ಸಾರಾಂಶ
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು ಹಾಗೂ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದಂತ ನಷ್ಟ ಉಂಟಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ತಿಳಿಸಿದರು. ಇಡೀ ವಿಶ್ವದಲ್ಲೇ ಉತ್ತಮ ಆರ್ಥಿಕ ತಜ್ಞರಾಗಿ ಜನಾನುರಾಗಿದ್ದ ಅವರು ಸರಳತೆಯಿಂದ ಆಡಳಿತ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಯುಪಿಎ ನೇತೃತ್ವದ ಪ್ರಧಾನ ಮಂತ್ರಿಗಳಾಗಿ ಸುಮಾರು 10 ವರ್ಷಗಳ ಕಾಲ ದೇಶದಲ್ಲಿ ಬಡವರ ದೀನ ದಲಿತರ ಪರವಾದಂತಹ ಆಡಳಿತ ನಡೆಸಿದರು ಎಂದರು.
ನುಗ್ಗೇಹಳ್ಳಿ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು ಹಾಗೂ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದಂತ ನಷ್ಟ ಉಂಟಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ತಿಳಿಸಿದರು.
ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಯುಪಿಎ ನೇತೃತ್ವದ ಪ್ರಧಾನ ಮಂತ್ರಿಗಳಾಗಿ ಸುಮಾರು 10 ವರ್ಷಗಳ ಕಾಲ ದೇಶದಲ್ಲಿ ಬಡವರ ದೀನ ದಲಿತರ ಪರವಾದಂತಹ ಆಡಳಿತ ನಡೆಸಿದರು. ಸುಮಾರು 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಮೂಲಕ ಇಡೀ ದೇಶದ ರೈತರ ಕೈ ಹಿಡಿದರು. ಇಡೀ ವಿಶ್ವದಲ್ಲೇ ಉತ್ತಮ ಆರ್ಥಿಕ ತಜ್ಞರಾಗಿ ಜನಾನುರಾಗಿದ್ದ ಅವರು ಸರಳತೆಯಿಂದ ಆಡಳಿತ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈಗ ನಮ್ಮ ಮುಂದೆ ಇವೆ. ಅವರು ಪ್ರಧಾನಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಮೆಟ್ರೋ ಸೇರಿದಂತೆ ನೀರಾವರಿ ಯೋಜನೆಗಳು ಹಾಗೂ ವೈದ್ಯಕೀಯ ಶಿಕ್ಷಣಕ್ಕೂ ಹೆಚ್ಚಿನ ಅನುದಾನ ನೀಡಿದ್ದರು ಎಂದು ಸ್ಮರಿಸಿದರು. ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ನಾವು ಗೌರವಿಸಿ ಪಾಲಿಸಬೇಕಾಗಿದೆ ಎಂದರು.