ಸಾರಾಂಶ
ಚನ್ನರಾಯಪಟ್ಟಣ ಹೋಬಳಿಯ ಕಾರೇಹಳ್ಳಿ ಗ್ರಾಮದ ಉಪ ಪೊಲೀಸ್ ಠಾಣೆ ನೂತನ ಕಟ್ಟಡವನ್ನು 40 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಕಾರೇಹಳ್ಳಿ ಗ್ರಾಮದಲ್ಲಿ ನೂತನ ಉಪ ಪೋಲಿಸ್ ಠಾಣೆ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಭೂಮಿಪೂಜೆ । ಕಾರೇಹಳ್ಳಿ ಗ್ರಾಮದಲ್ಲಿ ಕಟ್ಟಡಕ್ಕೆ ಅನುದಾನ
ಚನ್ನರಾಯಪಟ್ಟಣ: ಹೋಬಳಿಯ ಕಾರೇಹಳ್ಳಿ ಗ್ರಾಮದ ಉಪ ಪೊಲೀಸ್ ಠಾಣೆ ನೂತನ ಕಟ್ಟಡವನ್ನು 40 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.ಹೋಬಳಿಯ ಕಾರೇಹಳ್ಳಿ ಗ್ರಾಮದಲ್ಲಿ ನೂತನ ಉಪ ಪೋಲಿಸ್ ಠಾಣೆ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಾರೇಹಳ್ಳಿ ಉಪ ಪೊಲೀಸ್ ಠಾಣೆ ಕಟ್ಟಡ ಅನೇಕ ವರ್ಷಗಳಿಂದ ದುಸ್ಥಿತಿಯಲ್ಲಿತ್ತು ಸ್ಥಳೀಯರ ಒತ್ತಾಯದಂತೆ ಈ ಹಿಂದಿನ ಸರ್ಕಾರ ಹಾಗೂ ಪ್ರಸ್ತುತ ಇರುವ ಕಾಂಗ್ರೆಸ್ ಸರ್ಕಾರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕಳೆದ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಲಾಗಿತ್ತು. ಅವರು ಸುಮಾರು 40 ಲಕ್ಷ ರು. ಅನುದಾನ ಬಿಡುಗಡೆ ಮಾಡಿದ್ದು ಗುತ್ತಿಗೆದಾರರು 6 ತಿಂಗಳ ಒಳಗೆ ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.ಪೋಲಿಸ್ ಇಲಾಖೆ ಜನಸ್ನೇಹಿ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಸಾರ್ವಜನಿಕರಿಗೆ ಇಲಾಖೆಯ ಮೇಲೆ ಗೌರವ ಬರಲು ಸಾಧ್ಯವಾಗುತ್ತದೆ. ನೂತನ ಕಟ್ಟಡ ನಿರ್ಮಾಣದಿಂದ ಈ ಭಾಗದಲ್ಲಿ ಪೊಲೀಸರು ಇನ್ನು ಹೆಚ್ಚಿನ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ. ಕಾರೇಹಳ್ಳಿ ಗ್ರಾಮವು ಜಿಲ್ಲೆ ಹಾಗೂ ತಾಲೂಕಿನ ಗಡಿ ಭಾಗದಲ್ಲಿದ್ದು ಈ ಭಾಗದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಪಿಎಸ್ಐ ನವೀನ್ ಕುಮಾರ್, ಗುತ್ತಿಗೆದಾರ ಎಲ್. ಹರೀಶ್, ಗ್ರಾಪಂ ಉಪಾಧ್ಯಕ್ಷ ಕೆ.ಎ.ಸತೀಶ್ , ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ. ಟಿ.ನಟೇಶ್, ಕೃಷಿ ಪತ್ತಿನ ಅಧ್ಯಕ್ಷ ನಟೇಶ್, ಗ್ರಾಪಂ ಸದಸ್ಯರಾದ ಸಿ.ಜೆ. ಕುಮಾರ್, ವಸಂತ್, ಸುಜಾತ ನಾಗೇಂದ್ರ, ಮುಖಂಡರಾದ ರಾಮಚಂದ್ರು, ಉಮಾಹಿನ್, ನ್ಯಾಯ ಬೆಲೆ ಅಂಗಡಿ ಜಗದೀಶ್, ಹುಲಿಕೆರೆ ಸಂಪತ್ ಕುಮಾರ್, ವಿ.ಆರ್.ಮಂಜುನಾಥ್, ಬಸವೇಗೌಡ, ರವಿಶಂಕರ್, ಮುಖ್ಯಪೇದೆ ರಾಜು, ಪೇದೆ ಮಲ್ಲಿಕಾರ್ಜುನ್ ಹಾಜರಿದ್ದರು.