ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಮೆ ಅನಾವರಣ

| Published : Nov 10 2024, 01:41 AM IST

ಸಾರಾಂಶ

ಎಚ್‌.ಡಿ.ದೇವೇಗೌಡರ ಅಭಿಮಾನಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಚಲುವರಾಜು, ಸಿವಿಲ್ ಎಂಜಿನಿಯರ್ ಅಕ್ಷಯ್ ಅವರು ಅಭಿಮಾನದಿಂದ ನಿರ್ಮಿಸಿದ್ದ ಮಾಜಿ ಪ್ರಧಾನಿ ಎಚ್ಡಿಡಿ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದ ಶ್ರೀಗಳು, ಮೈಸೂರು ಮಹರಾಜ ಹಾಗೂ ಗಣ್ಯರನ್ನು ಆತ್ಮೀಯವಾಗಿ ವಾದ್ಯ, ಚಂಡೇವಾದ್ಯ ಕಲಾವಿದರ ಹಾಗೂ ವಿವಿಧ ಕಲಾತಂಡಗಳ ಭವ್ಯವಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್‌ನ ರುತ್ವಿಕನ್ವೆನ್ಷನ್ ಹಾಲ್‌ ಆವರಣದಲ್ಲಿ ನಿರ್ಮಿಸಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಪ್ರತಿಮೆಯನ್ನು ಸಂಜೆ ಮೈಸೂರು ಮಹಾರಾಜ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು.

ಎಚ್‌.ಡಿ.ದೇವೇಗೌಡರ ಅಭಿಮಾನಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಚಲುವರಾಜು, ಸಿವಿಲ್ ಎಂಜಿನಿಯರ್ ಅಕ್ಷಯ್ ಅವರು ಅಭಿಮಾನದಿಂದ ನಿರ್ಮಿಸಿದ್ದ ಮಾಜಿ ಪ್ರಧಾನಿ ಎಚ್ಡಿಡಿ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದ ಶ್ರೀಗಳು, ಮೈಸೂರು ಮಹರಾಜ ಹಾಗೂ ಗಣ್ಯರನ್ನು ಆತ್ಮೀಯವಾಗಿ ವಾದ್ಯ, ಚಂಡೇವಾದ್ಯ ಕಲಾವಿದರ ಹಾಗೂ ವಿವಿಧ ಕಲಾತಂಡಗಳ ಭವ್ಯವಾಗಿ ಸ್ವಾಗತಿಸಿದರು. ನಂತರ ಕಲ್ಯಾಣ ಮಂಟಪದ ಆವರಣದಲ್ಲಿ 4 ಲಕ್ಷ ರು. ವೆಚ್ಚದಲ್ಲಿ ಫೈಬರ್‌ನಿಂದ ನಿರ್ಮಿಸಿರುವ 11 ಅಡಿ ಎತ್ತರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಮೆ ಅನಾವರಣಗೊಳಿಸಿದರು.

ಮೈಸೂರು ಮಹರಾಜ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶಕಂಡ ಹಲವು ಅಗ್ರಗಣ್ಯ ಧೀಮಂತ ರಾಜಕಾರಣಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಬ್ಬರು. ಕರ್ನಾಟಕದಿಂದ ಪ್ರಧಾನ ಮಂತ್ರಿಯಾದ ಏಕೈಕ ಕನ್ನಡಿಗರು ಎಂದರು.

ದೇವೇಗೌಡರು ನೀರಾವರಿ, ಕೃಷಿ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಗಣ್ಯ ರಾಜಕಾರಣಿ ಎಚ್.ಡಿ.ದೇವೇಗೌಡರ ಪ್ರತಿಮೆಯನ್ನು ಅಭಿಮಾನದಿಂದ ಪಿ.ಚಲುವರಾಜು ಹಾಗೂ ಅಕ್ಷಯ್ ನಿರ್ಮಿಸಿ ಅನಾವರಣಗೊಳಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಇದು ಮತ್ತೊಬ್ಬರಿಗೆ ಸ್ಪೂರ್ತಿಯಾಗಲಿದೆ ಎಂದರು.

ಆದಿಚುಂಚನಗಿರಿ ಡಾ.ನಿರ್ಮಲಾನಂದನಾಥಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾ,ಡಿ ಪ್ರತಿಮೆ ನಿರ್ಮಿಸಿದ ಅಭಿಮಾನಿನಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪಿ.ಚಲುವರಾಜು, ಸಿವಿಲ್ ಎಂಜಿನಿಯರ್ ಅಕ್ಷಯ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.