ಪೂರ್ಣ ಲಸಿಕೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಮಕ್ಕಳಿಗೆ ದಢಾರ ರುಬೆಲ್ಲ ನಿರ್ಮೂಲನಾ ಲಸಿಕೆ ನೀಡಿ. ಜ್ವರ ಮತ್ತು ದದ್ದುಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ ಕೂಡಲೇ ಪ್ರಕರಣ ದಾಖಲಿಸಿ ಮಗುವನ್ನು ಪರೀಕ್ಷೆಗೆ ಒಳಪಡಿಸುವಂತೆ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿ.
ಮಂಡ್ಯ:
ಜಿಲ್ಲೆಯಲ್ಲಿ ದಢಾರ ಮತ್ತು ರುಬೆಲ್ಲ ನಿರ್ಮೂಲನೆಗಾಗಿ ಜ.31ರವರೆಗೆ ವಿಶೇಷ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 9 ರಿಂದ 24 ತಿಂಗಳೊಳಗಿನ ಮಕ್ಕಳಿಗೆ ಏಪ್ರಿಲ್ 2025 ರಿಂದ ಡಿಸೆಂಬರ್ 25 ವರೆಗೆ 13320 ಪೂರ್ಣ ಲಸಿಕೆ ನೀಡುವ ಗುರಿ ಹೊಂದಿದ್ದು ಈಗಾಗಲೇ ಡಿಸೆಂಬರ್ ಅಂತ್ಯಕ್ಕೆ 14493 ಲಸಿಕೆ ನೀಡಲಾಗಿದೆ ಎಂದರು.
ಪೂರ್ಣ ಲಸಿಕೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಮಕ್ಕಳಿಗೆ ದಢಾರ ರುಬೆಲ್ಲ ನಿರ್ಮೂಲನಾ ಲಸಿಕೆ ನೀಡಿ. ಜ್ವರ ಮತ್ತು ದದ್ದುಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ ಕೂಡಲೇ ಪ್ರಕರಣ ದಾಖಲಿಸಿ ಮಗುವನ್ನು ಪರೀಕ್ಷೆಗೆ ಒಳಪಡಿಸುವಂತೆ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಹೇಳಿದರು.ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ 198 ಜ್ವರ ಮತ್ತು ದದ್ದು ಪ್ರಕರಣ ದಾಖಲಾಗಿದ್ದು, ಪರೀಕ್ಷೆ ನಡೆಸಿದ ನಂತರ 8 ರುಬೆಲ್ಲ ಪ್ರಕರಣಗಳು ದೃಢಪಟ್ಟಿದೆ. ಸದರಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ದಢಾರ ರುಬೆಲ್ಲ ನಿರ್ಮೂಲನಾ ಲಸಿಕೆಯಿಂದ ಯಾವುದೇ ಮಕ್ಕಳು ಹೋರಗುಳಿಯದಂತೆ ಸೂಕ್ತ ಕ್ರಮ ವಹಿಸಿ ಎಂದರು.
ಸಭೆಯಲ್ಲಿ ಡಿಎಚ್‌ಒ ಡಾ.ಕೆ.ಮೋಹನ್, ಆರ್.ಸಿ.ಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವತ್, ಡಾ.ಬೆಟ್ಟಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಜ.25 ರಂದು ಮತದಾರರ ದಿನಾಚರಣೆ: ಡಾ.ಕುಮಾರ
ಮಂಡ್ಯ: ನಗರದ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಜ.25ರಂದು ಅಂತಾರಾಷ್ಟ್ರೀಯ ಮತದಾನ ದಿನವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮತದಾನ ದಿನಾಚರಣೆ ಸಂಬಂಧ ಪೂರ್ವ ಭಾವಿ ಸಿದ್ಧತಾ ಸಭೆ ನಡೆಸಿ, ಜ.23ರಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತದಾನ ಪ್ರತಿಜ್ಞಾವಿಧಿ ಬೋಧನೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಚುನಾವಣಾ ತಹಸೀಲ್ದಾರ್ ರವಿಶಂಕರ್, ಹಿಂದುಳಿದ ವರ್ಗದ ಇಲಾಖೆ ಜಿಲ್ಲಾಧಿಕಾರಿ ಮಂಜುಳಾ, ಮುಜುರಾಯಿ ತಹಸೀಲ್ದಾರ್ ತಮ್ಮೆಗೌಡ, ನಗರಸಭಾ ಪೌರಾಯುಕ್ತೆ ಪಂಪಶ್ರೀ, ಮಂಡ್ಯ ತಹಸೀಲ್ದಾರ್ ವಿಶ್ವನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.