ಸಾರಾಂಶ
ಸೂಲಿಬೆಲೆ: ಹಿಂದು ಪಂಚಾಗದ ಆಚರಣೆಯಲ್ಲಿ ನಿತ್ಯವು ಒಂದೊಂದು ಹಬ್ಬ ಆಚರಣೆಗಳಿರುತ್ತೇವೆ ಇದನ್ನು ನಾವುಗಳು ಮುಂದುವರೆಸಿಕೊಂಡು ಹೋಗಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು. ಹೋಬಳಿಯ ಸ್ವಗ್ರಾಮ ಬೆಂಡಿಗಾನಹಳ್ಳಿಯಲ್ಲಿ ರಾಮದೇವರ ದೇಗುಲ ಪುನರ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನಿರ್ಮಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 50 ವರ್ಷಗಳ ಹಳೆಯ ಶ್ರೀರಾಮದೇವರ ದೇಗುಲ ಶಿಥಿಲಾವಸ್ಥೆಯಲ್ಲಿದ್ದು ಈ ಜಾಗದಲ್ಲಿ ಪುನರ್ ದೇಗುಲ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಆಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಶುಭ ಸಂದರ್ಭದಲ್ಲಿ ಬೆಂಡಿಗಾನಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಸದ ಬಚ್ಚೇಗೌಡರು ಅಡಿಗಲ್ಲು ಹಾಕಿದ್ದು, ಮರ್ಯಾದಾ ಪುರುಷನ ಆರಾಧನೆ ಮಾನವ ಜನ್ಮ ಪಾವನ ರಾಮಜನ್ಮ ಭೂಮಿಯಲ್ಲಿ ರಾಮನ ಮಂದಿರ ಲೋಕಾರ್ಪಣೆಯಾಗಿರುವುದು ನಮ್ಮ ಸುಕೃತ ಎಂದರು.
ರಾಮರ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಹೋಮ, ಹವನ, ವಿಶೇಷ ಅಲಂಕಾರ ಪೂಜೆ ಸೇವೆಗಳು ನೆರವೇರಿತು. ಈ ವೇಳೆ ಡಾ.ಚಂದ್ರೇಗೌಡ, ಬಿ.ವಿ.ಬೈರೇಗೌಡ, ಡೇರಿ ಮಾಜಿ ಅಧ್ಯಕ್ಷ ವೆಂಕಟೇಶಗೌಡರು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ರಾಮೇಗೌಡ,ಬೈರೇಗೌಡ,ಪ್ರಕಾಶಗೌಡ,ಗುತ್ತಿಗೆದಾರ ದೇವರಾಜಪ್ಪ, ಚಿಕ್ಕಹರಳಗೆರೆ ಜಗದೀಶ್, ಯುವ ಮುಖಂಡ ರುತಿಕ್‌ಗೌಡ ಇತರರಿದ್ದರು.(ಫೋಟೋ ಕ್ಯಾಫ್ಷನ್)ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿಯಲ್ಲಿ ರಾಮದೇವರ ದೇಗುಲ ಪುನರ್ ನಿರ್ಮಾಣಕ್ಕೆ ಅಡಿಗಲ್ಲು ನಿರ್ಮಿಸುವ ಕಾಮಗಾರಿಗೆ ಸಂಸದ ಬಚ್ಚೇಗೌಡ ಚಾಲನೆ ನೀಡಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಡಾ.ಚಂದ್ರೇಗೌಡ, ಬಿ.ವಿ.ಬೈರೇಗೌಡ, ಡೇರಿ ಮಾಜಿ ಅಧ್ಯಕ್ಷ ವೆಂಕಟೇಶಗೌಡ ಇತರರಿದ್ದರು.