ಸಾರಾಂಶ
ಬಾಗಲಕೋಟೆ: ಸಂಬಂಧಿಯ 4 ವರ್ಷದ ಮಗನನ್ನೇ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಬಾಗಲಕೋಟೆ: ಸಂಬಂಧಿಯ 4 ವರ್ಷದ ಮಗನನ್ನೇ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮಧು ಮಾರುತಿ ವಾಲಿಕಾರ (4) ಕೊಲೆಯಾದ ಮಗು. ಭೀಮಪ್ಪ ಹಣಮಂತ ವಾಲಿಕಾರ ಕೊಲೆ ಆರೋಪಿ. ಆರೋಪಿ ಹಣಮಂತ ಹಾಗೂ ಮಗುವಿನ ತಂದೆ ಮಾರು ವಾಲಿಕಾರ ಅಣ್ಣತಮ್ಮಂದಿರ ಮಕ್ಕಳು. ಯಾವುದೋ ವಿಷಯದಲ್ಲಿ ಇಬ್ಬರ ಮಧ್ಯೆ ಹಗೆತನ ಇತ್ತು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮಾರುತಿಯ ಮಗ ಮಧು ಅಂಗನವಾಡಿಗೆ ಹೊರಟಿದ್ದಾಗ ಭಿಮಪ್ಪ ಮಗುವನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಸಿದ್ದಾರ್ಥ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.