ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ನಾಯಕತ್ವಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾತ್ಮಗಾಂಧೀಜಿ ಒಂದು ಉದಾಹರಣೆ ಆಗಿ ನಿಲ್ಲುತ್ತಾರೆ ಎಂದು ಲೇಖಕ ಡಾ. ವಿಕ್ರಮ್ ಸಂಪತ್ ಅಭಿಪ್ರಾಯಪಟ್ಟರು.ನಗರದಲ್ಲಿ ಲಿಟರರಿ ಫೋರಂ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿ- ಲೀಡ್ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯಂ ಅವರ ಪವರ್ ವಿತ್ ಇನ್‌ದ ಲೀಡರ್ ಶಿಪ್‌ಲೆಜೆನ್ಸಿ ಆಫ್ ನರೇಂದ್ರಮೋದಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಾಲ್ವಡಿ ಮತ್ತು ಗಾಂಧೀಜಿ ಅವರ ನಾಯಕತ್ವ ಇಡೀ ಜಗತ್ತಿಗೆ ಪ್ರೇರಣೆಯಾಗಿದೆ. ಈ ಕೃತಿಯಲ್ಲಿ ಉತ್ತಮ ನಾಯಕತ್ವಕ್ಕೆ ಏನೆಲ್ಲಾ ಬೇಕು ಎಂಬ ಅಂಶವನ್ನು ಒಳಗೊಂಡಿದೆ. ಭಾರತೀಯ ನಾಯಕತ್ವದ ವ್ಯಾಖ್ಯಾನ ಹೇಗಿದೆ ಎಂಬುದರ ಬಗ್ಗೆ ದೃಷ್ಟಾಂತದ ದಾಖಲಿಸಲಾಗಿದೆ. ಇದು ಮೋದಿ ಅವರ ಜೀವನ ಚರಿತ್ರೆ ಅಲ್ಲ. ಮುಖಪುಟ ನೋಡಿ ಓದುಗರ ತೀರ್ಮಾನಕ್ಕೆ ಬರಬಾರದು ಎಂದರು.
ಕಳೆದ 10 ವರ್ಷದಲ್ಲಿ ಹೊರಗಿನವರು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಒಲೆ ಹೋಗಿ ಗ್ಯಾಸ್ ಬಂದಿದೆ. ಎಲ್ಲರ ಮನೆಗೂ ವಿದ್ಯುತ್ ಇದೆ. ಬಯಲು ಶೌಚಾಲಯಕ್ಕೆ ಹೋಗುವುದು ತಪ್ಪಿದೆ. ಭಾರತ ಈ ಬದಲಾವಣೆ ಹಿಂದೆ ನರೇಂದ್ರ ಮೋದಿ ಅವರ ಶ್ರಮ ಎದ್ದು ಕಾಣುತ್ತದೆ ಎಂದರು.ಬಳಿಕ ನಡೆದ ಸಂವಾದದಲ್ಲಿ ವಿ-ಲೀಡ್ ಸಂಸ್ಥಾಪಕ ಬಾಲಸುಬ್ರಮಣ್ಯಂ ಮಾತನಾಡಿ, ನಾಯಕನಾದವನಿಗೆ ಹಿಂಬಾಲಕರು ಇರಬೇಕೆಂಬ ಭಾವನೆ ತಪ್ಪು. ಜನರನ್ನು ಹತ್ತಿರದಿಂದ ಅರ್ಥ ಮಾಡಿಕೊಳ್ಳುವುದು, ಅವರ ಸಂಪರ್ಕ ಸಾಧಿಸುವುದು ನಾಯಕತ್ವದ ನಿಜವಾದ ಗುಣ. ಭಗವದ್ಗೀತಾದಲ್ಲಿ ಕೃಷ್ಣ ನಾಯಕತ್ವ ಪಾತ್ರ ನಿಭಾಯಿಸಿದ. ಇಂದು ಜನರು ಮಹನೀಯರ ಜಯಂತಿ ಮಾಡಿ ಸುಮ್ಮನಾಗುತ್ತಾರೆ. ಆದರೆ, ಯಾರೋ ಅವರ ತತ್ವಸಿದ್ದಾಂತವನ್ನು ಅನುಸರಿಸುವುದಿಲ್ಲ ಎಂದರು.
ಪಂಚತಂತ್ರ, ಮಹಾಭಾರತ, ರಾಮಾಯಣ ಎಲ್ಲದರಲ್ಲೂ ನಾಯಕತ್ವದ ಬಗ್ಗೆ ಕಲಿಯುವ ಸಾಕಷ್ಟು ವಿಚಾರಗಳಿವೆ. ಭಾರತೀಯ ನಾಯಕತ್ವ ಜಾಗತಿಕ ಮಟ್ಟದಲ್ಲಿ ತಿಳಿಯಬೇಕೆಂಬ ಉದ್ದೇಶದಿಂದ ನಾನು ಈ ಪುಸ್ತಕವನ್ನು ಬರೆದೆ. ಇದೊಂದು ಅಕಾಡೆಮಿಕ್ ಬುಕ್. ಇದರಲ್ಲಿ ಭಾರತೀಯ ನಾಯಕತ್ವದ ದರ್ಶನ ಆಗುತ್ತದೆ. ಸಕಾರಾತ್ಮಕ ನಾಯಕತ್ವ ಗುಣವನ್ನು ಜಗತ್ತು ತಿಳಿಯಬೇಕು ಎಂಬ ಉದ್ದೇಶ ನನ್ನದು. ಶಕ್ತಿಯುತ ನಾಯಕತ್ವ ಏನೆಲ್ಲಾ ಬೇಡುತ್ತದೆ ಎಂಬ ಅಂಶವನ್ನು ಇಲ್ಲಿ ವಿವರಿಸಿದ್ದೇನೆ ಎಂದರು.ದೀಪ್ತಿ ನವರತ್ನ ಸಂವಾದ ನಡೆಸಿಕೊಟ್ಟರು. ಮೈಸೂರು ಲಿಟರರಿ ಪೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಇದ್ದರು.