ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟಕಲ್ಲು
ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಪುನಾರು ಸೂಡ ಮತ್ತು ಬೆಳ್ಮಣ್ ಹಾಗೂ ಆರ್‌ಎಸ್‌ಬಿ ಸಮುದಾಯ ಭವನ ಕಟ್ಟಡ ನಿರ್ಮಾಣ ಸಮಿತಿಗಳ ಆಶ್ರಯದಲ್ಲಿ ಬುಧವಾರ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ ನೆರವೇರಿತು.ವೇದಮೂರ್ತಿ ಶ್ರೀಕಾಂತ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಸ್ಥಳ ದಾನಿಗಳಾದ ಪ್ರೇಮಾ ಪ್ರಭು, ಕೃಷ್ಣ ಪ್ರಭು ದಂಪತಿ ಕಾರ್ಯಕ್ರಮ ನಡೆಸಿಕೊಟ್ಟರು. ಆರ್.ಎಸ್.ಬಿ. ಸಂಘ ಮಣಿಪಾಲ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಸೂಡ, ಅಧ್ಯಕ್ಷ ಉಮೇಶ್ ಪಂಡಿತ್, ಮಾಜಿ ಮೊಕ್ತೇಸರ ಶಶಿಧರ ವಾಗ್ಲೆ, ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ ಮತ್ತು ಕಾರ್ಯ ನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ, ನಿರ್ದೇಶಕರಾದ ಗಣಪತಿ ನಾಯಕ್, ರವೀಂದ್ರ ಪಾಟ್ಕರ್, ವಿಜೇತ್ ಕುಮಾರ್ ಹಾಗೂ ಆರ್‌ಎಸ್‌ಬಿ ಸಂಘ ಮಣಿಪಾಲದ ಉಪಾಧ್ಯಕ್ಷ ಚೇತನ್ ನಾಯಕ್ ಕಾರ್ಕಳ, ಕೋಶಾಧಿಕಾರಿ ಜಯರಾಮ ಪ್ರಭು ಉಡುಪಿ ಇನ್ನಿತರ ಗಣ್ಯರು ಹಾಜರಿದ್ದರು.ಗ್ರಾಮದ ಹಿರಿಯ ಮುಂದಾಳು ಸಂಜೀವ ಪ್ರಭು ಹಾಗೂ ಸಂಘದ ಸದಸ್ಯರು, ಕಟ್ಟಡ ನಿರ್ಮಾಣ ಸಮಿತಿ ಪದಾಧಿಕಾರಿಗಳು ಹಾಗೂ ಕೂಡುಕಟ್ಟಿನ ಸಮಾಜ ಬಾಂಧವರು ಹಾಜರಾಗಿದ್ದರು.