ಸಾರಾಂಶ
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಭಾಸ್ಕರ್ ಸಾಲಿಯಾನ್ ಮತ್ತು ಶಾಲಾ ಸಂಚಾಲಕ ಹರಿಂದ್ರ ಸುವರ್ಣ ಉಪಸ್ಥಿತಿಯಲ್ಲಿರಾಷ್ಟ್ರೀಯ ಸಂಸ್ಥೆಯಿಂದ ಬಂದ ಧ್ವಜ ಚೀಟಿಯನ್ನು ಶಾಲಾ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಬಿಡುಗಡೆ ಮಾಡಿದರು.
ಮೂಲ್ಕಿ: ಮೂಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಕಬ್, ಬುಲ್ ಬುಲ್, ಸ್ಕೌಟ್ಸ್,ಗೈಡ್ಸ್ ರೋವರ್, ರೇಂಜರ್ ಟೀಮ್‌ನಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ ಭಾರತ್ ಸ್ಕೌಟ್ ಗೈಡ್ ವಜ್ರ ಮಹೋತ್ಸವದ ಪ್ರಾರಂಭದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನ ದಿನಾಚರಣೆಯನ್ನು ಅಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಭಾಸ್ಕರ್ ಸಾಲಿಯಾನ್ ಮತ್ತು ಶಾಲಾ ಸಂಚಾಲಕ ಹರಿಂದ್ರ ಸುವರ್ಣ ಉಪಸ್ಥಿತಿಯಲ್ಲಿರಾಷ್ಟ್ರೀಯ ಸಂಸ್ಥೆಯಿಂದ ಬಂದ ಧ್ವಜ ಚೀಟಿಯನ್ನು ಶಾಲಾ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಬಿಡುಗಡೆ ಮಾಡಿದರು. ಜಯ ಸಿ. ಪೂಜಾರಿ,ರಿತೇಶ್ ಪೂಜಾರಿ, ರೂಪೇಶ್ ಅವರಿಗೆ ಅದನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಕೌಟ್ ಗೈಡ್ ವಜ್ರ ಮಹೋತ್ಸವದ ಮಹತ್ವವನ್ನು ಮುಖ್ಯ ಶಿಕ್ಷಕಿ ಕಬ್ ಮಾಸ್ಟರ್ ಗೀತಾ ಶೆಟ್ಟಿ ವಿವರಿಸಿದರು. ಗುರುಜ್ಯೋತಿ ವಿಭಾಗದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.