ಗುಳೇದಗುಡ್ಡ: ಬಾದಾಮಿ ಮತ್ತು ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿ 4 ಜನ ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಗುಳೇದಗುಡ್ಡ, ಬಾದಾಮಿ ಮತ್ತು ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿ 4 ಜನ ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ಪರಬಾನಿ ಜಿಲ್ಲೆಯ ಜಿಂತೂರ ತಾಲೂಕಿನ ಬೂರಿ ಮಂಗರೂಲ ತಾಂಡಾದ ಶಂಕರ ಹನುಮಂತ ಪವಾರ (20), ಅಭಿ ಶಿಖಾಮಣಿ ಬೋಸ್ಲೆ (19), ಲಕ್ಷ್ಮೀ (ಅಶ್ವಿನಿ) ಹನುಮಂತ ಬೋಸ್ಲೆ (40), ಮಮತಾ (ಅಶ್ವಿನಿ) ತತೇಶ ಬೋಸ್ಲೆ (ಪವಾರ) (21) ಬಂಧಿತರು. ಕರಣ್‌ ಶೇಖಪ್ಪ ಪವಾರ (20) ಪರಾರಿಯಾದ ವ್ಯಕ್ತಿ. ಆರೋಪಿಗಳು ಕಟ್ಟು ಕಟಾವು ಗ್ಯಾಂಗ್‌ನೊಂದಿಗೆ ಬಂದು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ ಗುಳೇದಗುಡ್ಡ ಠಾಣೆ ವ್ಯಾಪ್ತಿಯ 3, ರೋಣ ಪೊಲೀಸ್ ಠಾಣೆ ವ್ಯಾಪ್ತಿಯ 1 ಪ್ರಕರಣ ಸೇರಿ ಸಂಬಂಧಿಸಿದಂತೆ ₹6,08,000 ಮೌಲ್ಯದ 76 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧಿಕ್ಷಕರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಡಿಎಸ್ಪಿ, ಸಿಪಿಐ ಬದಾಮಿ, ಸಿಪಿಐ ಹುನಗುಂದ ಹಾಗೂ ಪೊಲೀಸ್‌ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಪಿಎಸೈ ಸಿದ್ದಣ್ಣ ಯಡಹಳ್ಳಿ ತಿಳಿಸಿದ್ದಾರೆ.