮೇಲೆ ನಿಗಾ ಇಟ್ಟು ಕ್ರಮ ಜರುಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಸರ್ಕಾರ ತಡೆಯುವಲ್ಲಿ ವಿಫಲವಾಗಿದೆ. ಹಿಂದುಗಳ ಸಹನೆಯನ್ನು ಪರೀಕ್ಷಿಸುವುದು ಬೇಡ. ಎಸ್‌ಐಟಿ ಮುಖ್ಯಸ್ಥರ ಹೇಳಿಕೆಗಳೇ ಬೇಜವಾಬ್ದಾರಿಯಿಂದ ಕೂಡಿವೆ ಎಂದರು.ಸಾಮಾಜಿಕ ಕಾರ್ಯಕರ್ತ, ಹಿಂದು ಸಂಘಟನೆಯ ಮುಖಂಡ ಸಿದ್ದಲಿಂಗಪ್ಪ ಕಮಡೊಳ್ಳಿ ಮಾತನಾಡಿ, ಹಿಂದುಗಳ ಸೌಜನ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು ತಡೆಯಲು ಹಿಂದುಗಳೇ ಒಗ್ಗಟ್ಟಾಗಬೇಕಾಗಿದೆ. ನಮ್ಮ ಸಹನೆಯ ದುರುಪಯೋಗ ಮಾಡಿಕೊಳ್ಳುತ್ತಿರುವವರ ಬಗೆಗೆ ಈಗಲಾದರೂ ಎಚ್ಚರವಾಗಿರೋಣ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ಭೋಜರಾಜ ಕರೂದಿ, ರಾಜಶೇಖರ ಕಟ್ಟೇಗೌಡರ, ಸೋಮಶೇಖರ ಕೋತಂಬರಿ, ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ರಾಮು ಯಳ್ಳೂರ, ಬಸವರಾಜ ಹಾದಿಮನಿ, ರಾಜು ಗೌಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ನಾಗರಾಜ ಉದಾಸಿ, ವಿನಾಯಕ ಕುರುಬರ, ಸಂತೋಷ ಭಜಂತ್ರಿ, ಅಣ್ಣಪ್ಪ ಚಾಕಾಪುರ, ಸಿದ್ದನಗೌಡ ಪಾಟೀಲ, ಭಾಸ್ಕರ ಹುಲಮನಿ, ಸಂತೋಷ ಟೀಕೋಜಿ, ರಮೇಶ ಕಳಸೂರ, ಡಾ. ಶಿವಾ ಮುಳಗುಂದ, ಆನಂದ ಹಾವೇರಣ್ಣನವರ, ಪಂಚಾಕ್ಷರಿ ಪಾಟೀಲ, ಸಚಿನ್ ರಾಮಣ್ಣನವರ, ಮಹೇಶ ಬಣಕಾರ, ನಿಜಲಿಂಗಪ್ಪ ಮುದಿಯಪ್ಪನವರ, ರವಿ ಪುರದ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ ಕಚೇರಿಯಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಸಭೆಯ ನಂತರ ಸ್ಥಳದಲ್ಲಿಯೇ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.