ಸಾರಾಂಶ
ಅರಸೀಕೆರೆ ತಾಲೂಕಿನ ಕೆಂಕೆರೆಹಳ್ಳಿ ಗೇಟ್ ಬಳಿ ಫಾರ್ಚುನರ್ ವಾಹನದ ನಿಯಂತ್ರಣ ತಪ್ಪಿ 17 ಬೈಕ್‌ಗಳ ಮೇಲೆ ಹತ್ತಿ ಬೈಕ್‌ಗಳು ಜಖಂ ಆಗಿರುವ ಘಟನೆ ನಡೆದಿದೆ. ತುಂಬಾ ಮಳೆ ಇದ್ದ ಕಾರಣ ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ಕೆಂಕೆರೆಹಳ್ಳಿ ಗೇಟ್ ಸಮೀಪದ ಬಸ್ ನಿಲ್ದಾಣದ ಸಮೀಪ ನಿಲ್ಲಿಸಿ ಬಸ್ ನಿಲ್ದಾಣದ ಒಳಗೆ ನಿಂತಿದ್ದರು. ಈ ಸಂದರ್ಭದಲ್ಲಿ ಜಾವಗಲ್ ಮಾರ್ಗದಿಂದ ಬಾಣಾವರದ ಕಡೆಗೆ ಹೋಗುತ್ತಿದ್ದ ಫಾರ್ಚುನರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಹತ್ತಿದ ಪರಿಣಾಮ ಅಲ್ಲಿದ್ದಂತಹ 17 ಬೈಕುಗಳು ಜಖಂಗೊಂಡಿವೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಾಣಾವರದ ಸಮೀಪದ ಕೆಂಕೆರೆಹಳ್ಳಿ ಗೇಟ್ ಬಳಿ ಫಾರ್ಚುನರ್ ವಾಹನದ ನಿಯಂತ್ರಣ ತಪ್ಪಿ 17 ಬೈಕ್‌ಗಳ ಮೇಲೆ ಹತ್ತಿ ಬೈಕ್‌ಗಳು ಜಖಂ ಆಗಿರುವ ಘಟನೆ ನಡೆದಿದೆ.ತುಂಬಾ ಮಳೆ ಇದ್ದ ಕಾರಣ ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ಕೆಂಕೆರೆಹಳ್ಳಿ ಗೇಟ್ ಸಮೀಪದ ಬಸ್ ನಿಲ್ದಾಣದ ಸಮೀಪ ನಿಲ್ಲಿಸಿ ಬಸ್ ನಿಲ್ದಾಣದ ಒಳಗೆ ನಿಂತಿದ್ದರು. ಈ ಸಂದರ್ಭದಲ್ಲಿ ಜಾವಗಲ್ ಮಾರ್ಗದಿಂದ ಬಾಣಾವರದ ಕಡೆಗೆ ಹೋಗುತ್ತಿದ್ದ ಫಾರ್ಚುನರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಹತ್ತಿದ ಪರಿಣಾಮ ಅಲ್ಲಿದ್ದಂತಹ 17 ಬೈಕುಗಳು ಜಖಂಗೊಂಡಿವೆ.ಅಲ್ಲದೆ ಬಸ್ ನಿಲ್ದಾಣದ ಗೋಡೆಗೆ ಫಾರ್ಚುನರ್ ವಾಹನ ಗುದ್ದಿದ ರಭಸಕ್ಕೆ ಗೋಡೆ ಬಿದ್ದು ಹೋಗಿದ್ದು ಒಬ್ಬರಿಗೆ ಗಾಯವಾಗಿದೆ. ಅದೃಷ್ಟವಶಾತ್ ಮಹಾ ದುರಂತ ಒಂದು ತಪ್ಪಿದಂತಾಗಿದೆ. ಈ ಕುರಿತು ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.