ಕನ್ನಡ ಉಳಿಸಿ ಬೆಳೆಸಲು ಶಾಸ್ವತ ಯೋಜನೆ ರೂಪಿಸಿ

| Published : Aug 19 2025, 01:00 AM IST

ಸಾರಾಂಶ

ಖಾಸಗಿ ಕೈಗಾರಿಕೆಗಳು ಸ್ಥಳೀಯ ಕನ್ನಡ ಭಾಷಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ ವೇಳೆ ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇಂದಿನವರೆಗೂ ಸಂಘಟನೆ ವತಿಯಿಂದ ಸರ್ಕಾರದ ಮುಂದಿಟ್ಟಿದ್ದ ನಮ್ಮ ಬೇಡಿಕೆಗಳು ಈಡೇರಿಸಿಲ್ಲ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕನ್ನಡ ಉಳಿಸಲು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಆಡಳಿತ ನಡೆಸುತ್ತಿರುವ ಸರ್ಕಾರಗಳು ಯಾವುದೇ ಶಾಶ್ವತವಾದ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದು ಕನ್ನಡ ಜಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್ ಆಕ್ರೋಶ ವ್ಯಕ್ತಪಡಿಸಿದರು.ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕನ್ನಡ ಜಾಗೃತಿ ವೇದಿಕೆ ಶಾಖಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ಬಡವರಿಗೆ ಸೂರಿಗಾಗಿ ಶಾಸಕರುಗಳ ಮನೆಗಳ ಮುಂದೆ ಅರ್ಜಿ ಹಿಡಿದು ನಿಲ್ಲುತ್ತಲ್ಲೇ ಇದ್ದಾರೆ. ನಮಗೆ ಸ್ವಾತಂತ್ರ್ಯ ಬಂದು ೭೯ ವರ್ಷಗಳು ಕಳೆದರು ಇನ್ನೂ ಏಕೆ ಬಡವರ ಪಾಲಿಗೆ ಯಾವುದೇ ಸವಲತ್ತುಗಳು ತಲುಪುತ್ತಿಲ್ಲ ಎಂಬುದನ್ನು ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು. ಸ್ಥಳೀಯರಿಗೆ ಉದ್ಯೋ ನೀಡಬೇಕುಖಾಸಗಿ ಕೈಗಾರಿಕೆಗಳು ಸ್ಥಳೀಯ ಕನ್ನಡ ಭಾಷಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ ವೇಳೆ ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇಂದಿನವರೆಗೂ ಸಂಘಟನೆ ವತಿಯಿಂದ ಸರ್ಕಾರದ ಮುಂದಿಟ್ಟಿದ್ದ ನಮ್ಮ ಬೇಡಿಕೆಗಳು ಈಡೇರಿಸಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಎಲ್ಲರು ಸಜ್ಜುಗೊಳ್ಳಬೇಕು ಎಂದು ಹೇಳಿದರು.ಆರ್.ಕೆ.ಫೌಂಡೇಷನ್ ಅಧ್ಯಕ್ಷ ಮೋಹನ್‌ಕೃಷ್ಣ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ಜನರ ಮನೆಗಳಲ್ಲಿ ಮಾತನಾಡುವ ಆಡು ಭಾಷೆ ತಮಿಳು, ತೆಲುಗು ಆಗಿದ್ದರೂ ಅತಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ಈ ಭಾಗದಲ್ಲಿ ನಡೆಯುತ್ತಿವೆ. ಕನ್ನಡ ಭಾಷೆಯಲ್ಲಿ ಉತ್ತಮ ಅಂಕಗಳನ್ನು ತಮಿಳು ಮತ್ತು ತೆಲುಗು ಭಾಷಿಗ ವಿದ್ಯಾರ್ಥಿಗಳು ಪಡೆದಿದ್ದಾರೆ. ಈ ಭಾಗದಲ್ಲಿ ಎಲ್ಲಾ ಸಮುದಾಯಗಳ ಭಾಷೆಯ ಜನರು ಒಂದಾಗಿ ಬದುಕು ನಡೆಸುತ್ತಿದ್ದಾರೆ ಎಂದರು.

ಜನಪ್ರತಿನಿಧಿಗಳ ಆದಾಯ ಏರುತ್ತಿದೆ

ರಾಜ್ಯದಲ್ಲಿ ಮತದಾರರಿಂದ ಮತ ಪಡೆದು ಶಾಸಕರಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳು ಒಂದು ಚುನಾವಣೆ ಸಂದರ್ಭದಲ್ಲಿ ೫ ಕೋಟಿ ಆಸ್ತಿಯನ್ನು ಪ್ರಕಟಿಸಿದರೆ, ಮತ್ತೊಂದು ಚುನಾವಣೆಯಲ್ಲಿ ೫೦ ಕೊಟಿ ಆಸ್ತಿಯನ್ನು ಘೋಷಿಸಿಕೊಳ್ಳುತ್ತಾರೆ. ಆದರೆ ಕನ್ನಡಕ್ಕಾಗಿ ಶಾಶ್ವತ ಕೆಲಸಗಳನ್ನು ಮಾಡುವವರು ಯಾರೂ ಇಲ್ಲವಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾಧ್ಯಕ್ಷ ರಮೇಶ್‌ಗೌಡ, ಚಂದ್ರಶೇಖರ್, ಶ್ರೀನಾಥ್ ನಾಸ್ತಿಕ್, ಕೃಷ್ಣಮೂರ್ತಿ, ಜಾನ್ಸಿರಾಣಿ ಕಟ್ಟಡ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರಮೀಳಾ ಮೊದಲಾದವರು ಇದ್ದರು.