ಸಾರಾಂಶ
ಲಿಂಗಸುಗೂರು ತಾಲೂಕಿನ ರೋಡಲಬಂಡಾ(ವಿಕೆಪಿ) ನೂತನ ಶಾಲಾ ಕೊಠಡಿಗಳಿಗೆ ಕೊಪ್ಪಳ ರಾಯಚೂರು ವಿಭಾಗದ ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಾಪೂರ ಅಡಿಗಲ್ಲು ಪೂಜೆ ಸಲ್ಲಿಸಿದರು.
ಲಿಂಗಸುಗೂರು: ತಾಲೂಕಿನ ರೋಡಲಬಂಡಾ(ವಿಕೆಪಿ) ಸರ್ಕಾರಿ ಶಾಲೆಯ ಹೊಸ ಕೊಠಡಿಗಳಿಗೆ ಕೊಪ್ಪಳ ರಾಯಚೂರು ವಿಭಾಗದ ಎಂಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಾಪೂರ ಅಡಿಗಲ್ಲು ಪೂಜೆ ಸಲ್ಲಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ನಮ್ಮ ಸಕಾ೯ರ ನಾನಾ ಯೋಜನೆಗಳ ಜೊತೆಗೆ ಉತ್ತಮ ಶಾಲಾ ಕೊಠಡಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅದರಂತೆ ಕೆಕೆಆರ್‌ಡಿಬಿ ಯೋಜನೆಯಲ್ಲಿ ರೋಡಲಬಂಡಾ(ವಿಕೆಪಿ) ಶಾಲೆ ಕೊಠಡಿ ನೀಡಲಾಗಿದೆ. ಕುಡಿಯುವ ನೀರು, ಶೌಚಾಲಯ, ಸರ್ಕರದಿಂದ ಅನುದಾನ ನೀಡಲು ಪ್ರಯತ್ನಿಸುವೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪ್ರಯತ್ನ ಮಾಡಬೇಕು. ಇದರಿಂದ ಮಕ್ಕಳು ವ್ಯಕ್ತಿತ್ವ ಹಾಗೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು. ಈ ವೇಳೆ ಮುಖ್ಯಗುರುಗಳು, ಸಹ ಶಿಕ್ಷಕರು, ಅಧಿಕಾರಿಗಳು, ಪಿಡಿಒ, ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.