ಹಿರೇಕೆರೂರು: ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನೌಕರ ವರ್ಗದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನವನ್ನು ಮಾಡುವ ಉದ್ದೇಶದಿಂದ ಸಮಾಜದಲ್ಲಿ ಸಂಘಟನಾತ್ಮಕ ಮನೋಭಾವ ವೃದ್ಧಿಯಾಗುತ್ತದೆ ಎಂದು ರಾಘವೇಂದ್ರ ಸ್ವಾಮಿ ಸಾಮಾಜಿಕ ಸೇವಾ ಸಮಿತಿ ಕಾರ್ಯದರ್ಶಿ ಎನ್.ಎಸ್. ಹೆಗ್ಗೇರಿ ತಿಳಿಸಿದರು.ಪಟ್ಟಣದ ರಾಘವೇಂದ್ರ ಕಾಲೋನಿಯಲ್ಲಿನ ಬಾಬಾ ರಾಮದೇವ್ ಭವನದಲ್ಲಿ ರಾಘವೇಂದ್ರ ಸ್ವಾಮಿ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಪಡೆದ ಕಾಲನಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನೌಕರ ವರ್ಗದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಧ್ಯಾಪಕ ಡಾ. ಎಸ್.ಬಿ. ಚನ್ನಗೌಡ್ರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಜೆಗಳ ಕರ್ತವ್ಯ ಎಂಬ ವಿಷಯವನ್ನು ಕುರಿತು ಮಾತನಾಡುತ್ತಾ, ಪ್ರತಿಯೊಬ್ಬರೂ ಕೂಡ ಕೇವಲ ಭಾಷಣಗಳನ್ನು ಮಾಡಿದರೆ ಸಾಲದು. ದಾರ್ಶನಿಕರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಾವು ಕೂಡ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬಹುದು. ಇಲ್ಲಿ ಜೀವಿಸುವ ಪ್ರತಿಯೊಬ್ಬರ ಪಾತ್ರವೂ ಕೂಡ ಅತಿ ಮುಖ್ಯವಾಗಿದೆ. ಇಂದಿನ ಕಾಲದ ಕುಟುಂಬ ವ್ಯವಸ್ಥೆಯಲ್ಲಿ ಇದರ ಕೊಂಡಿ, ಕಳಚಿ ಹೋಗುತ್ತಾ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಮತ್ತೆ ನಾವು ಅರವಿನ ಬೀಜವನ್ನು ಬಿತ್ತುವ ಮೂಲಕ ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರವನ್ನು ಉಳಿಸಿ ಹೋಗುವಲ್ಲಿ ನಾವು ಜವಾಬ್ದಾರಿಯನ್ನು ಹೊರಬೇಕಾಗಿದೆ. ಅದು ಇಂದಿನಿಂದಲೇ ಪ್ರಾರಂಭವಾಗಬೇಕು ಅಂದಾಗ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ನಿವೇದಿತ ಟಿ.ಪಿ. ಮಾತನಾಡಿ, ಇಂದು ಎಲ್ಲಾ ರೀತಿಯಿಂದಲೂ ಪರಿಸರವು ಬಹಳಷ್ಟು ವಿಷಮ ಪರಿಸ್ಥಿತಿಯತ್ತ ಸಾಗುತ್ತಿದೆ. ಆದ ಕಾರಣ ಸಾಧ್ಯವಾದಷ್ಟು, ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಯುವಕರೊಂದಿಗೆ ನಾವು ನೀವೆಲ್ಲರೂ ಸೇರಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪಣತೊಡಬೇಕು. ಇನ್ನು ಮುಂದೆ ತಾವುಗಳು ಅಂಗಡಿಗೆ ಹೋದಾಗ ಹೆಚ್ಚು ಬಟ್ಟೆಯ ಕೈ ಚೀಲಗಳನ್ನು ಬಳಸುವತ್ತ ಗಮನಹರಿಸಿದರೆ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಪರಿಸರವನ್ನು ಮೊದಲು ಉತ್ತಮ ಪಡಿಸಿಕೊಂಡರೆ ನೆಮ್ಮದಿಯ ಬದುಕನ್ನು ಬಾಳಬಹುದು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವತ್ತ ನಮ್ಮ ಗಮನಹರಿಸೋಣ, ಇದರಿಂದ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಇದೆ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಪಡೆದ ಕಾಲನಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನೌಕರ ವರ್ಗದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಮತ್ತು ಆಗಮಿಸಿದ್ದ ಗಣ್ಯರಿಗೆ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ರಾಘವೇಂದ್ರ ಸ್ವಾಮಿ ಸಾಮಾಜಿಕ ಸೇವಾ ಸಮಿತಿ ಅಧ್ಯಕ್ಷ ಪರಮೇಶಪ್ಪ ಹಲವಾಗಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಡಾ. ವಿನಾಯಕ ನಾಡಿಗೇರ, ಪಪಂ ಮಾಜಿ ಅಧ್ಯಕ್ಷ ಗುರುಶಾಂತಪ್ಪ ಎತ್ತಿನಹಳ್ಳಿ, ಹೇಮಪ್ಪ ಅಂಗಡಿ, ರವಿ ಹುಲ್ಲತ್ತಿ, ನಾಗೇಂದ್ರಪ್ಪ ಕುಡಪಲಿ, ಗಜೇಂದ್ರ ಪಿ., ಬಸವರಾಜ್ ಬೆಲ್ಲದ, ಅಮೃತಪ್ಪ ತಡಗಣಿ, ಜಯಲಿಂಗಪ್ಪ ಗೂಲಣ್ಣನವರ, ಮಹೇಶಪ್ಪ ಮೊಗಲಿಶೆಟ್ಟರ, ಐ.ಬಿ. ಕಾಟೇನಹಳ್ಳಿ, ಕೆ.ಟಿ. ಪಾಟೀಲ, ನವೀನ ಜವಳಿ, ಮಲ್ಲೇಶಪ್ಪ ಕೊಡೇರ, ವಿ.ಎನ್. ಪಾಟೀಲ, ನಾಗರಾಜ ಪುರದ, ಚನ್ನಬಸಪ್ಪ ಚಕ್ರಸಾಲಿ, ವಸಂತ ಬಡಿಗೇರ, ರಾಜು ತಿಪ್ಪಕ್ಕಳವರ, ಸುರೇಶ ಮಾಯಾಚಾರಿ, ಎಚ್.ಎಸ್. ಅಂಗಡಿ, ಹೊಟ್ಟೆಗೌಡ್ರ, ವೆಂಕಟೇಶ ಅಳಲಗೇರಿ, ಪೂರ್ಣಿಮಾ ಕಾರಗಿ ಹಾಗೂ ರಾಘವೇಂದ್ರ ಸ್ವಾಮಿ ಸಾಮಾಜಿಕ ಸೇವಾ ಸಮಿತಿಯವರು ಇದ್ದರು.ಶಿಕ್ಷಕರಾದ ಬಸವರಾಜ ಸೊರಟೂರ, ಜಯಮ್ಮ ಹೆಗ್ಗೇರಿ, ಚಂದ್ರು ಅಳಲಗೇರಿ ನಿರ್ವಹಿಸಿದರು. ಶಿವಯೋಗಿ ಅಂಗಡಿ, ರಾಜು ಕುಬಸದ, ಶಶಿ ತಾಂದಳೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.