ಶಿರಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

| Published : Jul 16 2025, 12:45 AM IST

ಶಿರಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

೪೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿರಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮೀಸಲಿಟ್ಟ ಜಾಗದಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಅಂದಾಜು ೪೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿರಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮೀಸಲಿಟ್ಟ ಜಾಗದಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೮ ಲಕ್ಷ ರು. ಅನುದಾನ ಸರ್ಕಾರದಿಂದ ಮಂಜೂರು ಆಗಿದೆ. ೨೦ ಲಕ್ಷ ರು. ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆ ಮಾಡಲಾಗುವುದು. ಉಳಿದಂತೆ ಬೇರೆ ಅನುದಾನಗಳನ್ನು ಸೇರಿಸಿಕೊಂಡು ೪೫ ಲಕ್ಷ ರು. ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗಲಿದೆ ಎಂದರು.ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ವಿನೀತಾ ತಂಗಚ್ಚನ್, ಸದಸ್ಯ ಸಣ್ಣಿಜಾನ್, ಶಿರಾಡಿ ಗ್ರಾ.ಪಂ.ನಲ್ಲಿ ಈ ಹಿಂದೆ ಪಿಡಿಒ ಆಗಿದ್ದು ಪ್ರಸ್ತುತ ಉಳ್ಳಾಲ ತಾ.ಪಂ.ನಲ್ಲಿ ಸಹಾಯಕ ನಿರ್ದೇಶಕರಾಗಿರುವ ವೆಂಕಟೇಶ್, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಸುದರ್ಶನ ಶಿರಾಡಿ, ಶಶಿಧರ ಶಿರಾಡಿ, ಮಂಡಲ ಪಂಚಾಯಿತಿ ಮಾಜಿ ಸದಸ್ಯ ದಿವಾಕರ ಗೌಡ ಉದನೆ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ತಂಬಿ, ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ಪಿ.ಕೆ., ಗ್ರಾಮಸ್ಥರಾದ ಎನ್.ಜೆ.ದೇವಸ್ಯ, ಸಣ್ಣಿ ಅಗಸ್ಟಿನ್, ಸಾಬು ಆಚಾರಿ, ಕೆ.ಯು.ಜಾನ್, ಮನೋಜ್ ಜೋಯಿಸ್, ರಾಜೇಶ್ ಕೆ.ಎ., ಜಿನಿ ಜೇಕಬ್, ಸೆಬಾಸ್ಟಿನ್ ಶಿರಾಡಿ, ಜೋಯಿ ಒಡಂಬಳ್ಳಿ, ತೋಮಸ್ ಒಡಂಬಳ್ಳಿ, ಪಿ.ಎಂ.ಜೋನ್, ಜಾನ್ಸನ್ ಪಿ.ಸಿ., ಅಬ್ರಹಾಂ ಪಿ.ಪಿ., ವಿನೋದ್, ಗಣೇಶ್ ಡಿ.ಜೆ., ಸಿಬಿ ಕೆ.ಕೆ., ಸಿಜು ಕೆ.ಕೆ., ಸುರೇಂದ್ರನ್ ಕೆ.ಆರ್., ಕೆ.ವಿಜಯಕುಮಾರ್, ಬಾಬು ಏಲಿಯಾಸ್, ಪಿ.ಎಂ.ಮಾರ್ಕೋಸ್, ವಿಲಿಯಮ್ಸ್ ಶಿರಾಡಿ, ಸಂಜೀವಿನಿ ಒಕ್ಕೂಟದ ಕಲಾಸಣ್ಣಿ, ಆಲಿಸ್‌ಜೋಸ್, ಪ್ರಿಯಾ, ಬಿಂದುರೆಜಿ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಶಾರದಾ ವಂದಿಸಿದರು. ಸಿಬ್ಬಂದಿ ಏಲಿಯಾಸ್ ಕೆ.ಸಿ., ಸ್ಮಿತಾ, ವಿಜಯಾ, ತೋಮಸ್ ವಿ.ಎ., ಸುನೀಲ್ ಪಿ.ವಿ., ಗ್ರಂಥಾಲಯ ಮೇಲ್ವಿಚಾರಕಿ ರೇಖಾ ಮತ್ತಿತರರು ಸಹಕರಿಸಿದರು.